ಮುಂಬೈ ಇಂಡಿಯನ್ಸ್ ತಂಡದ ರಿಯಾನ್ ರಿಕೆಲ್ಟನ್ ಮತ್ತು ಸೂರ್ಯಕುಮಾರ್ ಯಾದವ್
ಪಿಟಿಐ ಚಿತ್ರಗಳು
ಮುಂಬೈ: ಮುಂಬೈ ಇಂಡಿಯನ್ಸ್ ತಂಡವು ಐಪಿಎಲ್ ಟೂರ್ನಿಯಲ್ಲಿ ಸತತ ಐದನೇ ಜಯ ದಾಖಲಿಸಿತು.
ವಾಂಖೆಡೆ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಮುಂಬೈ 54 ರನ್‌ಗಳಿಂದ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಜಯಿಸಿತು. ವಿಲ್ ಜ್ಯಾಕ್ಸ್ (29; 21ಎ, 4X3, 6X1 ಮತ್ತು 18ಕ್ಕೆ2) ಆಲ್‌ರೌಂಡ್ ಆಟವಾಡಿದ್ದು ಮುಂಬೈ ಜಯದಲ್ಲಿ ಪ್ರಮುಖ ಪಾತ್ರ ವಹಿಸಿತು. 216 ರನ್‌ಗಳ ಗುರಿ ಬೆನ್ನಟ್ಟಿದ್ದ ಲಖನೌ ತಂಡದ ಸಿಡಿಲಬ್ಬರದ ಶೈಲಿಯ ಬ್ಯಾಟರ್ ನಿಕೊಲಸ್ ಪೂರನ್ (27; 15ಎ, 4X1, 6X3) ಮತ್ತು ರಿಷಭ್ ಪಂತ್ (4 ರನ್) ಅವರ ವಿಕೆಟ್‌ಗಳನ್ನು ವಿಲ್ ಜ್ಯಾಕ್ಸ್ ಗಳಿಸಿದರು. ಇದರಿಂದಾಗಿ ಮುಂಬೈ ಜಯದ ಹಾದಿ ಸುಗಮವಾಯಿತು.
ಟಾಸ್ ಗೆದ್ದ ಲಖನೌ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ರಿಯಾನ್ ರಿಕೆಲ್ಟನ್ (58; 32ಎ, 4X6, 6X4) ಮತ್ತು ಸೂರ್ಯಕುಮಾರ್ ಯಾದವ್ (54; 28ಎ, 4X4, 6X4) ಅವರು ಅರ್ಧಶತಕ ಗಳಿಸಿದರು. ಇದರಿಂದಾಗಿ ಮುಂಬೈ ತಂಡವು 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 215 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಲಖನೌ ತಂಡವು 20 ಓವರ್‌ಗಳಲ್ಲಿ 161 ರನ್ ಗಳಿಸಿ ಎಲ್ಲ ವಿಕೆಟ್ ಕಳೆದುಕೊಂಡಿತು. ಎಡಗೈ ವೇಗಿ ಟ್ರೆಂಟ್ ಬೌಲ್ಟ್ (20ಕ್ಕೆ3) ಮತ್ತು ಜಸ್‌ಪ್ರೀತ್ ಬೂಮ್ರಾ (22ಕ್ಕೆ4) ಅವರ ದಾಳಿಯ ಮುಂದೆ ಲಖನೌ ಕುಸಿಯಿತು.
ಲಖನೌ ತಂಡದ ಆರಂಭಿಕ ಬ್ಯಾಟರ್ ಮಿಚೆಲ್ ಮಾರ್ಷ್ (34; 24ಎ) ಮತ್ತು ಆಯುಷ್ ಬಡೋಣಿ (35; 22ಎ) ಅವರ ಬೌಲರ್‌ಗಳಿಗೆ ಒಂದಿಷ್ಟು ಪ್ರತಿರೋಧ ತೋರಿಸಿದರು. ಆದರೆ ದೊಡ್ಡ ಮೊತ್ತದ ಗುರಿ ಮುಟ್ಟಲು ಸಾಧ್ಯವಾಗಲಿಲ್ಲ.
ಲಖನೌ ತಂಡದ ವೇಗಿ ಮಯಂಕ್ ಯಾದವ್ ಅವರು ಕೂಡ 2 ವಿಕೆಟ್ ಗಳಿಸಿದರು. ಅವರು ಈಚೆಗಷ್ಟೇ ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿದ್ದಾರೆ.
ಸಂಕ್ಷಿಪ್ತ ಸ್ಕೋರು: ಮುಂಬೈ: 20 ಓವರ್‌ಗಳಲ್ಲಿ 7ಕ್ಕೆ215 (ರಿಆನ್ ರಿಕೆಲ್ಟನ್ 58, ವಿಲ್ ಜ್ಯಾಕ್ಸ್ 29, ಸೂರ್ಯಕುಮಾರ್ ಯಾದವ್ 54, ನಮನ್ ಧೀರ್ ಔಟಾಗದೇ 25, ಕಾರ್ಬಿನ್ ಬಾಷ್ 20, ಮಯಂಕ್ ಯಾದವ್ 40ಕ್ಕೆ2, ಆವೇಶ್ ಖಾನ್ 42ಕ್ಕೆ2) ಲಖನೌ ಸೂಪರ್‌ಜೈಂಟ್ಸ್: 20 ಓವರ್‌ಗಳಲ್ಲಿ 161 (ಮಿಚೆಲ್ ಮಾರ್ಷ್ 34, ನಿಕೊಲಸ್ ಪೂರನ್ 27, ಆಯುಷ್ ಬಡೋನಿ 35, ಡೇವಿಡ್ ಮಿಲ್ಲರ್ 24, ಟ್ರೆಂಟ್ ಬೌಲ್ಟ್ 20ಕ್ಕೆ3, ಜಸ್‌ಪ್ರೀತ್ ಬೂಮ್ರಾ 22ಕ್ಕೆ4, ವಿಲ್ ಜ್ಯಾಕ್ಸ್ 18ಕ್ಕೆ2)
ಫಲಿತಾಂಶ: ಮುಂಬೈ ಇಂಡಿಯನ್ಸ್ ತಂಡಕ್ಕೆ 54 ರನ್ ಜಯ.
ಪಂದ್ಯದ ಆಟಗಾರ: ವಿಲ್ ಜ್ಯಾಕ್ಸ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.