ADVERTISEMENT

ಏಕದಿನ ಕ್ರಿಕೆಟ್ ಮಾದರಿಯ ಅಳಿವು: ಮೋಯಿನ್ ಅಲಿ

ಪಿಟಿಐ
Published 7 ಮಾರ್ಚ್ 2025, 15:49 IST
Last Updated 7 ಮಾರ್ಚ್ 2025, 15:49 IST
ಮೋಯಿನ್ ಅಲಿ
ಮೋಯಿನ್ ಅಲಿ   

ಲಂಡನ್: ಏಕದಿನ ಕ್ರಿಕೆಟ್ ಮಾದರಿಯು ಅಳಿವಿನಂಚಿನಲ್ಲಿದೆ. ಕೆಲವು ನಿಯಮಗಳಿಂದಾಗಿ ಈ ಮಾದರಿಯು ಸತ್ವ ಕಳೆದುಕೊಳ್ಳುತ್ತಿದೆ. ವಿಶ್ವಕಪ್ ಮತ್ತು ಚಾಂಪಿಯನ್ಸ್‌ ಟ್ರೋಫಿ ಟೂರ್ನಿಗಳನ್ನು ಬಿಟ್ಟರೆ, ಏಕದಿನ ಮಾದರಿಯು ನಶಿಸಿದೆ ಎಂದು ಇಂಗ್ಲೆಂಡ್ ತಂಡದ ಮಾಜಿ ಆಲ್‌ರೌಂಡರ್ ಮೋಯಿನ್ ಅಲಿ ಅಭಿಪ್ರಾಯಪಟ್ಟಿದ್ದಾರೆ.

‘ನಿಯಮಗಳು ಬಹಳ ಕೆಟ್ಟದಾಗಿವೆ. ಎರಡು ಚೆಂಡುಗಳನ್ನು ಬಳಕೆ ಮಾಡುತ್ತಿರುವುದು ಆಟದ ಅಂತಃಸತ್ವವನ್ನೇ ನುಂಗಿದೆ. ರಿವರ್ಸ್ ಸ್ವಿಂಗ್ ಹಾಕಲು ಸಾಧ್ಯವಾಗುತ್ತಿಲ್ಲ. ಅಲ್ಲದೇ ಹಳೆಯ ಚೆಂಡನ್ನು (ಮೃದುಗೊಂಡ) ಹೊಡೆಯುವ ಬ್ಯಾಟಿಂಗ್ ಕಲೆಯೂ ಮರೆಯಾಗಿದೆ. ದೊಡ್ಡ ಹೊಡೆತಗಳಷ್ಟೇ ಕಾಣುತ್ತಿವೆ. ಇದೇ ಕಾರಣಕ್ಕೆ ಈ ಮಾದರಿಯು ಅಂತ್ಯವಾಗಿದೆ’ ಎಂದು ಮೋಯಿನ್ ಅವರು ‘ಟಾಕ್‌ಸ್ಪೋರ್ಟ್ ಕ್ರಿಕೆಟ್’ ನಲ್ಲಿ ಹೇಳಿದ್ದಾರೆ. 

‘ಇನ್ನೊಂದೆಡೆ ಶ್ರೀಮಂತ ಫ್ರ್ಯಾಂಚೈಸಿ ಲೀಗ್‌ ಟೂರ್ನಿಗಳಿಂದಾಗಿಯೂ ಏಕದಿನ ಮಾದರಿ ಕ್ರಿಕೆಟ್ ನಶಿಸುತ್ತಿದೆ. ಹಣ ಗಳಿಕೆಯ ಭರಾಟೆಯೇ ಹೆಚ್ಚಾಗಿದೆ’ ಎಂದು ಹೇಳಿದರು. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.