

ಅಬುಧಾಬಿ: ಇಂಡಿಯನ್ ಪ್ರೀಮಿಯರ್ ಲೀಗ್ 2026ನೇ ಸಾಲಿನ ಮಿನಿ ಹರಾಜು ಆರಂಭಗೊಂಡಿದ್ದು, ಮೊದಲ ಸೆಟ್‌ನಲ್ಲಿ ₹2 ಕೋಟಿ ಮೂಲ ಬೆಲೆ ಹೊಂದಿದ್ದ ಆಸ್ಟ್ರೇಲಿಯಾ ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್ ಅವರನ್ನು ಖರೀದಿಸಲು ಫ್ರಾಂಚೈಸಿಗಳು ಮುಗಿಬಿದ್ದರು.
ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಗ್ರೀನ್ ಅವರನ್ನು ಖರೀದಿಸಲು ಆರಂಭದಲ್ಲಿ ಆಸಕ್ತಿ ತೋರಿಸಿತ್ತು. ಆದರೆ, ಅವರ ಬಳಿ ಹೆಚ್ಚಿನ ಹಣವಿಲ್ಲದ ಕಾರಣ ಹೊರಗುಳಿದರು. ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೊಲ್ಕತ್ತ ನೈಟ್ ರೈಡರ್ಸ್ ಗ್ರೀನ್‌ರನ್ನು ಖರೀದಿಸಲು ಪೈಪೋಟಿ ನಡೆಸಿದರು. ಅಂತಿಮವಾಗಿ ಕೆಕೆಆರ್ ತಂಡ ಗ್ರೀನ್ ಅವರಿಗೆ ₹25.20 ಕೋಟಿ ಹಣ ನೀಡಿ ಖರೀಸಿತು.
ಆಸೀಸ್ ಆಲ್‌ರೌಂಡರ್ ಕ್ಯಾಮೆರೂನ್ ಗ್ರೀನ್ ಅವರು ಮಿನಿ ಹರಾಜಿನಲ್ಲಿ ಅತ್ಯಧಿಕ ಹಣ ಪಡೆದ ಆಟಗಾರ ಎಂಬ ದಾಖಲೆಯನ್ನು ಕೂಡ ತಮ್ಮ ಹೆಸರಿಗೆ ಬರೆದುಕೊಂಡರು. ಇದಕ್ಕೂ ಮೊದಲು ಈ ದಾಖಲೆ ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ ಅವರ ಹೆಸರಿನಲ್ಲಿತ್ತು. ಅವರು ₹24.75 ಕೋಟಿಗೆ ಕೆಕೆಆರ್ ತಂಡ ಸೇರಿದ್ದರು.