ಶುಭಮನ್ ಗಿಲ್, ಹಾರ್ದಿಕ್ ಪಾಂಡ್ಯ
(ಪಿಟಿಐ ಚಿತ್ರ)
ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಗುಜರಾತ್ ಟೈಟನ್ಸ್ ತಂಡದ ನಾಯಕ ಶುಭಮನ್ ಗಿಲ್ ಹಾಗೂ ಮುಂಬೈ ಇಂಡಿಯನ್ಸ್ ಕಪ್ತಾನ ಹಾರ್ದಿಕ್ ಪಾಂಡ್ಯ ನಡುವೆ ಎಲ್ಲವೂ ಸರಿಯಿಲ್ಲ ಎಂಬುದರ ಕುರಿತು ವರದಿಯಾಗಿತ್ತು.
ಈ ಸಂಬಂದ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೊ ವ್ಯಾಪಕವಾಗಿ ಹರಿದಾಡಿವೆ. ಆದರೆ ಈ ಎಲ್ಲ ಊಹಾಪೋಹಗಳಿಗೆ ಸ್ವತಃ ಗಿಲ್ ಹಾಗೂ ಹಾರ್ದಿಕ್ ಅವರೇ ತೆರೆ ಎಳೆದಿದ್ದಾರೆ.
'ಪ್ರೀತಿ ಹೊರತಾಗಿ ಬೇರೇನೂ ಇಲ್ಲ. ಇಂಟರ್‌ನೆಟ್‌ನಲ್ಲಿ ನೀವು ನೋಡುವ ಎಲ್ಲವನ್ನು ನಂಬಬೇಡಿ' ಎಂಬ ಅಡಿಬರಹದೊಂದಿಗೆ ಹಾರ್ದಿಕ್ ಅವರೊಂದಿಗಿನ ಚಿತ್ರವನ್ನು ಗಿಲ್ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ.
ಇದನ್ನು ರಿಶೇರ್ ಮಾಡಿರುವ ಹಾರ್ದಿಕ್, 'ಯಾವತ್ತೂ, ಶುಭು ಬೇಬಿ' ಎಂದು ಹೃದಯದ ಇಮೋಜಿ ಹಂಚಿದ್ದಾರೆ.
ಶುಕ್ರವಾರ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಗುಜರಾತ್ ತಂಡವನ್ನು 20 ರನ್ ಅಂತರದಿಂದ ಮಣಿಸಿದ್ದ ಮುಂಬೈ ಎರಡನೇ ಕ್ವಾಲಿಫೈಯರ್‌ಗೆ ಪ್ರವೇಶಿಸಿತ್ತು.
ಆದರೆ ಹಾರ್ದಿಕ್ ಹಾಗೂ ಗಿಲ್ ನಡುವಣ ವರ್ತನೆಯು ಇಬ್ಬರ ಮಧ್ಯೆ ಎಲ್ಲವೂ ಸರಿಯಾಗಿಲ್ಲ ಎಂಬ ಊಹಾಪೋಹಾಗಳಿಗೆ ಕಾರಣವಾಗಿತ್ತು.
2023ರಲ್ಲಿ ಹಾರ್ದಿಕ್ ನಾಯಕತ್ವದಲ್ಲೇ ಗುಜರಾತ್ ಟೈಟನ್ಸ್ ಚೊಚ್ಚಲ ಬಾರಿಗೆ ಐಪಿಎಲ್‌ನಲ್ಲಿ ಕಿರೀಟ ಮುಡಿಗೇರಿಸಿಕೊಂಡಿತ್ತು. ಶುಭಮನ್ ಗಿಲ್ ಸಹ ಟ್ರೋಫಿ ಗೆದ್ದ ಗುಜರಾತ್ ತಂಡದ ಸದಸ್ಯರಾಗಿದ್ದರು.
ಬಳಿಕ ಗುಜರಾತ್ ತಂಡವನ್ನು ತೊರೆದಿದ್ದ ಹಾರ್ದಿಕ್, ಮುಂಬೈ ತಂಡಕ್ಕೆ ಮರಳಿದ್ದರು. ಮತ್ತೊಂದೆಡೆ ಗಿಲ್ ಅವರು ಗುಜರಾತ್ ತಂಡದ ನಾಯಕತ್ವ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.