ಮೈಕಲ್ ಕ್ಲಾರ್ಕ್
ಸಿಡ್ನಿ: ಆಸ್ಟ್ರೇಲಿಯಾದ ಮಾಜಿ ನಾಯಕ ಮೈಕಲ್ ಕ್ಲಾರ್ಕ್, ಚರ್ಮದ ಕ್ಯಾನ್ಸರ್ ವಿರುದ್ಧದ ಹೋರಾಟದ ಕುರಿತು ಅನುಭವವನ್ನು ಹಂಚಿಕೊಂಡಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಈ ಕುರಿತು ಮಾಹಿತಿ ಹಂಚಿರುವ ಕ್ಲಾರ್ಕ್, ಚರ್ಮ ಕ್ಯಾನ್ಸರ್ ಬಗ್ಗೆ ಎಲ್ಲರೂ ಎಚ್ಚರಿಕೆ ವಹಿಸುವಂತೆ ಜಾಗೃತಿ ಮೂಡಿಸಿದ್ದಾರೆ.
'ಚರ್ಮದ ಕ್ಯಾನ್ಸರ್ ನಿಜವಾಗಿದೆ. ವಿಶೇಷವಾಗಿಯೂ ಆಸ್ಟ್ರೇಲಿಯಾದಲ್ಲಿ! ಇಂದು ಮೂಗಿನಿಂದ ಚರ್ಮವನ್ನು ಕತ್ತರಿಸಿ ತೆಗೆಯಲಾಗಿದೆ' ಎಂದು ಕ್ಲಾರ್ಕ್ ತಿಳಿಸಿದ್ದಾರೆ.
'ನಿಯಮಿತವಾಗಿ ಚರ್ಮವನ್ನು ಪರೀಕ್ಷಿಸಿಕೊಳ್ಳುವಂತೆಯೂ ಜಾಗೃತಿ ಮೂಡಿಸಿರುವ ಕ್ಲಾರ್ಕ್, ರೋಗ ಚಿಕಿತ್ಸೆಗಿಂತ ತಡೆಗಟ್ಟುವಿಕೆ ಮುಖ್ಯ' ಎಂದಿದ್ದಾರೆ.
'ನನ್ನ ವಿಷಯದಲ್ಲಿ ನಿಯಮಿತ ತಪಾಸಣೆ ಹಾಗೂ ರೋಗವನ್ನು ಆರಂಭದಲ್ಲೇ ಪತ್ತೆ ಹಚ್ಚಿರುವುದು ಮುಖ್ಯವೆನಿಸಿದೆ' ಎಂದು ತಿಳಿಸಿದ್ದಾರೆ.
2004ರಿಂದ 2015ರ ಅವಧಿಯಲ್ಲಿ ಕ್ಲಾರ್ಕ್, ಆಸ್ಟ್ರೇಲಿಯಾ ತಂಡವನ್ನು 115 ಟೆಸ್ಟ್, 245 ಏಕದಿನ ಹಾಗೂ 34 ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಪ್ರತಿನಿಧಿಸಿದ್ದಾರೆ.
ಅವರು 74 ಟೆಸ್ಟ್ ಹಾಗೂ 139 ಏಕದಿನ ಪಂದ್ಯಗಳಲ್ಲಿ ಆಸೀಸ್ ತಂಡದ ನಾಯಕತ್ವ ವಹಿಸಿದ್ದರು. ಕ್ಲಾರ್ಕ್ ಮುಂದಾಳತ್ವದಲ್ಲಿ ಆಸೀಸ್ 2015ರ ಏಕದಿನ ವಿಶ್ವಕಪ್ ಜಯಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.