ADVERTISEMENT

ಕಿವೀಸ್‌ಗೆ ಮತ್ತೊಂದು ಆಘಾತ; ಭಾರತ ವಿರುದ್ಧ ಪಂದ್ಯಕ್ಕೆ ಗಪ್ಟಿಲ್ ಅಲಭ್ಯ?

ಪಿಟಿಐ
Published 27 ಅಕ್ಟೋಬರ್ 2021, 17:34 IST
Last Updated 27 ಅಕ್ಟೋಬರ್ 2021, 17:34 IST
ಮಾರ್ಟಿನ್ ಗಪ್ಟಿಲ್
ಮಾರ್ಟಿನ್ ಗಪ್ಟಿಲ್   

ಶಾರ್ಜಾ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಈಗಾಗಲೇ ಬಲಗೈ ವೇಗದ ಬೌಲರ್ ಲಾಕಿ ಫರ್ಗ್ಯುಸನ್ ಆಟದಿಂದವಂಚಿತವಾಗಿರುವ ನ್ಯೂಜಿಲೆಂಡ್, ಮಗದೊಂದು ಆಘಾತಕ್ಕೆ ಒಳಗಾಗಿದೆ.

ಸ್ಫೋಟಕ ಆರಂಭಿಕ ಬ್ಯಾಟರ್ ಮಾರ್ಟಿನ್ ಗಪ್ಟಿಲ್ ಗಾಯದ ಸಮಸ್ಯೆಗೆ ಒಳಗಾಗಿದ್ದು, ಭಾರತ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಆಡುವುದು ಅನುಮಾನವೆನಿಸಿದೆ.

ಮಂಗಳವಾರ ಪಾಕಿಸ್ತಾನ ವಿರುದ್ಧ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ ಐದು ವಿಕೆಟ್ ಅಂತರದ ಸೋಲಿಗೆ ಶರಣಾಗಿತ್ತು. ಈ ನಡುವೆ ಬ್ಯಾಟಿಂಗ್ ವೇಳೆಯಲ್ಲಿ ಚೆಂಡು ಕಾಲ್ಬೆರಳಿಗೆ ಬಡಿದ ಕಾರಣ ಮಾರ್ಟಿನ್ ಗಪ್ಟಿಲ್ ಗಾಯಗೊಂಡಿದ್ದರು.

ಪಾಕ್ ವೇಗಿ ಹ್ಯಾರಿಸ್ ರೌಫ್ ಯಾರ್ಕರ್ ದಾಳಿಯು ಗಪ್ಟಿಲ್ ಕಾಲ್ಬೆರಳಿಗೆ ಬಡಿದಿತ್ತು. 20 ಎಸೆತಗಳನ್ನು ಎದುರಿಸಿದ ಅವರು 17 ರನ್ ಗಳಿಸಿದರು.

ಈ ಕುರಿತು ಮಾಹಿತಿ ನೀಡಿರುವ ನ್ಯೂಜಿಲೆಂಡ್ ಕೋಚ್ ಗ್ಯಾರಿ ಸ್ಟೀಡ್, 'ಪಂದ್ಯದ ಬಳಿಕ ಗಪ್ಟಿಲ್‌ಗೆ ನೋವು ಉಲ್ಬಣಿಸಿದ್ದು, ಮುಂದಿನ 24ರಿಂದ 48 ತಾಸು ನಿರ್ಣಾಯಕವೆನಿಸುತ್ತದೆ ಎಂದು ತಿಳಿಸಿದ್ದಾರೆ.

ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಪಂದ್ಯವು ಅಕ್ಟೋಬರ್ 31 ಭಾನುವಾರ ನಡೆಯಲಿದೆ. ಸೆಮಿಫೈನಲ್ ಪ್ರವೇಶಿಸುವ ನಿಟ್ಟಿನಲ್ಲಿ ಇತ್ತಂಡಗಳಿಗೂ ಈ ಪಂದ್ಯದಲ್ಲಿ ಗೆಲುವು ದಾಖಲಿಸುವುದು ಅನಿವಾರ್ಯವೆನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.