ಡ್ವೇನ್ ಬ್ರಾವೊ
ಕೋಲ್ಕತ್ತ: ಪ್ರಸ್ತುತ ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಬ್ಯಾಟರ್‌ಗಳ ವಿಶ್ವಾಸದ ಮಟ್ಟ ಕುಸಿದಿದೆ ಎಂದು ತಂಡದ ಮೆಂಟರ್ ಡ್ವೇನ್ ಬ್ರಾವೊ ಒಪ್ಪಿಕೊಂಡರು. ಆದರೆ ತಂಡದ ಕಳಪೆ ಪ್ರದರ್ಶನಕ್ಕೆ ಈಡನ್ ಗಾರ್ಡನ್‌ನ ಪಿಚ್ ಅನ್ನು ಹೊಣೆ ಮಾಡಲು ನಿರಾಕರಿಸಿದರು.
ಕೋಲ್ಕತ್ತದ ತಂಡ ಸೋಮವಾರ ಗುಜರಾತ್ ಟೈಟನ್ಸ್ ತಂಡಕ್ಕೆ 39 ರನ್‌ಗಳಿಂದ ಸೋತು, ಈ ಋತುವಿನ ಎಂಟು ಪಂದ್ಯಗಳಲ್ಲಿ ಐದನೇ ಸೋಲನ್ನು ಕಂಡ ನಂತರ ಅವರು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು.
‘ಐಪಿಎಲ್ ಕಠಿಣ ಟೂರ್ನಿ. ಇಲ್ಲಿ ಉತ್ತಮ ಆರಂಭ ಪಡೆಯದೇ ಹೋದಲ್ಲಿ ಬ್ಯಾಟರ್‌ಗಳ ಆತ್ಮವಿಶ್ವಾಸದ ಮಟ್ಟ ಕುಗ್ಗುತ್ತದೆ. ನಾವು ಆಟಗಾರರಿಗೆ ಬೆಂಬಲವಾಗಿ ನಿಲ್ಲುತ್ತೇವೆ. ಮುಂದೆ ಚೆನ್ನಾಗಿ ಆಡುವರೆಂಬ ಭರವಸೆಯಿದೆ’ ಎಂದರು.
ಈಡನ್‌ನ ಪಿಚ್ ಬಯಸಿದ ರೀತಿಯಲ್ಲಿಲ್ಲ ಎಂದು ಫ್ರಾಂಚೈಸಿಯು ಕಳವಳ ವ್ಯಕ್ತಪಡಿಸಿದ್ದು ಚರ್ಚೆಗೆ ಕಾರಣವಾಗಿತ್ತು. ಆದರೆ ಇದನ್ನು ಬ್ರಾವೊ ಒಪ್ಪಲಿಲ್ಲ. ‘ಪಿಚ್‌ನಲ್ಲೇನೂ ಸಮಸ್ಯೆಯಿಲ್ಲ. ಅದರ ಬಗ್ಗೆ ಮಾತನಾಡಲು ನಾನು ಬಂದಿಲ್ಲ. ಎರಡೂ ತಂಡಗಳು ಒಂದೇ ವಿಕೆಟ್‌ನಲ್ಲಿ ಆಡುತ್ತವೆ. ನಾವು ಉತ್ತಮವಾಗಿ ಆಡಿಲ್ಲ. ಅವರು ನಮಗಿಂತ ಚೆನ್ನಾಗಿ ಆಡಿದರು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.