ADVERTISEMENT

ಟಿ20 ವಿಶ್ವಕಪ್‌ನಲ್ಲಿ ಡಿವಿಲಿಯರ್ಸ್‌ ಆಡಲಿ: ಜಾಂಟಿ ರೋಡ್ಸ್‌

ಪಿಟಿಐ
Published 10 ಮಾರ್ಚ್ 2020, 19:32 IST
Last Updated 10 ಮಾರ್ಚ್ 2020, 19:32 IST
ಎಬಿ ಡಿವಿಲಿಯರ್ಸ್‌
ಎಬಿ ಡಿವಿಲಿಯರ್ಸ್‌   

ನವದೆಹಲಿ: ಈ ವರ್ಷ ನಡೆಯಲಿರುವ ಟ್ವೆಂಟಿ–20 ವಿಶ್ವಕಪ್ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಲು ದಕ್ಷಿಣ ಆಫ್ರಿಕಾ ತಂಡವು ಎಬಿ ಡಿವಿಲಿಯರ್ಸ್‌ ಅವರನ್ನು ಮರಳಿ ಕಣಕ್ಕಿಳಿಸಬೇಕು ಹಿರಿಯ ಕ್ರಿಕೆಟಿಗ ಜಾಂಟಿ ರೋಡ್ಸ್‌ ಸಲಹೆ ನೀಡಿದ್ದಾರೆ.

2018ರ ಮೇ ತಿಂಗಳಲ್ಲಿ ಎಬಿಡಿ ಕ್ರಿಕೆಟ್‌ನ ಎಲ್ಲ ಮಾದರಿಗಳಿಂದ ನಿವೃತ್ತರಾಗಿದ್ದರು. ಹೋದ ವರ್ಷ ಏಕದಿನ ಕ್ರಿಕಟ್ ವಿಶ್ವಕಪ್‌ನಲ್ಲಿ ತಂಡಕ್ಕೆ ಮರಳುವಂತೆ ದಕ್ಷಿಣ ಆಫ್ರಿಕಾ ಮಂಡಳಿಯು ಮನವಿ ಮಾಡಿತ್ತು. ಆದರೆ, ರಾಷ್ಟ್ರೀಯ ಆಯ್ಕೆ ಸಮಿತಿಯು ಅವರನ್ನು ಅಯ್ಕೆಗೆ ಪರಿಗಣಿಸಿರಲಿಲ್ಲ.

‘ನಾನು ಎಬಿಡಿಯ ದೊಡ್ಡ ಅಭಿಮಾನಿ. ತಂಡವು ವಿಶ್ವಕಪ್ ಜಯಿಸಬೇಕೆನ್ನುವುದಾದರೆ ಎಬಿಡಿಯನ್ನು ಮತ್ತೆ ಕರೆತರಬೇಕು. ಅಲ್ಲದೇ ಕಪ್ ಜಯಿಸಲು ತಂಡವು ಎಲ್ಲ ರೀತಿಯ ಪ್ರಯತ್ನಗಳನ್ನೂ ಮಾಡಲೇಬೇಕು’ ಎಂದು ಫೀಲ್ಡಿಂಗ್ ದಂತಕಥೆ ಜಾಂಟಿ ಇಎಸ್‌ಪಿನ್‌ಕ್ರಿಕ್‌ಇನ್ಫೋಗೆ ಹೇಳಿಕೆ ನೀಡಿದ್ದಾರೆ.

ADVERTISEMENT

‘ಎಬಿಡಿಯ ಮಹಾನ್ ಆಟಗಾರ. ಅವರು ಐಪಿಎಲ್ ಮತ್ತು ಬಿಗ್‌ ಬ್ಯಾಷ್ ಲೀಗ್‌ ಟೂರ್ನಿಗಳಲ್ಲಿ ಅವರ ಆಟವು ಅಮೋಘವಾಗಿತ್ತು. ಚುಟುಕು ಮಾದರಿ ಯಲ್ಲಿ ಅವರಿನ್ನೂ ಆಡಬಲ್ಲರು’ ಎಂದು ಹೇಳಿದ್ಧಾರೆ.

ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಅಕ್ಟೋಬರ್ 18ರಿಂದ ನವೆಂಬರ್‌ 15ರ ವರೆಗೆ ಆಸ್ಟ್ರೇಲಿಯಾದಲ್ಲಿ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.