ADVERTISEMENT

ಮಾಸಿಕ ₹4 ಲಕ್ಷ ಜೀವನಾಂಶ: ಮೊಹಮ್ಮದ್‌ ಶಮಿ ಪತ್ನಿ ಹಸೀನ್‌ ಜಹಾನ್‌ ಹೇಳಿದ್ದೇನು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಜುಲೈ 2025, 13:18 IST
Last Updated 2 ಜುಲೈ 2025, 13:18 IST
<div class="paragraphs"><p>ಮೊಹಮ್ಮದ್‌ ಶಮಿ ಮತ್ತು&nbsp;ಹಸೀನ್‌ ಜಹಾನ್‌</p></div>

ಮೊಹಮ್ಮದ್‌ ಶಮಿ ಮತ್ತು ಹಸೀನ್‌ ಜಹಾನ್‌

   

ಕೋಲ್ಕತ್ತ: ‘ಮದುವೆಗೂ ಮುನ್ನ ನಾನು ಮಾಡೆಲಿಂಗ್ ಮತ್ತು ನಟನೆ ಮಾಡುತ್ತಿದ್ದೆ. ಮದುವೆ ನಂತರ ಶಮಿಯ ಒತ್ತಾಯಕ್ಕೆ ವೃತ್ತಿಯನ್ನು ತ್ಯಜಿಸಿದೆ. ಆದರೆ, ಈಗ ನನಗೆ ನನ್ನದೇ ಆದ ಗಳಿಕೆ ಇಲ್ಲ. ನಮ್ಮ ಜೀವನ ನಿರ್ವಹಣೆಯ ಜವಾಬ್ದಾರಿಯನ್ನು ಶಮಿ ಹೊರಬೇಕು’ ಎಂದು ಕ್ರಿಕೆಟಿಗ ಮೊಹಮ್ಮದ್‌ ಶಮಿ ಪತ್ನಿ ಹಸೀನ್‌ ಜಹಾನ್‌ ಹೇಳಿದ್ದಾರೆ.

ಪರಿತ್ಯಕ್ತ ಪತ್ನಿ ಮತ್ತು ಮಗಳಿಗೆ ಪ್ರತಿ ತಿಂಗಳು ₹4 ಲಕ್ಷ ಮಧ್ಯಂತರ ಜೀವನಾಂಶ ನೀಡುವಂತೆ ಕ್ರಿಕೆಟಿಗ ಮೊಹಮ್ಮದ್ ಶಮಿ ಅವರಿಗೆ ಕೋಲ್ಕತ್ತ ಹೈಕೋರ್ಟ್ ಆದೇಶಿಸಿದೆ.

ADVERTISEMENT

ಈ ಬಗ್ಗೆ ಸುದ್ದಿ ಸಂಸ್ಥೆ ಎಎನ್‌ಐ ಜೊತೆ ಮಾತನಾಡಿದ ಹಸೀನ್‌, ‘ನಾನು ಶಮಿಯನ್ನು ತುಂಬಾ ಪ್ರೀತಿಸುತ್ತಿದ್ದೆ. ಆತ ಕೆಲಸ ಬಿಡು ಎಂದಾಗ ಅದನ್ನು ಸಂತೋಷದಿಂದ ಒಪ್ಪಿಕೊಂಡೆ’ ಎಂದಿದ್ದಾರೆ.

‘ಅವರು(ಶಮಿ) ಜವಾಬ್ದಾರಿ ತೆಗೆದುಕೊಳ್ಳಲು ನಿರಾಕರಿಸಿದಾಗ ನಾನು ನ್ಯಾಯಾಲಯದ ಮೆಟ್ಟಿಲು ಹತ್ತಬೇಕಾಯಿತು’ ಎಂದು ಹೇಳಿದ್ದಾರೆ.

‘ಮದುವೆಯಾದ ಹೊಸತರಲ್ಲಿ ವ್ಯಕ್ತಿಯ ಗುಣಗಳನ್ನು ನಿರ್ಧರಿಸಲು ಸಾಧ್ಯವಿಲ್ಲ. ಯಾರ ಮುಖದಲ್ಲಿಯು ಅವರು ಕೆಟ್ಟವರು, ಅಪರಾಧಿಗಳು, ನಿಮ್ಮ ಮತ್ತು ನಿಮ್ಮ ಮಗಳ ಭವಿಷ್ಯದ ಜೊತೆ ಆಟವಾಡುತ್ತಾರೆ ಎಂದು ಬರೆದಿರುವುದಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

‘ಆತನಿಗೆ(ಶಮಿ) ತನ್ನ ಮಗಳನ್ನು ರಕ್ಷಣೆ ಮಾಡಬೇಕು, ಅವಳ ಭವಿಷ್ಯ ರೂಪಿಸಬೇಕು ಮತ್ತು ಅವಳು ಸಂತೋಷವಾಗಿರಬೇಕು ಎಂಬ ಆಶಯವಿಲ್ಲ. ನನ್ನ ಜೀವನವನ್ನು ಹಾಳು ಮಾಡಬೇಕೆಂಬ ಹಠಮಾರಿತನವನ್ನು ಅವನು ಬಿಡಬೇಕು. ಆತ ಅನ್ಯಾಯ ಹಾದಿಯಲ್ಲಿದ್ದಾನೆ. ನಾನು ನ್ಯಾಯದ ಹಾದಿಯಲ್ಲಿದ್ದೇನೆ. ನನ್ನನ್ನು ನಾಶ ಮಾಡಲು ಆತನಿಗೆ ಸಾಧ್ಯವಿಲ್ಲ’ ಎಂದಿದ್ದಾರೆ.

₹4 ಲಕ್ಷ ಮಧ್ಯಂತರ ಜೀವನಾಂಶ:

ಒಟ್ಟು ₹1,30,000 ಮಧ್ಯಂತರ ಜೀವನಾಂಶ ಪಾವತಿಸುವಂತೆ ಸೆಷನ್ಸ್ ನ್ಯಾಯಾಲಯ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಹಸೀನ್ ಜಹಾನ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಪೀಠ, ಶಮಿ ವಿರುದ್ಧದ ಕೌಟುಂಬಿಕ ದೌರ್ಜನ್ಯ ಪ್ರಕರಣ ಇತ್ಯರ್ಥವಾಗುವವರೆಗೆ ಪತ್ನಿಗೆ ₹1,50,000 ಮತ್ತು ಮಗಳಿಗೆ ₹2,50,000 ಪರಿಹಾರ ನೀಡಬೇಕು ಎಂದು ನಿರ್ದೇಶಿಸಿದೆ. 

ಶಮಿ ಅವರನ್ನು 2014ರಲ್ಲಿ ವಿವಾಹವಾಗಿದ್ದ ಜಹಾನ್‌, 2018ರಲ್ಲಿ ಪತಿ ವಿರುದ್ಧ ಕೌಟುಂಬಿಕ ದೌರ್ಜನ್ಯದ ದೂರು ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.