ADVERTISEMENT

ಕ್ರೀಡಾ ವಿವಿಗೆ ಕಪಿಲ್ ದೇವ್ ಕುಲಪತಿ

ಪಿಟಿಐ
Published 14 ಸೆಪ್ಟೆಂಬರ್ 2019, 20:02 IST
Last Updated 14 ಸೆಪ್ಟೆಂಬರ್ 2019, 20:02 IST
ಕಪಿಲ್ ದೇವ್
ಕಪಿಲ್ ದೇವ್   

ಚಂಡೀಗಡ: ಹಿರಿಯ ಕ್ರಿಕೆಟಿಗ ಕಪಿಲ್ ದೇವ್ ಅವರು ಹರಿಯಾಣ ಕ್ರೀಡಾ ವಿಶ್ವವಿದ್ಯಾಲಯದ ಮೊಟ್ಟಮೊದಲ ಕುಲಪತಿಯಾಗಿ ನೇಮಕವಾಗಿದ್ದಾರೆ.

ದೇಶದ ಮೂರನೇ ಕ್ರೀಡಾ ವಿಶ್ವವಿದ್ಯಾಲಯ ಇದಾಗಿದೆ. ಈ ಮೊದಲು ಗುಜರಾತ್‌ನ ಗಾಂಧಿನಗರದಲ್ಲಿ ಮತ್ತು ತಮಿಳುನಾಡಿನ ಚೆನ್ನೈನಲ್ಲಿ ಕ್ರೀಡಾ ವಿಶ್ವವಿದ್ಯಾಲಯಗಳು ಕಾರ್ಯನಿರ್ವಹಿಸುತ್ತಿವೆ.

‘ಹರಿಯಾಣ ಕ್ರೀಡಾ ವಿವಿಗೆ ಕಪಿಲ್‌ದೇವ ಪ್ರಪ್ರಥಮ ಕುಲಪತಿಯಾಗಿದ್ದಾರೆ. ಸೋನೆಪತ್‌ನ ರಾಯ್‌ನಲ್ಲಿ ಈ ವಿವಿಯು ಆರಂಭವಾಗಿದೆ’ ಎಂದು ಹರಿಯಾಣದ ಕ್ರೀಡಾ ಸಚಿವ ಅನಿಲ್ ವಿಜ್ ಟ್ವೀಟ್ ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.