ಇಂಗ್ಲೆಂಡ್ ಆಟಗಾರರ ಸಂಭ್ರಮ ಹಾಗೂ ಶತಕ ಗಳಿಸಿದ ರಿಷಭ್ ಪಂತ್
ಲೀಡ್ಸ್: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಭಾರತ 471 ರನ್‌ಗಳಿಗೆ ಆಲೌಟ್ ಆಗಿದೆ.
ಎರಡನೇ ದಿನದಲ್ಲಿ ತ್ವರಿತವಾಗಿ ವಿಕೆಟ್ ಕಳೆದುಕೊಂಡ ಭಾರತ, ಬೃಹತ್ ಮೊತ್ತ ಪೇರಿಸುವ ಅವಕಾಶ ಕಳೆದುಕೊಂಡಿತು.
359 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಎರಡನೇ ದಿನದಾಟ ಆರಂಭಿಸಿದ ಭಾರತದ ರನ್ ವೇಗವನ್ನು ನಾಯಕ ಶುಭಮನ್ ಗಿಲ್ ಹಾಗೂ ಉಪನಾಯಕ ರಿಷಭ್ ಪಂತ್ ಕಾಪಿಟ್ಟುಕೊಂಡರು.
ಇವರಿಬ್ಬರು ಔಟಾಗುತ್ತಲೇ ಭಾರತ ದಿಢೀರ್ ಕುಸಿತ ಕಂಡಿತು. ಬಂದ ಬ್ಯಾಟರ್‌ಗಳು ಯಾರೂ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ.
ದಿನದಾಟದ ಆರಂಭದಿಂದಲೂ ಗಿಲ್ ಹಾಗೂ ಪಂತ್ ಬ್ಯಾಟರ್‌ಗಳು ಆಂಗ್ಲ ಬೌಲಿಂಗ್ ದಾಳಿಯನ್ನು ಸುಲಭವಾಗಿ ಎದುರಿಸಿ ರನ್ ಗಳಿಸಿದರು.
ರಿಷಭ್ ಪಂತ್ ಶತಕ ಬಾರಿಸಿದರು. 178 ಎಸೆತಗಳಲ್ಲಿ 134 ರನ್‌ಗಳಿಸಿದ ಅವರ ಇನಿಂಗ್ಸ್‌ನಲ್ಲಿ 12 ಬೌಂಡರಿ ಹಾಗೂ 6 ಸಿಕ್ಸರ್‌ಗಳಿದ್ದವು.
99 ರನ್ ಗಳಿಸಿದ್ದಾಗ ಶೋಯಬ್ ಬಶೀರ್ ಎಸೆತವನ್ನು ಸಿಕ್ಸರ್‌ಗೆ ಅಟ್ಟಿ ಶತಕದ ಸಂಭ್ರಮಾಚರಣೆ ಮಾಡಿದರು. ಶತಕದ ಬಳಿಕ ಆಟದ ವೇಗವನ್ನು ಹೆಚ್ಚಿಸಿಕೊಂಡರು
ಈ ನಡುವೆ ಗಿಲ್ ದೊಡ್ಡ ದೊಡ್ಡ ಹೊಡೆತಕ್ಕೆ ಪ್ರಯತ್ನಿಸಿ ವಿಕೆಟ್ ಚೆಲ್ಲಿದರು. ಅವರ ಕೊಡುಗೆ 147ರನ್. ಇದರಲ್ಲಿ 19 ಬೌಂಡರಿ ಹಾಗೂ 1 ಸಿಕ್ಸರ್ ಸೇರಿದೆ. ಟೆಸ್ಟ್‌ನಲ್ಲಿ ಇದು ಅವರದು ವೈಯಕ್ತಿಕ ಗರಿಷ್ಠ ಮೊತ್ತ.
8 ವರ್ಷಗಳ ಬಳಿಕ ಟೆಸ್ಟ್‌ಗೆ ಮರಳಿದ ಕನ್ನಡಿಗ ಕರುಣ್ ನಾಯರ್ ರನ್ ಗಳಿಸಿದೆ ಪೆವಿಲಿಯನ್‌ಗೆ ಮರಳಿ ನಿರಾಸೆ ಮೂಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.