ADVERTISEMENT

IPL 2026 ರಾಹುಲ್, ಪಡಿಕ್ಕಲ್ ಸೇರಿ 9 ಕನ್ನಡಿಗರು; ಯಾರು, ಯಾವ ತಂಡದಲ್ಲಿದ್ದಾರೆ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಡಿಸೆಂಬರ್ 2025, 7:19 IST
Last Updated 17 ಡಿಸೆಂಬರ್ 2025, 7:19 IST
ಕರುಣ್ ನಾಯರ್ ಮತ್ತು ಕೆ.ಎಲ್. ರಾಹುಲ್ 
ಕರುಣ್ ನಾಯರ್ ಮತ್ತು ಕೆ.ಎಲ್. ರಾಹುಲ್    

ಅಬುಧಾಬಿ: ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ 2026ನೇ ಆವೃತ್ತಿಗಾಗಿ ನಿನ್ನೆ (ಡಿಸೆಂಬರ್ 16) ಮಿನಿ ಹರಾಜು ನಡೆದಿದೆ. ಇದರಲ್ಲಿ ಕನ್ನಡಿಗರಿಗೆ ತೀವ್ರ ನಿರಾಸೆಯಾಗಿದೆ. ವಿಶೇಷವಾಗಿ, ಮಯಂಕ್ ಅಗರವಾಲ್, ಸ್ಫೋಟಕ ಬ್ಯಾಟರ್ ಅಭಿನವ್ ಮನೋಹರ್ ಖರೀದಿಗೆ ಫ್ರಾಂಚೈಸಿಗಳು ನಿರಾಸಕ್ತಿ ತೋರಿಸಿರುವುದು ಅಚ್ಚರಿಗೆ ಕಾರಣವಾಗಿದೆ.

ನಿನ್ನೆ ನಡೆದ ಐಪಿಎಲ್ ಮಿನಿ ಹರಾಜಿನಲ್ಲಿ ಬಿಡ್ ಆಗಿರುವ ಏಕೈಕ ಕರ್ನಾಟಕದ ಆಟಗಾರ ಅಂದರೆ, ಅದು ಪ್ರವೀಣ್ ದುಬೆ ಮಾತ್ರ. 32 ವರ್ಷದ ಅವರನ್ನು ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಮೂಲಬೆಲೆ ₹30 ಲಕ್ಷ ನೀಡಿ ಖರೀದಿಸಿದೆ. ಇವರನ್ನು ಹೊರತುಪಡಿಸಿ ಉಳಿದ ಯಾವುದೇ ಆಟಗಾರರಿಗೆ ಫ್ರಾಂಚೈಸಿಗಳು ಮಣೆ ಹಾಕಿಲ್ಲ.

ಇನ್ನೂ ಈಗಾಗಲೇ ವಿವಿಧ ಪ್ರಾಂಚೈಸಿಗಳ ಪರ ಆಡುತ್ತಿರುವ ಕರ್ನಾಟಕ ತಾರಾ ಆಟಗಾರರು ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರುಗಳೆಂದರೆ, ಕೆ.ಎಲ್. ರಾಹುಲ್ (ಡಿಸಿ), ಕರುಣ್ ನಾಯರ್ (ಡಿಸಿ), ರವಿಚಂದ್ರನ್ ಸ್ಮರಣ್ (ಎಸ್‌ಆರ್‌ಎಚ್), ಮನೀಶ್ ಪಾಂಡೆ (ಕೆಕೆಆರ್), ಪ್ರಸಿದ್ಧ ಕೃಷ್ಣ (ಜಿಟಿ), ವೈಶಾಕ್ ವಿಜಯಕುಮಾರ್ (ಪಂಜಾಬ್ ಕಿಂಗ್ಸ್), ಪ್ರವೀಣ್ ದುಬೆ (ಪಂಜಾಬ್ ಕಿಂಗ್ಸ್) ಶ್ರೇಯಸ್ ಗೋಪಾಲ್ (ಸಿಎಸ್‌ಕೆ), ದೇವದತ್ತ ಪಡಿಕ್ಕಲ್ (ಆರ್‌ಸಿಬಿ).

ADVERTISEMENT

ಹರಾಜಾಗದ ಆಟಗಾರರ ಪಟ್ಟಿ

  • ಮಯಾಂಕ್ ಅಗರವಾಲ್ – ₹75 ಲಕ್ಷ (ಮೂಲ ಬೆಲೆ)

  • ಅಭಿನವ್ ಮನೋಹರ್ – ₹30 ಲಕ್ಷ (ಮೂಲ ಬೆಲೆ)

  • ವಿದ್ವತ್ ಕಾವೇರಪ್ಪ, ₹30 ಲಕ್ಷ (ಮೂಲ ಬೆಲೆ)

  • ವಿದ್ಯಾಧರ ಪಾಟೀಲ, ₹30 ಲಕ್ಷ (ಮೂಲ ಬೆಲೆ)

  • ಕೆ.ಸಿ. ಕರಿಯಪ್ಪ, ₹30 ಲಕ್ಷ (ಮೂಲ ಬೆಲೆ)

  • ಮನೋಜ ಭಾಂಡಗೆ, ₹30 ಲಕ್ಷ (ಮೂಲ ಬೆಲೆ)

  • ಜಗದೀಶ ಸುಚಿತ್, ₹30 ಲಕ್ಷ (ಮೂಲ ಬೆಲೆ)

  • ಕೆ.ಎಲ್. ಶ್ರೀಜಿತ್, ₹30 ಲಕ್ಷ (ಮೂಲ ಬೆಲೆ)

  • ಅಭಿಲಾಷ್ ಶೆಟ್ಟಿ, ₹30 ಲಕ್ಷ (ಮೂಲ ಬೆಲೆ)

  • ಲಕ್ಷ ಶ್ರೀವತ್ಸ ಆಚಾರ್ಯ, ₹30 ಲಕ್ಷ (ಮೂಲ ಬೆಲೆ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.