ADVERTISEMENT

Operation Sindoor | ಐಪಿಎಲ್ ಫೈನಲ್‌ನಲ್ಲಿ ಸೇನಾಪಡೆಗೆ ಗೌರವ; ಉಕ್ಕಿದ ದೇಶಪ್ರೇಮ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಜೂನ್ 2025, 13:39 IST
Last Updated 3 ಜೂನ್ 2025, 13:39 IST
<div class="paragraphs"><p>ಕಲಾವಿದರಿಂದ ನೃತ್ಯ</p></div>

ಕಲಾವಿದರಿಂದ ನೃತ್ಯ

   

(ಚಿತ್ರ ಕೃಪೆ: ಐಪಿಎಲ್)

ಅಹಮದಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದ ಆರಂಭಕ್ಕೂ ಮುನ್ನ ಇತ್ತೀಚಿನ 'ಆಪರೇಷನ್‌ ಸಿಂಧೂರ' ಕಾರ್ಯಾಚರಣೆ ವೇಳೆ ಸೇನಾಪಡೆಯ ವೀರೋಚಿತ ಹೋರಾಟಕ್ಕೆ ಗೌರವ ಸಲ್ಲಿಸಲಾಯಿತು.

ADVERTISEMENT

ಗಾಯಕ ಶಂಕರ್ ಮಹಾದೇವನ್ ನೇತೃತ್ವದ ತಂಡವು ದೇಶಭಕ್ತಿಯ ಗೀತೆಗಳನ್ನು ಹಾಡುವ ಮೂಲಕ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಈ ಸಂದರ್ಭದಲ್ಲಿ ಕಲಾವಿದರು ಹೆಜ್ಜೆ ಹಾಕಿದ್ದಾರೆ.

ಆಕಾಶದಲ್ಲಿ ಭಾರತೀಯ ಸಶಸ್ತ್ರ ಪಡೆಗಳನ್ನು ಪ್ರತಿನಿಧಿಸುತ್ತಾ ಹೆಲಿಕಾಪ್ಟರ್ ಮೂಲಕ ಕವಾಯತು ನಡೆಸಲಾಯಿತು.

ಇಂದಿನ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ.

ಪಹಲ್ಗಾಮ್‌ನಲ್ಲಿ ಏಪ್ರಿಲ್‌ 22ರಂದು ಪ್ರವಾಸಿಗರ ಮೇಲೆ ಭಯೋತ್ಪಾದನೆ ದಾಳಿ ನಡೆದಿದ್ದು, ಇದಕ್ಕೆ ಪ್ರತಿಯಾಗಿ ಭಾರತ 'ಆಪರೇಷನ್ ಸಿಂಧೂರ' ಹೆಸರಿನಲ್ಲಿ ಉಗ್ರರ ಅಡಗುದಾಣಗಳ ಮೇಲೆ ದಾಳಿ ನಡೆಸಿತ್ತು.

ಭಾರತ ಹಾಗೂ ಪಾಕಿಸ್ತಾನ ನಡುವಣ ಸಂಘರ್ಷದಿಂದಾಗಿ ಐಪಿಎಲ್ ಒಂದು ವಾರದಷ್ಟು ಕಾಲ ಸ್ಥಗಿತಗೊಂಡಿತ್ತು. ಧರ್ಮಶಾಲಾದಲ್ಲಿ 'ಬ್ಲ್ಯಾಕ್ ಔಟ್' ಕ್ರಮದಿಂದಾಗಿ ಪಂದ್ಯವನ್ನು ಅರ್ಧದಲ್ಲೇ ಮೊಟಕುಗೊಳಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.