ADVERTISEMENT

IPL 2025 | PBKS vs MI: ನಿಧಾನಗತಿ ಬೌಲಿಂಗ್; ಅಯ್ಯರ್, ಪಾಂಡ್ಯಗೆ ದಂಡ

ಪಿಟಿಐ
Published 2 ಜೂನ್ 2025, 5:26 IST
Last Updated 2 ಜೂನ್ 2025, 5:26 IST
<div class="paragraphs"><p>ಹಾರ್ದಿಕ್ ಪಾಂಡ್ಯ, ಶ್ರೇಯಸ್ ಅಯ್ಯರ್</p></div>

ಹಾರ್ದಿಕ್ ಪಾಂಡ್ಯ, ಶ್ರೇಯಸ್ ಅಯ್ಯರ್

   

(ಚಿತ್ರ ಕೃಪೆ: X/@IPL)

ಅಹಮದಾಬಾದ್‌: ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟಿ20 ಕ್ರಿಕೆಟ್‌ ಟೂರ್ನಿಯ ಕ್ವಾಲಿಫೈಯರ್‌ ಪಂದ್ಯದಲ್ಲಿ ನಿಧಾನಗತಿಯ ಓವರ್ ರೇಟ್‌ ಕಾರಣಕ್ಕಾಗಿ ಪಂಜಾಬ್‌ ಕಿಂಗ್ಸ್‌ ನಾಯಕ ಶ್ರೇಯಸ್‌ ಅಯ್ಯರ್‌ ಮತ್ತು ಮುಂಬೈ ಇಂಡಿಯನ್ಸ್‌ ನಾಯಕ ಹಾರ್ದಿಕ್‌ ಪಾಂಡ್ಯ ಅವರಿಗೆ ದಂಡ ವಿಧಿಸಲಾಗಿದೆ.

ADVERTISEMENT

ಪಂಜಾಬ್‌ ಪಡೆ ಟೂರ್ನಿಯಲ್ಲಿ ಎರಡನೇ ಬಾರಿಗೆ ನಿಧಾನಗತಿ ಬೌಲಿಂಗ್‌ ಮಾಡಿದ್ದಕ್ಕಾಗಿ ಅಯ್ಯರ್‌ ಅವರಿಗೆ ₹ 24 ಲಕ್ಷ ದಂಡ ವಿಧಿಸಲಾಗಿದೆ. ಮುಂಬೈ ಮೂರನೇ ಸಲ ನಿಯಮ ಉಲ್ಲಂಘಿಸಿದ್ದಕ್ಕಾಗಿ ಪಾಂಡ್ಯ ಅವರಿಗೆ ₹ 30 ಲಕ್ಷ ದಂಡ ಹಾಕಲಾಗಿದೆ ಎಂದು ಐಪಿಎಲ್‌ ಹೇಳಿಕೆ ಬಿಡುಗಡೆ ಮಾಡಿದೆ.

ಶ್ರೇಯಸ್‌ ಬಳಗದ ಉಳಿದ ಆಟಗಾರರಿಗೆ ತಲಾ ₹ 6 ಲಕ್ಷ ಹಾಗೂ ಪಾಂಡ್ಯ ಪಡೆಯ ಪ್ರತಿ ಆಟಗಾರರಿಗೆ ತಲಾ ₹ 12 ಲಕ್ಷ ದಂಡ ಹಾಕಲಾಗಿದೆ.

ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ ಮುಂಬೈ ಮಣಿಸಿದ ಪಂಜಾಬ್‌, ಫೈನಲ್‌ಗೆ ಲಗ್ಗೆ ಇಟ್ಟಿದೆ. ನಾಳೆ (ಜೂನ್‌ 2) ಫೈನಲ್‌ ನಡೆಯಲಿದ್ದು, ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದೊಂದಿಗೆ ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.