ADVERTISEMENT

IPL 2025 | RCB vs SRH: ಪಾಟೀದಾರ್, ಕಮಿನ್ಸ್‌ಗೆ ದಂಡ

ಪಿಟಿಐ
Published 24 ಮೇ 2025, 14:02 IST
Last Updated 24 ಮೇ 2025, 14:02 IST
<div class="paragraphs"><p>ರಜತ್ ಪಾಟೀದಾರ್</p></div>

ರಜತ್ ಪಾಟೀದಾರ್

   

ಲಖನೌ: ಶುಕ್ರವಾರ ನಡೆದ ಪಂದ್ಯದಲ್ಲಿ ನಿಗದಿತ ಅವಧಿಯಲ್ಲಿ ಓವರುಗಳನ್ನು ಪೂರೈಸದ ಕಾರಣ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ನಾಯಕ ರಜತ್ ಪಾಟೀದಾರ್ ಮತ್ತು ಸನ್‌ರೈಸರ್ಸ್‌ ಹೈದರಾಬಾದ್ ತಂಡದ ನಾಯಕ ಪ್ಯಾಟ್ ಕಮಿನ್ಸ್ ಅವರಿಗೆ ದಂಡ ವಿಧಿಸಲಾಗಿದೆ.

ಸನ್‌ರೈಸರ್ಸ್‌ ಇದೇ ಮೊದಲ ಬಾರಿ ಈ ತಪ್ಪು ಮಾಡಿದ ಕಾರಣ ಕಮಿನ್ಸ್‌ಗೆ ಅವರಿಗೆ ₹12 ಲಕ್ಷ ದಂಡ ವಿಧಿಸಲಾಗಿದೆ.

ADVERTISEMENT

ಆರ್‌ಸಿಬಿ ಎರಡನೇ ಬಾರಿ ಈ ತಪ್ಪು ಮಾಡಿದಕ್ಕೆ ₹24 ಲಕ್ಷ ದಂಡ ಹೇರಲಾಯಿತು. ‘ಇಂಪ್ಯಾಕ್ಟ್‌ ಪ್ಲೇಯರ್ ಸೇರಿ ಆಡುವ 11ರಲ್ಲಿದ್ದ ತಂಡದ ಆಟಗಾರರು ₹6 ಲಕ್ಷ ಅಥವಾ ಪಂದ್ಯ ಸಂಭಾವನೆಯ ಶೇ 25 ರಷ್ಟು– ಇದರಲ್ಲಿ ಯಾವುದು ಕಡಿಮೆಯೊ ಅದನ್ನು ತೆರಬೇಕಾಗಿದೆ’ ಎಂದು ಐಪಿಎಲ್‌ ಹೇಳಿಕೆಯಲ್ಲಿ ತಿಳಿಸಿದೆ.

ಈ ಪಂದ್ಯವನ್ನು ಪ್ಯಾಟ್‌ ಕಮಿನ್ಸ್ ಪಡೆ 42 ರನ್‌ಗಳಿಂದ ಗೆದ್ದುಕೊಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.