
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಭಾರತ ಕ್ರಿಕೆಟ್ ತಂಡದ ತಾರಾ ಆಟಗಾರ್ತಿ ಸ್ಮೃತಿ ಮಂದಾನ ಅವರ ಮದುವೆ ನವೆಂಬರ್ 23ರಂದು ಪಲಾಶ್ ಮುಚ್ಛಲ್ ಅವರೊಂದಿಗೆ ಆಗಿರಬೇಕಿತ್ತು. ಆದರೆ ಮುಂದೂಡಿದ ಮದುವೆ ಮುಂದೆಂದೋ ಎಂಬ ಪ್ರಶ್ನೆ ಈಗಲೂ ಇದೆ. ಭಾವನಾತ್ಮಕವಾಗಿ ಇಂಥ ಸಂಕಷ್ಟದ ಸಮಯದಲ್ಲಿ ಕ್ರಿಕೆಟ್‌ಗಿಂತ ಗೆಳತಿ ಸ್ಮೃತಿ ಜತೆಗಿರುವುದು ಮುಖ್ಯ ಎಂಬ ಜಮಿಮಾ ರಾಡ್ರಿಗಸ್ ನಿರ್ಧಾರಕ್ಕೆ ಈಗ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.
ನವೆಂಬರ್ 23ರಂದು ಪಲಾಶ್ ಮುಚ್ಛಲ್ ಅವರೊಂದಿಗೆ ಆಗಿರಬೇಕಿತ್ತು. ಆದರೆ, ಸ್ಮೃತಿ ತಂದೆಗೆ ವಿವಾಹಕ್ಕೆ ಕೆಲವೇ ಸಮಯದ ಮೊದಲು ಸಂಭವಿಸಿದ ಹೃದಯಾಘಾತದಿಂದಾಗಿ ಮದುವೆಯನ್ನು ಮುಂದೂಡಲಾಯಿತು. ಅದಾದ ನಂತರ ಅನಾರೋಗ್ಯದಿಂದ ಪಲಾಶ್ ಆಸ್ಪತ್ರೆಗೆ ದಾಖಲಾದ ಸುದ್ದಿ ಹೊರಬಿತ್ತು. ಏನು ನಡೆಯಿತೋ ಎಂಬ ಪ್ರಶ್ನೆಗೆ ಉತ್ತರ ಹುಡುಕಲು ಈಗಲೂ ನೆಟ್ಟಿಗರು, ಅಭಿಮಾನಿಗಳು ತಡಕಾಡುತ್ತಲೇ ಇದ್ದಾರೆ.
ಜೆಮಿಮಾ ರಾಡ್ರಿಗಸ್ ಅವರು WBBLನಲ್ಲಿ ಭಾಗವಹಿಸಲು ಆಸ್ಟ್ರೇಲಿಯಾಗೆ ತೆರಳಬೇಕಾಗಿತ್ತು. ಆದರೆ, ಜೆಮಿಮಾ ಅವರು ತನ್ನ ಗೆಳತಿ ಹಾಗೂ ಸಹ ಆಟಗಾರ್ತಿಯಾಗಿರುವ ಮಂದಾನ ಅವರ ಜೊತೆಗಿರಲು ನಿರ್ಧರಿಸಿ, WBBLನಲ್ಲಿ ಭಾಗಿಯಾಗದಿರಲು ನಿರ್ಧರಿಸಿದ್ದಾರೆ.
ಜೆಮಿಮಾ ನಿರ್ಧಾರಕ್ಕೆ ಸುನಿಲ್ ಶೆಟ್ಟಿ ಬಹುಪರಾಕ್
ಜೆಮಿಮಾ ರಾಡ್ರಿಗಸ್ ತೆಗೆದುಕೊಂಡಿರುವ ನಿರ್ಧಾರವನ್ನು ಅನೇಕರು ಪ್ರಶಂಸಿಸಿದ್ದಾರೆ. ಈ ನಡುವೆ ಬಾಲಿವುಡ್ ತಾರಾ ನಟ ಸುನಿಲ್ ಶೆಟ್ಟಿ ಎಕ್ಸ್ ಮೂಲಕ ಪೋಸ್ಟ್ ಮಾಡಿ ಜೆಮಿಮಾ ನಿರ್ಧಾರವನ್ನು ಕೊಂಡಾಡಿದ್ದಾರೆ.
‘ಬೆಳಿಗ್ಗೆ ಈ ಲೇಖನ ಓದಿದಾಗ ನನ್ನ ಹೃದಯ ತುಂಬಿ ಬಂದಂತೆ ಭಾಸವಾಯಿತು. ಜೆಮಿಮಾ WBBL ಬಿಟ್ಟು ಸ್ಮೃತಿ ಜೊತೆಗಿರಲು ನಿರ್ಧರಿಸಿದ್ದಾರೆ. ಇದು ನಿಜವಾದ ಒಗ್ಗಟ್ಟು. ನಿಜವಾದ ತಂಡದ ಸದಸ್ಯರು ಇದನ್ನೇ ಮಾಡುತ್ತಾರೆ. ಇದೇ ನಿಜವಾದ ಸರಳದೆ, ನಿಖರತೆ ಹಾಗೂ ನೈಜತೆ’ ಎಂದು ಬರೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.