
ಐಪಿಎಲ್ 2025: ಎಲ್ಲ 10 ತಂಡಗಳ ನಾಯಕರು
(ಚಿತ್ರ ಕೃಪೆ: X/@IPL)
ನವದೆಹಲಿ: 2026ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಮಿನಿ ಹರಾಜು ಡಿಸೆಂಬರ್ ಮಧ್ಯದಲ್ಲಿ ಅಬುಧಾಬಿಯಲ್ಲಿ ನಡೆಯಲಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಮಂಗಳವಾರ ಪಿಟಿಐಗೆ ತಿಳಿಸಿದ್ದಾರೆ.
ಇದಕ್ಕೂ ಮೊದಲು 2023 ಹಾಗೂ 2024ರ ಹರಾಜು ಕ್ರಮವಾಗಿ ದುಬೈ ಮತ್ತು ಜೆಡ್ಡಾದಲ್ಲಿ ಜರುಗಿತ್ತು. ಈ ಎರಡು ಆವೃತ್ತಿಗಳ ಬಳಿಕ ದುಬೈನಲ್ಲಿ ಸತತ ಮೂರನೇ ಬಾರಿಗೆ ವಿದೇಶದಲ್ಲಿ ಹರಾಜು ನಡೆಯುತ್ತಿದೆ. ಇದು ಡಿಸೆಂಬರ್ 15 ಅಥವಾ 16 ರಂದು ನಡೆಯುವ ಸಾಧ್ಯತೆಯಿದೆ.
‘ಐಪಿಎಲ್ 2026ರ ಹರಾಜಿಗೆ ಅಬುಧಾಬಿಯನ್ನು ನಿಗದಿಪಡಿಸಲಾಗಿದೆ’ ಎಂದು ಬಿಸಿಸಿಐ ಅಧಿಕಾರಿ ತಿಳಿಸಿದ್ದಾರೆ. ಕಳೆದ ವರ್ಷ ಸೌದಿ ಅರೇಬಿಯಾದಲ್ಲಿ ಮೆಗಾ ಹರಾಜು ನಡೆದಿದ್ದು, ಈ ಬಾರಿ ಮಿನಿ ಹರಾಜು ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.