ಅಭಿಷೇಕ್ ಶರ್ಮಾ
(ಪಿಟಿಐ ಚಿತ್ರ)
ಹೈದರಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಎಡಗೈ ಸ್ಫೋಟಕ ಬ್ಯಾಟರ್ ಅಭಿಷೇಕ್ ಶರ್ಮಾ, ಚೊಚ್ಚಲ ಶತಕದ ಸಾಧನೆ ಮಾಡಿದ್ದಾರೆ.
ಶನಿವಾರ ಪಂಜಾಬ್ ಕಿಂಗ್ಸ್ ಎದುರು ಶತಕದ ಮೈಲಿಗಲ್ಲು ತಲುಪಿದ ತಕ್ಷಣ ಪ್ಯಾಂಟ್ ಜೇಬಿನಿಂದ ಚೀಟಿಯನ್ನು ತೋರಿಸಿ ಸಂಭ್ರಮಿಸಿದ್ದಾರೆ. ಅಭಿಷೇಕ್ ಶರ್ಮಾ ಅವರ ವಿಶಿಷ್ಟ ರೀತಿಯ ಸಂಭ್ರಮ ಎಲ್ಲರಲ್ಲೂ ಕುತೂಹಲ ಮೂಡಿಸಿತ್ತು.
ಏನಿದರ ರಹಸ್ಯ?
ಚೀಟಿಯಲ್ಲಿ 'ದಿಸ್ ಒನ್ ಫಾರ್ ಆರೆಂಜ್ ಆರ್ಮಿ' (ಇದು ಆರೆಂಜ್ ಆರ್ಮಿಗಾಗಿ) ಎಂದು ಬರೆಯಲಾಗಿತ್ತು. ಆ ಮೂಲಕ ತವರಿನ ಅಭಿಮಾನಿಗಳ ಪ್ರೀತಿಗೆ ಪಾತ್ರರಾಗಿದ್ದಾರೆ.
ಅಭಿಷೇಕ್ ಸ್ಫೋಟಕದ ಶತಕದ ನೆರವಿನಿಂದ ಪಂಜಾಬ್ ಕಿಂಗ್ಸ್ ಒಡ್ಡಿದ 246 ರನ್‌ಗಳ ಗುರಿಯನ್ನು ಹೈದರಾಬಾದ್ 18.3 ಓವರ್‌ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ ಬೆನ್ನಟ್ಟಿತು.
ಅಭಿಷೇಖ್ 55 ಎಸೆತಗಳಲ್ಲಿ 10 ಸಿಕ್ಸರ್ ಹಾಗೂ 14 ಬೌಂಡರಿಗಳ ನೆರವಿನಿಂದ 141 ರನ್ ಗಳಿಸಿ ಅಬ್ಬರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.