ADVERTISEMENT

ಮಿಥಾಲಿ ರಾಜ್‌ ಏಕದಿನ ತಂಡದ ನಾಯಕಿ

ನ್ಯೂಜಿಲೆಂಡ್ ಪ್ರವಾಸಕ್ಕೆ ಭಾರತ ತಂಡ ಪ್ರಕಟ; ಟ್ವೆಂಟಿ–20 ತಂಡಕ್ಕೆ ಹರ್ಮನ್‌ಪ್ರೀತ್ ಸಾರಥ್ಯ

ಪಿಟಿಐ
Published 21 ಡಿಸೆಂಬರ್ 2018, 18:46 IST
Last Updated 21 ಡಿಸೆಂಬರ್ 2018, 18:46 IST
ಮಿಥಾಲಿ ರಾಜ್‌
ಮಿಥಾಲಿ ರಾಜ್‌   

ನವದೆಹಲಿ: ಭಾರತ ಮಹಿಳಾ ಕ್ರಿಕೆಟ್ ತಂಡಕ್ಕೆ ಮುಖ್ಯ ಕೋಚ್‌ ಆಗಿ ಡಬ್ಲ್ಯು.ವಿ.ರಾಮನ್ ನೇಮಕಗೊಂಡ ಬೆನ್ನಲ್ಲೇ ನ್ಯೂಜಿಲೆಂಡ್ ಪ್ರವಾಸಕ್ಕೆ ತಂಡವನ್ನು ಪ್ರಕಟಿಸಲಾಗಿದೆ. ಏಕದಿನ ತಂಡವನ್ನು ಮಿಥಾಲಿ ರಾಜ್ ಮತ್ತು ಟ್ವೆಂಟಿ–20 ತಂಡವನ್ನು ಹರ್ಮನ್‌ಪ್ರೀತ್ ಕೌರ್ ಮುನ್ನಡೆಸಲಿದ್ದಾರೆ.

ಆಯ್ಕೆ ಸಮಿತಿ ಮುಖ್ಯಸ್ಥೆ ಹೇಮ ಲತಾ ಕಲಾ ಶುಕ್ರವಾರ ತಂಡ ಗಳನ್ನು ಪ್ರಕಟಿಸಿದ್ದು ಕರ್ನಾಟಕದ ವೇದಾ ಕೃಷ್ಣಮೂರ್ತಿ ಅವರನ್ನು ಕೈಬಿ ಡಲಾಗಿದೆ.

ಐಸಿಸಿ ಮಹಿಳೆಯರ ಚಾಂಪಿ ಯನ್‌ಷಿಪ್‌ನ ಭಾಗವಾಗಿ ಜನವರಿ 24ರಿಂದ ನ್ಯೂಜಿಲೆಂಡ್ ವಿರುದ್ಧ ಮೂರು ಏಕದಿನ ಪಂದ್ಯಗಳನ್ನು ಭಾರತ ಆಡಲಿದೆ. ನಂತರ ಮೂರು ಟ್ವೆಂಟಿ–20 ಪಂದ್ಯಗಳಲ್ಲಿ ಪಾಲ್ಗೊಳ್ಳಲಿದೆ.

ADVERTISEMENT

ಕಳೆದ ತಿಂಗಳು ವೆಸ್ಟ್ ಇಂಡೀಸ್‌ನಲ್ಲಿ ನಡೆದಿದ್ದ ಟ್ವೆಂಟಿ–20 ವಿಶ್ವಕಪ್‌ ಟೂರ್ನಿಯ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್‌ಗೆ ಭಾರತ ತಂಡ ಮಣಿದಿ ತ್ತು. ಈ ಪಂದ್ಯದಲ್ಲಿ ಮಿಥಾಲಿ ರಾಜ್ ಅವರನ್ನು ಆಡಿಸದೇ ಇದ್ದದ್ದು ವಿವಾದ ಸೃಷ್ಟಿಸಿತ್ತು. ವಾದ–ಪ್ರತಿವಾದಗಳ ನಡುವೆಯೇ ಹಂಗಾಮಿ ಕೋಚ್ ರಮೇಶ್‌ ಪೊವಾರ್‌ ಅವರ ಅವಧಿ ನವೆಂಬರ್‌ 30ರಂದು ಮುಗಿ ದಿತ್ತು.

ನಂತರ ಕೋಚ್‌ ಆಯ್ಕೆಗೆ ಅರ್ಜಿ ಕರೆಯಲಾಗಿತ್ತು. ಬಿಸಿಸಿಐ ಅಡ್‌ಹಾಕ್ ಸಮಿತಿಯುವ ಅಂತಿಮವಾಗಿ ಗ್ಯಾರಿ ಕಿರ್ಸ್ಟನ್‌ ಮತ್ತು ಡಬ್ಲ್ಯು.ವಿ.ರಾಮನ್ ಅವರ ಹೆಸರನ್ನು ಶಿಫಾರಸು ಮಾಡಿತ್ತು. ರಾಮನ್‌, ಗುರುವಾರ ಕೋಚ್ ಆಗಿ ನೇಮಕ ಆಗಿದ್ದರು. ಇದರ ಬೆನ್ನಲ್ಲೇ ತಲಾ 15 ಮಂದಿ ಆಟಗಾರರ ಹೆಸರನ್ನು ಆಯ್ಕೆ ಸಮಿತಿ ಪ್ರಕಟಿಸಿದೆ.

