ADVERTISEMENT

IPL 2025 Final: ಆರ್‌ಸಿಬಿಯ ಸ್ಟಾರ್ ಆಟಗಾರ ಅಲಭ್ಯ?: ವರದಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಜೂನ್ 2025, 8:57 IST
Last Updated 3 ಜೂನ್ 2025, 8:57 IST
<div class="paragraphs"><p>ಆರ್‌ಸಿಬಿ</p></div>

ಆರ್‌ಸಿಬಿ

   

(ಪಿಟಿಐ ಚಿತ್ರ)

ಅಹಮದಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 18ನೇ ಆವೃತ್ತಿಯ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಇಂದು (ಮಂಗಳವಾರ) ಅಹಮದಾಬಾದ್‌ನಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪಂಜಾಬ್ ಕಿಂಗ್ಸ್ ತಂಡದ ಸವಾಲನ್ನು ಎದುರಿಸುತ್ತಿದೆ.

ADVERTISEMENT

ಈ ಮಧ್ಯೆ ಫೈನಲ್‌ಗೆ ಸಿದ್ಧತೆ ನಡೆಸುತ್ತಿರುವ ಆ‌ರ್‌ಸಿಬಿಗೆ ಸ್ಟಾರ್ ಆಟಗಾರನ ಅಲಭ್ಯತೆ ಕಾಡಲಿದೆ ಎಂದು ವರದಿಯಾಗಿದೆ.

'ಇಎಸ್‌ಪಿಎನ್ ಕ್ರಿಕ್‌ಇನ್ಫೋ' ವರದಿ ಪ್ರಕಾರ, ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಫಿಲ್ ಸಾಲ್ಟ್, ಫೈನಲ್ ಪಂದ್ಯದಲ್ಲಿ ಆಡುವುದು ಅನುಮಾನವೆನಿಸಿದೆ.

ಇದಕ್ಕೆ ಮತ್ತಷ್ಟು ಪುಷ್ಠಿ ಕೊಡುವಂತೆ ಆರ್‌ಸಿಬಿಯ ಅಭ್ಯಾಸ ಅವಧಿಯಲ್ಲೂ ಸಾಲ್ಟ್ ತಂಡದ ಆಟಗಾರರೊಂದಿಗೆ ಕಾಣಿಸಿಕೊಂಡಿಲ್ಲ.

ಒಂದು ವೇಳೆ ಸಾಲ್ಟ್ ಅಲಭ್ಯರಾದರೆ ಆರ್‌ಸಿಬಿಗೆ ಹಿನ್ನಡೆ ಎದುರಾಗುವ ಭೀತಿ ಕಾಡುತ್ತಿದೆ.

ಫಿಲ್ ಸಾಲ್ಟ್ ಅಹಮದಾಬಾದ್‌ನಲ್ಲಿ ಇದ್ದಾರೆಯೇ ಅಥವಾ ತವರಿಗೆ ಮರಳಿದ್ದಾರೆಯೇ ಎಂಬುದರ ಕುರಿತು ಖಚಿತ ಮಾಹಿತಿ ಬಂದಿಲ್ಲ. ಅಲ್ಲದೆ ಸಾಲ್ಟ್ ಅಲಭ್ಯತೆಯ ಕುರಿತು ಆರ್‌ಸಿಬಿ ಮ್ಯಾನೇಜ್‌ಮೆಂಟ್ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಐಪಿಎಲ್‌ನಲ್ಲಿ ಆರ್‌ಸಿಬಿ ಹಾಗೂ ಪಂಜಾಬ್ ಇದುವರೆಗೆ ಟ್ರೋಫಿ ಗೆದ್ದಿಲ್ಲ. ಹಾಗಾಗಿ ಯಾರೇ ಗೆದ್ದರೂ ನೂತನ ದಾಖಲೆ ಸೃಷ್ಟಿಯಾಗಲಿದೆ.

ಮೊದಲ ಕ್ವಾಲಿಫೈಯರ್‌ನಲ್ಲಿ ಪಂಜಾಬ್ ವಿರುದ್ಧವೇ ಎಂಟು ವಿಕೆಟ್ ಅಂತರದ ಗೆಲುವು ಸಾಧಿಸಿದ್ದ ಆರ್‌ಸಿಬಿ ಫೈನಲ್‌ಗೆ ಲಗ್ಗೆ ಇಟ್ಟಿತ್ತು. ಸಾಲ್ಟ್ 27 ಎಸೆತಗಳಲ್ಲಿ ಆರು ಬೌಂಡರಿ ಹಾಗೂ ಮೂರು ಸಿಕ್ಸರ್ ನೆರವಿನಿಂದ 56 ರನ್ ಗಳಿಸಿ ಅಜೇಯರಾಗುಳಿದರು.

ಮತ್ತೊಂದೆಡೆ ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಐದು ವಿಕೆಟ್ ಅಂತರದ ಜಯ ಗಳಿಸಿದ್ದ ಪಂಜಾಬ್ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.