ಐಸಿಸಿ
ದುಬೈ: ನ್ಯೂಜಿಲೆಂಡ್ ಆಲ್‌ರೌಂಡರ್, ಮೆಲಿ ಕೆರ್ ಅವರು 2024ರ ತಮ್ಮ ಅಸಾಧಾರಣ ಪ್ರದರ್ಶನಕ್ಕಾಗಿ ವರ್ಷದ ಐಸಿಸಿ ಮಹಿಳಾ ಕ್ರಿಕೆಟ್ ಆಟಗಾರ್ತಿ ಪ್ರಶಸ್ತಿಯನ್ನು ಗೆದ್ದಿದ್ದಾರೆ.
24ರ ಹರೆಯದ ಮೆಲಿ, ಲಾರಾ ವೊಲ್ವಾರ್ಡ್ಟ್, ಚಾಮರಿ ಅಟಪಟ್ಟು ಮತ್ತು ಅನ್ನಾಬೆಲ್ ಸದರ್‌ಲ್ಯಾಂಡ್‌ರಂತಹ ಖ್ಯಾತನಾಮರನ್ನು ಹಿಂದಿಕ್ಕಿ ಈ ಅಗ್ರ ಗೌರವಕ್ಕೆ ಪಾತ್ರರಾಗಿದ್ದಾರೆ.
ವರ್ಷದ ಮಹಿಳಾ ಕ್ರಿಕೆಟ್ ಆಟಗಾರ್ತಿ ಗೌರವ ಪಡೆದ ಮೊದಲ ಕಿವೀಸ್ ಆಟಗಾರ್ತಿಯಾಗಿದ್ದಾರೆ.
ವರ್ಷದುದ್ದಕ್ಕೂ, ಕೆರ್ ವಿಶ್ವ ದರ್ಜೆಯ ಆಲ್‌ರೌಂಡರ್ ಆಟ ಪ್ರದರ್ಶಿಸಿದ್ದಾರೆ. ಅವರ ಅತ್ಯುತ್ತಮ ಫೀಲ್ಡಿಂಗ್ ನ್ಯೂಜಿಲೆಂಡ್ ತಂಡಕ್ಕೆ ಹಲವು ಬಾರಿ ನೆರವಾಗಿದೆ. ಲೆಗ್ ಸ್ಪಿನ್ನರ್ ಆಗಿ ಅವರ ಕೌಶಲ್ಯವು ಪರಿಣಾಮಕಾರಿಯಾಗಿತ್ತು.
2024ರಲ್ಲಿ ಮೆಲಿ ಕೆರ್ ಅವರು ಒಂಬತ್ತು ಏಕದಿನ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 33ರ ಸರಾಸರಿಯಲ್ಲಿ 264 ರನ್ ಗಳಿಸಿದ್ದು, 14 ವಿಕೆಟ್ ಉರುಳಿಸಿದ್ದಾರೆ.
ಟಿ20 ಕ್ರಿಕೆಟ್‌ನಲ್ಲಿ ಅವರ ಪ್ರದರ್ಶನವು ಅವರಿಗೆ ವರ್ಷದ ಕ್ರಿಕೆಟರ್ ಪ್ರಶಸ್ತಿಯನ್ನು ತಂದುಕೊಟ್ಟಿದೆ. 2024ರಲ್ಲಿ 18 ಟಿ–20 ಪಂದ್ಯಗಳನ್ನು ಆಡಿರುವ ಅವರು 24.18ರ ಸರಾಸರಿಯಲ್ಲಿ 387 ರನ್ ಗಳಿಸಿದ್ದು, 29 ವಿಕೆಟ್ ಉರುಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.