ಪಿಟಿಐ ಚಿತ್ರ
ಲಾರ್ಡ್ಸ್: ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ 193 ರನ್‌ಗಳ ಗುರಿ ಬೆನ್ನಟ್ಟಿದ ಭಾರತ ನಾಲ್ಕನೇ ದಿನದಂತ್ಯಕ್ಕೆ ನಾಲ್ಕು ವಿಕೆಟ್ ನಷ್ಟಕ್ಕೆ 58 ರನ್ ಗಳಿಸಿದ್ದು, ಸಂಕಷ್ಟದಲ್ಲಿದೆ.
ಅಂತಿಮ ದಿನದಾಟದಲ್ಲಿ ಆರು ವಿಕೆಟ್ ಇರುವಂತೆಯೇ ಗೆಲುವಿಗೆ ಇನ್ನೂ 135 ರನ್ ಗಳಿಸಬೇಕಿದೆ. ಕೆ.ಎಲ್.ರಾಹುಲ್ ಅಜೇಯ 33 ರನ್ ಗಳಿಸಿದ್ದು, ಕ್ರೀಸಿನಲ್ಲಿದ್ದಾರೆ.
ಯಶಸ್ವಿ ಜೈಸ್ವಾಲ್ (0), ಕರುಣ್ ನಾಯರ್ (14), ನಾಯಕ ಶುಭಮನ್ ಗಿಲ್ (6) ಹಾಗೂ ಆಕಾಶ್ ದೀಪ್ (1) ವಿಕೆಟ್ ನಷ್ಟವಾಗಿದೆ.
ಈ ಮೊದಲು ವಾಷಿಂಗ್ಟನ್ ಸುಂದರ್ (22ಕ್ಕೆ 4 ವಿಕೆಟ್), ಜಸ್‌ಪ್ರೀತ್ ಬೂಮ್ರಾ (2 ವಿಕೆಟ್)ಹಾಗೂ ಮೊಹಮ್ಮದ್ ಸಿರಾಜ್ (2ವಿಕೆಟ್) ದಾಳಿಗೆ ತತ್ತರಿಸಿದ ಇಂಗ್ಲೆಂಡ್ ದ್ವಿತೀಯ ಇನಿಂಗ್ಸ್‌ನಲ್ಲಿ 192 ರನ್‌ಗಳಿಗೆ ತನ್ನೆಲ್ಲ ವಿಕೆಟ್ ಗಳನ್ನು ಕಳೆದುಕೊಂಡಿತು.
ಇಂಗ್ಲೆಂಡ್‌ನ 387 ರನ್‌ಗಳಿಗೆ ಉತ್ತರವಾಗಿ ಭಾರತ ಮೊದಲ ಇನಿಂಗ್ಸ್ ನಲ್ಲಿ ರಾಹುಲ್ ಶತಕದ ನೆರವಿನಿಂದ 387 ರನ್ ಗಳಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.