ADVERTISEMENT

ಪಾಕ್ ಸ್ವಾತಂತ್ರ್ಯ ದಿನಾಚರಣೆಗೆ ವಿಷ್ ಮಾಡಿ ಟ್ರೋಲ್‌ಗೆ ಗುರಿಯಾದ ಕಮ್ರಾನ್ ಅಕ್ಮಲ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಆಗಸ್ಟ್ 2021, 6:43 IST
Last Updated 14 ಆಗಸ್ಟ್ 2021, 6:43 IST
ಚಿತ್ರ ಕೃಪೆ: @KamiAkmal23, Twitter
ಚಿತ್ರ ಕೃಪೆ: @KamiAkmal23, Twitter   

ನವದೆಹಲಿ: ಪಾಕಿಸ್ತಾನದಲ್ಲಿ ಆಗಸ್ಟ್ 14ರಂದು ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಈ ನಡುವೆ ಶುಭಾಶಯ ಕೋರಿರುವ ಪಾಕಿಸ್ತಾನದ ಕ್ರಿಕೆಟಿಗ ಕಮ್ರಾನ್ ಅಕ್ಮಲ್ ಟ್ರೋಲ್‌ಗೆ ಗುರಿಯಾಗಿದ್ದಾರೆ.

ಆಂಗ್ಲ ಭಾಷೆಯಲ್ಲಿ ಇಂಡಿಪೆಂಡೆನ್ಸ್ ಡೇ ಪದವನ್ನು ತಪ್ಪಾಗಿ ಉಲ್ಲೇಖಿಸುವ (Indepence) ಮೂಲಕ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಈ ಹಿಂದೆಯೂ ಆಂಗ್ಲ ಪದಗಳನ್ನು ತಪ್ಪಾಗಿ ಉಲ್ಲೇಖಿಸುವ ಮೂಲಕ ಕಮ್ರಾನ್ ಎಡವಟ್ಟು ಮಾಡಿಕೊಂಡಿದ್ದರು. ಹಲವು ಬಾರಿ ಕ್ರಿಕೆಟ್ ಸಂದರ್ಶನದ ವೇಳೆಯೂ ಕಮ್ರಾನ್ ಪೇಚಿಗೆ ಸಿಲುಕಿದ್ದರು.

'ಆಂಗ್ಲ ಪದಗಳನ್ನು ತಪ್ಪಾಗಿ ಉಲ್ಲೇಖಿಸುವ ಮೂಲಕ ಬ್ರಿಟಿಷರ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿರುವ ಏಕೈಕ ವ್ಯಕ್ತಿ ನೀವು' ಎಂದು ಟ್ವಿಟರ್ ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ದಾರೆ.

ಪಾಕಿಸ್ತಾನಕ್ಕೆ ಬೇರೆಯೇ ಆದ ಪದಕೋಶವಿದೆ ಎಂದು ಮತ್ತೊಬ್ಬ ಟ್ವಿಟರ್ ಬಳಕೆದಾರ ಕಾಲೆಳೆದಿದ್ದಾರೆ.

ಕೆಲವರ ಕೀಬೋರ್ಡ್‌ಗಳಲ್ಲಿ 'ಆಟೋ-ಕರೆಕ್ಟ್' ಆಯ್ಕೆ ಇರುತ್ತದೆ. ಆದರೆ ಕಮ್ರಾನ್ ಕಿಬೋರ್ಡ್ 'ಆಟೋ-ವ್ರಾಂಗ್' ಆಗಿದೆ ಎಂದು ಮಗದೊಬ್ಬರು ಟ್ರೋಲ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.