ಜೊತೆಗೂಡಿಸಲು ಪ್ರಯತ್ನ: ಮಿಥಾಲಿ ರಾಜ್‌ ವಿವಾದದಿಂದಾಗಿ ಮಹಿಳಾ ತಂಡದಲ್ಲಿ ಭಿನ್ನಧ್ವನಿ ಕೇಳಿ ಸಿತ್ತು. ಹರ್ಮನ್‌ಪ್ರೀತ್ ಕೌರ್ ಮತ್ತು ಸ್ಮೃತಿ ಮಂದಾನ, ರಮೇಶ್ ಪೊವಾರ್ ಅವರನ್ನೇ ಮುಂದುವರಿಸಬೇಕು ಎಂದು ಒತ್ತಾಯಿಸಿದ್ದರು. ಆದರೆ ಮಿಥಾಲಿ ರಾಜ್‌, ಕೋಚ್ ಬದಲಾವಣೆಗೆ ಪಟ್ಟು ಹಿಡಿದಿದ್ದರು. ಈಗ ಮಿಥಾಲಿ ಮತ್ತು ಹರ್ಮನ್‌ಪ್ರೀತ್‌ ನಡುವೆ ಸೌಹಾರ್ದ ಮೂಡಿಸುವ ಪ್ರಯತ್ನ ನಡೆಯುತ್ತಿದೆ.

ಶುಕ್ರವಾರ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ ಮಿಥಾಲಿ ಪಾಲ್ಗೊಂಡಿದ್ದರು. ಬಿಗ್ಬ್ಯಾಷ್‌ ಟೂರ್ನಿ ಯಲ್ಲಿ ಆಡು ತ್ತಿರುವ ಹರ್ಮನ್‌ಪ್ರೀತ್ ಸ್ಕೈಪ್ ಮೂಲಕ ಭಾಗವಹಿಸಿದ್ದರು. ಬಿಸಿಸಿಐ ಸಿಇಒ ರಾಹುಲ್ ಜೊಹ್ರಿ ಮತ್ತು ಹಂಗಾಮಿ ಕಾರ್ಯದರ್ಶಿ ಅಮಿತಾಭ್ ಚೌಧರಿ ಇದ್ದರು.

ವೇದಾ ಬದಲಿಗೆ ಮೋನಾ ಮೇಶ್ರಮ್‌:ವೇದಾ ಕೃಷ್ಣಮೂರ್ತಿ ಅವರನ್ನು ಎರಡೂ ಮಾದರಿಗಳಿಂದ ಕೈಬಿಟ್ಟಿದ್ದು ಮೋನಾ ಮೇಶ್ರಮ್‌ಗೆ ಸ್ಥಾನ ನೀಡಲಾಗಿದೆ ಎಂದು ಹೇಮಲತಾ ತಿಳಿಸಿದರು. ಗಾಯಗೊಂಡಿರುವ ವೇಗಿ ಪೂಜಾ ವಸ್ತ್ರಕಾರ್ ಬದಲಿಗೆ ಶಿಖಾ ಪಾಂಡೆ ಅವರನ್ನು ಕರೆಸಿಕೊಳ್ಳಲಾಗಿದೆ. ಪ್ರಿಯಾ ಪೂನಿಯಾಗೆ ಟ್ವೆಂಟಿ–20 ತಂಡದಲ್ಲಿ ಇದೇ ಮೊದಲ ಬಾರಿ ಸ್ಥಾನ ನೀಡಲಾಗಿದೆ ಎಂದು ವಿವರಿಸಿದರು.

ತಂಡಗಳು

ಏಕದಿನ: ಮಿಥಾಲಿ ರಾಜ್‌ (ನಾಯಕಿ), ಪೂನಮ್ ರಾವತ್‌, ಸ್ಮೃತಿ ಮಂದಾನ, ಜೆಮಿಮಾ ರಾಡ್ರಿಗಸ್‌, ಹರ್ಮನ್‌ಪ್ರೀತ್ ಕೌರ್‌, ದೀಪ್ತಿ ಶರ್ಮಾ, ತನ್ಯಾ ಭಾಟಿಯಾ (ವಿಕೆಟ್ ಕೀಪರ್‌), ಮೋನಾ ಮೇಶ್ರಮ್‌, ಏಕ್ತಾ ಬಿಷ್ಟ್‌, ಮಾನಸಿ ಜೋಶಿ, ದಯಾಳನ್ ಹೇಮಲತಾ, ಪೂನಮ್‌ ಯಾದವ್‌, ರಾಜೇಶ್ವರಿ ಗಾಯಕವಾಡ್‌, ಜೂಲನ್ ಗೋಸ್ವಾಮಿ, ಶಿಖಾ ಪಾಂಡೆ.

ಟ್ವೆಂಟಿ–20: ಹರ್ಮನ್‌ಪ್ರೀತ್ ಕೌರ್‌ (ನಾಯಕಿ), ಸ್ಮೃತಿ ಮಂದಾನ, ಮಿಥಾಲಿ ರಾಜ್‌, ದೀಪ್ತಿ ಶರ್ಮಾ, ಜೆಮಿಮಾ ರಾಡ್ರಿಗಸ್‌, ಅನುಜಾ ಪಾಟೀಲ್‌, ದಯಾಳನ್‌ ಹೇಮಲತಾ, ಮಾನಸಿ ಜೋಶಿ, ಶಿಖಾ ಪಾಂಡೆ, ತಾನಿಯಾ ಭಾಟಿಯಾ (ವಿಕೆಟ್ ಕೀಪರ್‌), ಪೂನಮ್‌ ಯಾದವ್‌, ಏಕ್ತಾ ಬಿಷ್ಟ್‌, ರಾಧಾ ಯಾದವ್‌, ಅರುಂಧತಿ ರೆಡ್ಡಿ, ಪ್ರಿಯಾ ಪೂನಿಯಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.