ADVERTISEMENT

T20 series: ನ್ಯೂಜಿಲೆಂಡ್ ಎದುರು ಪಾಕ್‌ಗೆ ಮುಖಭಂಗ

ಏಜೆನ್ಸೀಸ್
Published 23 ಮಾರ್ಚ್ 2025, 12:29 IST
Last Updated 23 ಮಾರ್ಚ್ 2025, 12:29 IST
<div class="paragraphs"><p>ಚಿತ್ರ ಕೃಪೆ: ಎಕ್ಸ್‌</p></div>
   

ಚಿತ್ರ ಕೃಪೆ: ಎಕ್ಸ್‌

ಮೌಂಟ್‌ ಮಾಂಗಾನುಯಿ (ನ್ಯೂಜಿಲೆಂಡ್‌): ನ್ಯೂಜಿಲೆಂಡ್‌ ವೇಗದ ದಾಳಿಗೆ ಸಿಲುಕಿದ ಪಾಕಿಸ್ತಾನ ಭಾನುವಾರ ನಡೆದ ಟಿ20 ಸರಣಿಯ ನಾಲ್ಕನೇ ಪಂದ್ಯದಲ್ಲಿ 115 ರನ್‌ಗಳ ಮುಖಭಂಗ ಅನುಭವಿಸಿತು. ಒಂದು ಪಂದ್ಯ ಉಳಿದಿರುವಂತೆ ಸರಣಿಯನ್ನು ನ್ಯೂಜಿಲೆಂಡ್‌ 3–1 ಕೈವಶ ಮಾಡಿಕೊಂಡಿದೆ.

ಇದು ಚುಟುಕು ಮಾದರಿಯಲ್ಲಿ ಪಾಕ್‌ ಅನುಭವಿಸಿದ ಅತಿ ದೊಡ್ಡ ಅಂತರದ ಸೊಲೆನಿಸಿತು. ವೆಲಿಂಗ್ಟನ್‌ನಲ್ಲಿ 9 ವರ್ಷಗಳ ಹಿಂದೆ ಇದೇ ತಂಡದ ವಿರುದ್ಧ 95 ರನ್ ಅಂತರದ ಸೋಲಾಗಿತ್ತು. ಅಂತಿಮ ಪಂದ್ಯ ಬುಧವಾರ ವೆಲಿಂಗ್ಟನ್‌ನಲ್ಲಿ ನಡೆಯಲಿದೆ.

ADVERTISEMENT

ಆತಿಥೇಯರು 6 ವಿಕೆಟ್‌ಗೆ 220 ರನ್ ಗಳಿಸಿದ ಮೇಲೆ ಪಾಕಿಸ್ತಾನ 17ನೇ ಓವರಿನಲ್ಲಿ 105 ರನ್‌ಗಳಿಗೆ ಉರುಳಿತು. ಜಾಕೋಬ್ ಡಫಿ 20 ರನ್ನಿಗೆ 4 ವಿಕೆಟ್‌ ಪಡೆದರೆ, ಮತ್ತೊಬ್ಬ ವೇಗಿ ಝಕಾರಿ ಫಾಲ್ಕ್ಸ್‌ 25 ರನ್ನಿಗೆ 3 ವಿಕೆಟ್ ಗಳಿಸಿದರು. ಒಂದು ಹಂತದಲ್ಲಿ 56 ರನ್ನಿಗೆ 8 ವಿಕೆಟ್‌ ಕಳೆದುಕೊಂಡಿದ್ದ ಪಾಕಿಸ್ತಾನ ಆಲ್‌ರೌಂಡರ್ ಅಬ್ದುಲ್ ಸಮದ್ ಅವರು 44 ರನ್‌ಗಳ (30 ಎಸೆತ) ಆಟದಿಂದ ನೂರರ ಗಡಿ ದಾಟಲು ಸಾಧ್ಯವಾಯಿತು. ಅವರನ್ನು ಬಿಟ್ಟರೆ ಎರಡಂಕಿ ಮೊತ್ತ ಗಳಿಸಿದ ಇನ್ನೊಬ್ಬ ಆಟಗಾರ ಇರ್ಫಾನ್ ಖಾನ್ (24) ಮಾತ್ರ.

ಇದಕ್ಕೆ ಮೊದಲು, ಫಿನ್ ಅಲೆನ್ (50, 20ಎ) ಮತ್ತು ಟಿಮ್‌ ಸೀಫರ್ಟ್‌ (44, 22ಎ) ನ್ಯೂಜಿಲೆಂಡ್‌ಗೆ ಉತ್ತಮ ಆರಂಭ ನೀಡಿದರು. ನಾಯಕ ಮೈಕೆಲ್ ಬ್ರೇಸ್‌ವೆಲ್‌ (ಅಜೇಯ 46, 26ಎ) ಅಂತಿಮ ಹಂತದಲ್ಲಿ ರನ್ ವೇಗ ಹೆಚ್ಚಿಸಿದರು.

ಸ್ಕೋರುಗಳು: ನ್ಯೂಜಿಲೆಂಡ್‌ 20 ಓವರುಗಳಲ್ಲಿ 220 (ಟಿಮ್‌ ಸೀಫರ್ಟ್ 44, ಫಿನ್ ಅಲೆನ್ 50, ಮೈಕೆಲ್‌ ಬ್ರೇಸ್‌ವೆಲ್‌ ಔಟಾಗದೇ 46; ಹ್ಯಾರಿಸ್ ರವೂಫ್‌ 27ಕ್ಕೆ3); ಪಾಕಿಸ್ತಾನ: 16.2 ಓವರುಗಳಲ್ಲಿ 105 (ಅಬ್ದುಲ್ ಸಮದ್‌ 44; ಜಾಕೋಬ್ ಡಫಿ 20ಕ್ಕೆ4, ಝಕಾರಿ ಫಾಲ್ಕ್ಸ್‌ 25ಕ್ಕೆ3). ಪಂದ್ಯದ ಆಟಗಾರ: ಫಿನ್ ಅಲೆನ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.