ADVERTISEMENT

ಐಪಿಎಲ್ 19ನೇ ಆವೃತ್ತಿ ವೇಳಾಪಟ್ಟಿ ಬಿಡುಗಡೆ; ಉದ್ಘಾಟನಾ ಪಂದ್ಯವಾಡಲಿರುವ ಆರ್‌ಸಿಬಿ

ಪಿಟಿಐ
Published 16 ಡಿಸೆಂಬರ್ 2025, 10:02 IST
Last Updated 16 ಡಿಸೆಂಬರ್ 2025, 10:02 IST
   

ಮುಂಬೈ: ಇಂಡಿಯನ್‌ ಪ್ರೀಮಿಯರ್‌ ಲೀಗ್‌(ಐಪಿಎಲ್‌) 19ನೇ ಆವೃತ್ತಿಯ ವೇಳಾಪಟ್ಟಿಯನ್ನು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಮಂಗಳವಾರ ಬಿಡುಗಡೆಗೊಳಿಸಿದೆ.

ಐಪಿಎಲ್‌ನ 19ನೇ ಆವೃತ್ತಿಯು ಮಾರ್ಚ್‌ 26ರಿಂದ ಮೇ 31ರವರೆಗೆ ಜರುಗಲಿದೆ ಎಂದು ಬಿಸಿಸಿಐ ತಿಳಿಸಿದೆ.

ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್‌ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು ಆಡಲಿದೆ.

ADVERTISEMENT

ಐಪಿಎಲ್‌ ಸಂಪ್ರದಾಯದಂತೆ ಹಾಲಿ ಚಾಂಪಿಯನ್‌ ತಂಡದ ತವರು ಮೈದಾನದಲ್ಲಿ ಉದ್ಘಾಟನಾ ಪಂದ್ಯ ಜರುಗುತಿತ್ತು. ಆದರೆ, ಐಪಿಎಲ್‌ ಟ್ರೋಫಿ ಬಳಿಕ ನಡೆದ ಕಾಲ್ತುಳಿತ ಘಟನೆಯಿಂದ, ಆರ್‌ಸಿಬಿ ತವರು ಮೈದಾನವಾದ ಚಿನ್ನಸ್ವಾಮಿ ಮೈದಾನದಲ್ಲಿ ಪಂದ್ಯ ನಡೆಯುವುದು ಅನುಮಾನವಾಗಿದೆ.

ಕರ್ನಾಟಕ ಸರ್ಕಾರವು ಚಿನ್ನಸ್ವಾಮಿ ಮೈದಾನದಲ್ಲಿ ಪಂದ್ಯಗಳಿಗೆ ಅನುಮತಿ ನೀಡಿರುವುದರಿಂದ, ಸಂಪೂರ್ಣ ವೇಳಾಪಟ್ಟಿ ಬಿಡುಗಡೆಯಾದ ಬಳಿಕವಷ್ಟೇ ಬೆಂಗಳೂರಿನಲ್ಲಿ ಪಂದ್ಯ ನಡೆಯುವುದು ಖಾತರಿಯಾಗಲಿದೆ.

ಇಂದು (ಡಿ.16) ಅಬುಧಾಬಿಯಲ್ಲಿ ಐಪಿಎಲ್‌ 19ನೇ ಆವೃತ್ತಿಯ ಮಿನಿ ಹರಾಜು ಜರುಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.