ADVERTISEMENT

ಅಂಧರ ಕ್ರಿಕೆಟ್‌: ಪಾಕಿಸ್ತಾನಕ್ಕೆ ಸರಣಿ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2021, 15:35 IST
Last Updated 4 ಏಪ್ರಿಲ್ 2021, 15:35 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಭಾರತ ಅಂಧರ ತಂಡವನ್ನು ಮಣಿಸಿದ ಪಾಕಿಸ್ತಾನ ಅಂಧರ ಕ್ರಿಕೆಟ್ ತಂಡವು ಟ್ವೆಂಟಿ–20 ತ್ರಿಕೋನ ಸರಣಿಯನ್ನು ಗೆದ್ದುಕೊಂಡಿತು. ಬಾಂಗ್ಲಾದೇಶದ ಢಾಕಾದಲ್ಲಿ ಭಾನುವಾರ ನಡೆದ ಫೈನಲ್‌ ಪಂದ್ಯದಲ್ಲಿ ಪಾಕಿಸ್ತಾನ 62 ರನ್‌ಗಳಿಂದ ಗೆದ್ದಿತು.

ಬಾಂಗ್ಲಾದೇಶದಲ್ಲಿ ಕೋವಿಡ್–19 ಹಿನ್ನೆಲೆಯಲ್ಲಿ ಲಾಕ್‌ಡೌನ್ ಜಾರಿಯಾಗುತ್ತಿರುವುದರಿಂದ ಓವರ್‌ಗಳನ್ನು 15ಕ್ಕೆ ಇಳಿಸಲಾಗಿತ್ತು.ಟಾಸ್‌ ಗೆದ್ದ ಭಾರತ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ನಾಯಕ ನಿಸಾರ್ ಅಲಿ ಅರ್ಧಶತಕ (ಔಟಾಗದೆ 69) ಹಾಗೂ ಜಾಫರ್ ಇಕ್ಬಾಲ್ (48) ಅವರ ಆಟದ ಬಲದಿಂದ ಪಾಕಿಸ್ತಾನ ನಿಗದಿತ ಓವರ್‌ಗಳಲ್ಲಿ 3 ವಿಕೆಟ್‌ಗೆ 174 ರನ್ ಗಳಿಸಿತು. ಭಾರತ ತಂಡದ ನಾಯಕ ಅಜಯ್ ಕುಮಾರ್ ರೆಡ್ಡಿ ಎರಡು ವಿಕೆಟ್ ಗಳಿಸಿದರು.

ಗುರಿ ಬೆನ್ನತ್ತಿದ ಭಾರತಕ್ಕೆ 15 ಓವರ್‌ಗಳಲ್ಲಿ ಏಳು ವಿಕೆಟ್‌ ಕಳೆದುಕೊಂಡು 112 ರನ್‌ ಗಳಿಸಲಷ್ಟೇ ಸಾಧ್ಯವಾಯಿತು. ಸುನಿಲ್ ರಮೇಶ್‌ (39), ಪಂಕಜ್ ಭುಯೆ (23) ಹಾಗೂ ಡಿ.ವೆಂಕಟೇಶ್ವರ ರಾವ್ (22) ಅವರ ಪ್ರಯತ್ನ ಗೆಲುವಿಗೆ ಸಾಕಾಗಲಿಲ್ಲ. ಪಾಕಿಸ್ತಾನದ ಸಾಜಿದ್ ನವಾಜ್‌ ಎರಡು ವಿಕೆಟ್ ಕಿತ್ತರು.

ADVERTISEMENT

ಇದಕ್ಕೂ ಮೊದಲು ನಡೆದ ಲೀಗ್‌ ಪಂದ್ಯದಲ್ಲಿ ಭಾರತ ತಂಡವು ಆತಿಥೇಯ ಬಾಂಗ್ಲಾದೇಶವನ್ನು ಸೋಲಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.