ADVERTISEMENT

IPL 2022: ನಿಯಮ ಉಲ್ಲಂಘನೆ; ರಾಹುಲ್, ಸ್ಟೋಯಿನಿಸ್‌ಗೆ ದಂಡ

ಪಿಟಿಐ
Published 20 ಏಪ್ರಿಲ್ 2022, 10:01 IST
Last Updated 20 ಏಪ್ರಿಲ್ 2022, 10:01 IST
ಕೆ.ಎಲ್.ರಾಹುಲ್
ಕೆ.ಎಲ್.ರಾಹುಲ್   

ನವಿ ಮುಂಬೈ: ಐಪಿಎಲ್ 2022 ಟೂರ್ನಿಯಲ್ಲಿ ಮಂಗಳವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸೋಲು ಅನುಭವಿಸಿರುವ ಲಖನೌ ಸೂಪರ್ ಜೈಂಟ್ಸ್ ತಂಡಕ್ಕೆ ಮಗದೊಂದು ಕಹಿ ಸುದ್ದಿ ಎದುರಾಗಿದೆ.

ಐಪಿಎಲ್ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಲಖನೌ ನಾಯಕ ಕೆ.ಎಲ್. ರಾಹುಲ್ ಹಾಗೂ ಆಲ್‌ರೌಂಡರ್ ಮಾರ್ಕಸ್ ಸ್ಟೋಯಿನಿಸ್ ದಂಡನೆಗೆ ಒಳಗಾಗಿದ್ದಾರೆ.

ಒಂದನೇ ಹಂತದಐಪಿಎಲ್ ನಿಯಮ ಉಲ್ಲಂಘಿಸಿರುವ ರಾಹುಲ್ ಮೇಲೆ ಪಂದ್ಯ ಶುಲ್ಕದ ಶೇ 20ರಷ್ಟು ದಂಡ ಹೇರಲಾಗಿದೆ. ರಾಹುಲ್ ಸಹ ತಪ್ಪನ್ನು ಒಪ್ಪಿಕೊಂಡಿದ್ದಾರೆ.

ಇನ್ನೊಂದೆಡೆ ಪಂದ್ಯದ ವೇಳೆ ಅಂಪೈರ್ ತೀರ್ಪಿಗೆ ಅಸಂತೃಪ್ತಿ ವ್ಯಕ್ತಪಡಿಸಿದ್ದ ಸ್ಟೋಯಿನಿಸ್ ಮೇಲೂ ಪಂದ್ಯದ ರೆಫರಿ ದಂಡ ಹೇರಿದ್ದಾರೆ.

ಐಪಿಎಲ್‌ಗೆ ಇದೇ ಮೊದಲ ಬಾರಿಗೆ ಪದಾರ್ಪಣೆ ಮಾಡಿರುವ ಲಖನೌ ವಿರುದ್ಧ 18 ರನ್ ಅಂತರದ ಗೆಲುವು ದಾಖಲಿಸಿರುವ ಆರ್‌ಸಿಬಿ, ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.