ADVERTISEMENT

ಧೋನಿ ಕೊನೇ ಪಂದ್ಯ? ಪತ್ನಿ ಸಾಕ್ಷಿ ಮಗಳಿಗೆ ಹೇಳಿದ್ದೇನು? ಹರಿದಾಡುತ್ತಿದೆ ವಿಡಿಯೊ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಏಪ್ರಿಲ್ 2025, 2:24 IST
Last Updated 6 ಏಪ್ರಿಲ್ 2025, 2:24 IST
<div class="paragraphs"><p>ಎಂ.ಎಸ್‌. ಧೋನಿ ಹಾಗೂ ಅವರ ಪತ್ನಿ&nbsp;ಸಾಕ್ಷಿ,&nbsp;ಮಗಳು ಜೀವಾ (ಒಳಚಿತ್ರದಲ್ಲಿ)</p></div>

ಎಂ.ಎಸ್‌. ಧೋನಿ ಹಾಗೂ ಅವರ ಪತ್ನಿ ಸಾಕ್ಷಿ, ಮಗಳು ಜೀವಾ (ಒಳಚಿತ್ರದಲ್ಲಿ)

   

ಪಿಟಿಐ ಚಿತ್ರಗಳು

ಭಾರತ ಕ್ರಿಕೆಟ್‌ ತಂಡ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಮಾಜಿ ನಾಯಕ ಎಂ.ಎಸ್‌. ಧೋನಿ ಅವರು ಐಪಿಎಲ್‌ಗೆ ವಿದಾಯ ಹೇಳಲಿದ್ದಾರೆ ಎಂಬ ಮಾತು ಸಾಮಾಜಿಕ ಮಾಧ್ಯಮಗಳಲ್ಲಿ ಕೇಳಿ ಬರುತ್ತಿದೆ.

ADVERTISEMENT

ಅದಕ್ಕೆ ತಕ್ಕಂತೆ, ಧೋನಿ ಅವರ ಪೋಷಕರು ಇದೇ ಮೊದಲ ಬಾರಿಗೆ ಐಪಿಎಲ್‌ ಪಂದ್ಯ ಕ್ರೀಡಾಂಗಣದಲ್ಲಿ ವೀಕ್ಷಿಸಿದ್ದಾರೆ. ತಂದೆ ಪಾನ್‌ ಸಿಂಗ್‌ ಹಾಗೂ ತಾಯಿ ದೇವಕಿ ದೇವಿ ಅವರು, ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಚೆನ್ನೈ vs ಡೆಲ್ಲಿ ಕ್ಯಾಪಿಟಲ್ಸ್‌ ಪಂದ್ಯವನ್ನು ವೀಕ್ಷಿಸಿದರು. ಈ ವೇಳೆ, ಧೋನಿ ಅವರ ಪತ್ನಿ ಸಾಕ್ಷಿ, ಪುತ್ರಿ ಜೀವಾ ಅವರೂ ಕ್ರೀಡಾಂಗಣದಲ್ಲಿದ್ದರು.

ಇದಾದ ಬಳಿಕ ಧೋನಿ ವಿದಾಯದ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಚರ್ಚೆಯಾಗುತ್ತಿದೆ.

ಪಂದ್ಯ ವೀಕ್ಷಣೆ ಸಂದರ್ಭದಲ್ಲಿ ಸಾಕ್ಷಿ ಅವರು ಮಗಳು ಜೀವಾ ಜೊತೆ ಮಾತನಾಡುತ್ತಿರುವ ವಿಡಿಯೊವೊಂದು ಹರಿದಾಡುತ್ತಿದೆ. ವಿಡಿಯೊ ಹಂಚಿಕೊಂಡಿರುವ ಹಲವರು, 'ಇದೇ ಕೊನೇ ಪಂದ್ಯ' ಎಂದು ಸಾಕ್ಷಿ ಮಗಳಿಗೆ ಹೇಳಿದ್ದಾರೆ ಎಂಬುದಾಗಿ ಹಂಚಿಕೊಂಡಿದ್ದಾರೆ. ಆದರೆ, ವಿಡಿಯೊದಲ್ಲಿ ಏನು ಹೇಳಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ.

ಹ್ಯಾಟ್ರಿಕ್‌ ಸೋಲು
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್‌ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 183 ರನ್ ಕಲೆಹಾಕಿತು.

ಈ ಗುರಿ ಬೆನ್ನತ್ತಿದ ಚೆನ್ನೈ, ನಿಗದಿತ ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 158 ರನ್‌ ಗಳಿಸಲಷ್ಟೇ ಶಕ್ತವಾಯಿತು. 7ನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಇಳಿದ ಧೋನಿ, 26 ಎಸೆತಗಳಲ್ಲಿ 30 ರನ್‌ ಗಳಿಸಿ ಅಜೇಯರಾಗಿ ಉಳಿದರು.

ಟೂರ್ನಿಯಲ್ಲಿ ನಾಲ್ಕು ಪಂದ್ಯಗಳನ್ನು ಆಡಿರುವ ಚೆನ್ನೈ ಮೊದಲ ಪಂದ್ಯದಲ್ಲಿ ಮುಂಬೈ ವಿರುದ್ಧ ಗೆದ್ದಿತ್ತು. ನಂತರ ಹ್ಯಾಟ್ರಿಕ್‌ ಸೋಲು ಅನುಭವಿಸಿದೆ. ಎರಡು ಮತ್ತು ಮೂರನೇ ಪಂದ್ಯಗಳಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು, ರಾಜಸ್ಥಾನ ರಾಯಲ್ಸ್‌ ಎದುರು ಮುಗ್ಗರಿಸಿತ್ತು.

ಇತ್ತ ಡೆಲ್ಲಿ ತಂಡ ಗೆಲುವಿನ ಓಟ ಮುಂದುವರಿಸಿದೆ. ಆಡಿರುವ ಮೂರೂ ಪಂದ್ಯಗಳನ್ನು ಗೆದ್ದು, ಪಾಯಿಂಟ್‌ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.