
ಮುಷ್ಫಿಕರ್ ರಹೀಂ (ಸಂಗ್ರಹ ಚಿತ್ರ)
ಕೃಪೆ: ಪಿಟಿಐ
ಢಾಕಾ: ಬಾಂಗ್ಲಾದೇಶ ಕ್ರಿಕೆಟ್ ತಂಡದ ಪರ ನೂರನೇ ಟೆಸ್ಟ್ ಪಂದ್ಯ ಆಡುತ್ತಿರುವ ಅನುಭವಿ ಮುಷ್ಫಿಕರ್ ರಹೀಂ ಅವರು, ವಿಶೇಷ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
ಢಾಕಾದ ಶೇರ್ ಬಾಂಗ್ಲಾ ನ್ಯಾಷನಲ್ ಸ್ಟೇಡಿಯಂನಲ್ಲಿ ಐರ್ಲೆಂಡ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ಅವರು, ಈ ಮಾದರಿಯಲ್ಲಿ ಆಡಿದ ನೂರನೇ ಟೆಸ್ಟ್‌ನಲ್ಲಿ ಮೂರಂಕಿಯ ಗಡಿ ದಾಟಿದ 11ನೇ ಬ್ಯಾಟರ್ ಎಂಬ ಶ್ರೇಯಕ್ಕೆ ಭಾಜನರಾಗಿದ್ದಾರೆ.
ಬುಧವಾರ ಆರಂಭವಾದ ಪಂದ್ಯದಲ್ಲಿ ಟಾಸ್ ಗೆದ್ದ ಆತಿಥೇಯ ತಂಡ, ಎರಡನೇ ದಿನ ಊಟದ ವಿರಾಮದ ಹೊತ್ತಿಗೆ 120 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 387 ರನ್ ಗಳಿಸಿದೆ. 214 ಎಸೆತಗಳನ್ನು ಎದುರಿಸಿದ ರಹೀಂ 5 ಬೌಂಡರಿ ಸಹಿತ 106 ರನ್ ಗಳಿಸಿ ಔಟಾಗಿದ್ದಾರೆ. ಶತಕ ಸಿಡಿಸಿರುವ ಮತ್ತೊಬ್ಬ ಆಟಗಾರ ಲಿಟನ್ ದಾಸ್ (103 ರನ್) ಮತ್ತು ಮೆಹದಿ ಹಸನ್ ಮಿರಾಜ್ (30 ರನ್) ಕ್ರೀಸ್‌ನಲ್ಲಿದ್ದಾರೆ.
ಬಾಂಗ್ಲಾ ಪರ ಅತಿಹೆಚ್ಚು ಟೆಸ್ಟ್ ಪಂದ್ಯ ಆಡಿದ ಆಟಗಾರ ಎನಿಸಿರುವ ರಹೀಂ, ಈವರೆಗೆ ಬ್ಯಾಟ್ ಬೀಸಿರುವ 183 ಇನಿಂಗ್ಸ್‌ಗಳಲ್ಲಿ 38.21ರ ಸರಾಸರಿಯಲ್ಲಿ 6,457 ರನ್ ಕಲೆಹಾಕಿದ್ದಾರೆ. ಇದರಲ್ಲಿ 13 ಶತಕ ಮತ್ತು 27 ಅರ್ಧಶತಕಳಿವೆ. ಮೂರು ಸಲ ದ್ವಿಶತಕದ ಗಡಿ ದಾಟಿರುವ ಅವರ ವೈಯಕ್ತಿಕ ಗರಿಷ್ಠ ಮೊತ್ತ 219.
ನೂರನೇ ಪಂದ್ಯದಲ್ಲಿ ಶತಕ ಸಿಡಿಸಿದ ಬ್ಯಾಟರ್‌ಗಳು
ಕಾಲಿನ್ ಕೌಡ್ರೀ (ಇಂಗ್ಲೆಂಡ್): 104 ರನ್ vs ಆಸ್ಟ್ರೇಲಿಯಾ – 1968
ಜಾವೇಸ್ ಮಿಯಾಂದಾದ್ (ಪಾಕಿಸ್ತಾನ): 145 ರನ್ vs ಭಾರತ – 1989
ಗಾರ್ಡನ್ ಗ್ರೀನಿಡ್ಜ್ (ವೆಸ್ಟ್ ಇಂಡೀಸ್): 149 ರನ್ vs ಇಂಗ್ಲೆಂಡ್ – 1990
ಅಲೆಕ್ ಸ್ಟೆವರ್ಡ್ (ಇಂಗ್ಲೆಂಡ್): 105 ರನ್ vs ವೆಸ್ಟ್ ಇಂಡೀಸ್ – 2000
ಇಂಜಮಾಮ್ ಉಲ್ ಹಕ್ (ಪಾಕಿಸ್ತಾನ): 184 ರನ್ vs ಭಾರತ – 2005
ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ): 120 ಹಾಗೂ ಔಟಾಗದೆ 143 ರನ್ vs ದಕ್ಷಿಣ ಆಫ್ರಿಕಾ – 2006
ಗ್ರೇಮ್ ಸ್ಮಿತ್ (ದಕ್ಷಿಣ ಆಫ್ರಿಕಾ): 131 ರನ್ vs ಇಂಗ್ಲೆಂಡ್ – 2012
ಹಾಶೀಂ ಆಮ್ಲಾ (ದಕ್ಷಿಣ ಆಫ್ರಿಕಾ): 134 ರನ್ vs ಶ್ರೀಲಂಕಾ – 2017
ಜೋ ರೂಟ್ (ಇಂಗ್ಲೆಂಡ್): 218 ರನ್ vs ಭಾರತ - 2021
ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ): 200 ರನ್ vs ದಕ್ಷಿಣ ಆಫ್ರಿಕಾ - 2022
ಮುಷ್ಫಿಕರ್ ರಹೀಂ (ಬಾಂಗ್ಲಾದೇಶ): 106 ರನ್ vs ಐರ್ಲೆಂಡ್ – 2025
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.