ADVERTISEMENT

ಟಿ20 ವಿಶ್ವಕಪ್‌ ಸೆಮಿಫೈನಲ್‌: ಪಾಕ್‌ಗೆ ಹೀಗಿದೆ ಲೆಕ್ಕಾಚಾರ

ಪಿಟಿಐ
Published 28 ಫೆಬ್ರುವರಿ 2026, 1:31 IST
Last Updated 28 ಫೆಬ್ರುವರಿ 2026, 1:31 IST
   

ಪಾಕಿಸ್ತಾನ ತಂಡವು ಶನಿವಾರ ನಡೆಯುವ ಎರಡನೇ ಗುಂಪಿನ ಸೂಪರ್ ಎಂಟರ ಹಂತದ ಕೊನೆಯ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ತಂಡವನ್ನು ಎದುರಿಸಲಿದೆ.

ಈ ಪಂದ್ಯ ಪಾಕಿಸ್ತಾನದ ಪಾಲಿಗಷ್ಟೇ ಮಹತ್ವದ್ದು. ಶ್ರೀಲಂಕಾ ಈಗಾಗಲೇ ನಾಕೌಟ್ ಹಾದಿಯಿಂದ ಹೊರಬಿದ್ದಿದೆ. ಇಂಗ್ಲೆಂಡ್ ವಿರುದ್ಧ ಶುಕ್ರವಾರ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ ಸೋತಿರುವ ಕಾರಣ ಪಾಕಿಸ್ತಾನದ ಸೆಮಿಫೈನಲ್ ಆಸೆ ಜೀವಂತವಾಗಿ ಉಳಿದಿದೆ.

ಆದರೆ ಪಾಕಿಸ್ತಾನ ಗೆಲುವಷ್ಟೇ ಸಾಲದು. ಅದು 64 ರನ್‌ಗಳ ಅಂತರದಿಂದ ಗೆಲ್ಲಬೇಕು. ಎರಡನೇಯದಾಗಿ ಬ್ಯಾಟ್ ಮಾಡಿದಲ್ಲಿ ಕನಿಷ್ಠ 13.1 ಓವರುಗಳಲ್ಲಿ ಶ್ರೀಲಂಕಾ ನಿಗದಿಪಡಿಸಿದ ಗುರಿ ಸಾಧಿಸಬೇಕಾಗುತ್ತದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.