ADVERTISEMENT

IPL 2025 | ಮುಂದಿನ ಐಪಿಎಲ್ ಆಡುತ್ತಾರೆಯೇ? ಧೋನಿ ಉತ್ತರ ಹೀಗಿತ್ತು...

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಮೇ 2025, 7:06 IST
Last Updated 1 ಮೇ 2025, 7:06 IST
<div class="paragraphs"><p>ಮಹೇಂದ್ರ ಸಿಂಗ್ ಧೋನಿ</p></div>

ಮಹೇಂದ್ರ ಸಿಂಗ್ ಧೋನಿ

   

(ಪಿಟಿಐ ಚಿತ್ರ)

ಚೆನ್ನೈ: 2025ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್‌ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನೀಡಿರುವ ಚೆನ್ನೈ ಸೂಪರ್ ಕಿಂಗ್ಸ್ ಪ್ಲೇ-ಆಫ್‌ಗೆ ಪ್ರವೇಶಿಸುವಲ್ಲಿ ವಿಫಲವಾಗಿದೆ.

ADVERTISEMENT

ಇದರೊಂದಿಗೆ ನಾಯಕ ಮಹೇಂದ್ರ ಸಿಂಗ್ ಧೋನಿ ಮುಂದಿನ ವರ್ಷವೂ ಆಡುತ್ತಾರೆಯೋ ಅಥವಾ ಈ ಸಾಲಿನ ಬಳಿಕ ನಿವೃತ್ತಿ ಘೋಷಿಸಲಿದ್ದಾರೆಯೇ ಎಂಬುದರ ಕುರಿತು ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ.

ಈ ಕುರಿತು ಬುಧವಾರ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದ ಆರಂಭಕ್ಕೂ ಮುನ್ನ ಎದುರಾದ ಪ್ರಶ್ನೆಗೆ 43 ವರ್ಷದ ಧೋನಿ ಬಹಳ ಬುದ್ಧಿವಂತಿಕೆಯಿಂದ ಉತ್ತರಿಸಿದ್ದಾರೆ.

ಚೆಪಾಕ್‌ನಲ್ಲಿ ಟಾಸ್ ವೇಳೆ ಅಭಿಮಾನಿಗಳಿಂದ ಭಾರಿ ಬೆಂಬಲ ವ್ಯಕ್ತವಾಯಿತು. ಈ ವೇಳೆ ಡ್ಯಾನಿ ಮೊರಿಸನ್, 'ಇದರ ಅರ್ಥ ಮುಂದಿನ ವರ್ಷವೂ ನೀವು ಬರುತ್ತಿದ್ದೀರಾ' ಎಂದು ಧೋನಿ ಅವರಿಗೆ ಪ್ರಶ್ನಿಸಿದರು.

ಇದಕ್ಕೆ ಧೋನಿ, 'ನಾನು ಮುಂದಿನ ಪಂದ್ಯ ಆಡುತ್ತೇನೆಯೋ ಎಂಬುದು ಗೊತ್ತಿಲ್ಲ' ಎಂದು ನಗುತ್ತಲೇ ಉತ್ತರಿಸಿದ್ದಾರೆ.

ಇದರೊಂದಿಗೆ ಧೋನಿ ಐಪಿಎಲ್ ಭವಿಷ್ಯದ ಸಂಬಂಧ ಕುತೂಹಲ ಮುಂದುವರಿದಿದೆ.

ಐಪಿಎಲ್‌ನ ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದಾಗಿರುವ ಸಿಎಸ್‌ಕೆ, ಧೋನಿ ನಾಯಕತ್ವದಲ್ಲಿ ಐದು ಬಾರಿ ಟ್ರೋಫಿ ಎತ್ತಿ ಹಿಡಿದಿದೆ. ಆದರೆ ಕಳೆದೆರಡು ಆವೃತ್ತಿಗಳಲ್ಲಿ ಪ್ಲೇ-ಆಫ್ ಪ್ರವೇಶಿಸುವಲ್ಲಿ ವಿಫಲವಾಗಿದೆ.

ಪ್ರಸಕ್ತ ಸಾಲಿನಲ್ಲಿ ಋತುರಾಜ್ ಗಾಯಕವಾಡ್ ಗಾಯಗೊಂಡಿದ್ದರಿಂದ ಧೋನಿ ಮತ್ತೆ ಕಪ್ತಾನಗಿರಿ ವಹಿಸಿದ್ದರು. ಆದರೂ ಸಿಎಸ್‌ಕೆ ಅದೃಷ್ಟ ಬದಲಾಗಲಿಲ್ಲ. ಚೆಪಾಕ್‌ನಲ್ಲಿ ಸತತ ಐದನೇ ಸೋಲಿನ ಮುಖಭಂಗಕ್ಕೊಳಗಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.