ಪಾಕಿಸ್ತಾನ ಟೆಸ್ಟ್ ತಂಡದ ನಾಯಕ ಶಾನ್ ಮಸೂದ್
ಚಿತ್ರ: @cricbuzz
ಲಾಹೋರ್: ಟೆಸ್ಟ್ ಕ್ರಿಕೆಟ್‌ನಲ್ಲಿ ಪಾಕಿಸ್ತಾನ ತಂಡವನ್ನು ಮುನ್ನಡೆಸುತ್ತಿರುವ ಶಾನ್ ಮಸೂದ್‌ರನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಂತರರಾಷ್ಟ್ರೀಯ ಕ್ರಿಕೆಟ್ ಮತ್ತು ಆಟಗಾರರ ವ್ಯವಹಾರಗಳ ಸಲಹೆಗಾರರನ್ನಾಗಿ ನೇಮಿಸಿದೆ.
ಪಿಸಿಬಿ ಶಾನ್ ಮಸೂದ್ ನೇಮಕಾತಿ ಕುರಿತು ಶುಕ್ರವಾರ ಮಾಹಿತಿ ನೀಡದ್ದು, ಶಾನ್ ನಾಯಕತ್ವದ ಜವಾಬ್ದಾರಿ ಜೊತೆಗೆ ಅಂತರರಾಷ್ಟ್ರೀಯ ಕ್ರಿಕೆಟ್ ಮತ್ತು ಆಟಗಾರರ ವ್ಯವಹಾರಗಳ ಸಲಹೆಗಾರ ಹುದ್ದೆಯನ್ನು ವಹಿಸಿಕೊಳ್ಳಲಿದ್ದಾರೆ ಎಂದು ತಿಳಿಸಿದೆ. ಮಾತ್ರವಲ್ಲ, ಟೆಸ್ಟ್ ತಂಡದ ನಾಯಕನೊಬ್ಬರನ್ನು ಕ್ರಿಕೆಟ್ ಮಂಡಳಿಯ ಮತ್ತೊಂದು ಸ್ಥಾನಕ್ಕೆ ನೇಮಕ ಮಾಡಿರುವುದು ಇದೇ ಮೊದಲು.
ಅಂತರರಾಷ್ಟ್ರೀಯ ಕ್ರಿಕೆಟ್ ಮತ್ತು ಆಟಗಾರರ ವ್ಯವಹಾರಗಳ ನಿರ್ದೇಶಕರ ಹುದ್ದೆಗೆ ಸಂಬಂಧಿಸಿದಂತೆ ಪಿಸಿಬಿ ಅರ್ಜಿ ಆಹ್ವಾನಿಸಿದ್ದು, ನವೆಂಬರ್ 2 ಅರ್ಜಿ ಸಲ್ಲಿ ಸಲ್ಲಿಸಲು ಕೊನೆಯ ದಿನಾಂಕವಾಗಿತ್ತು. ಇದಕ್ಕೂ ಮೊದಲು ಪಿಸಿಬಿ ಶಾನ್ ಅವರನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಕಾರ್ಯಾಚರಣೆಗಳ ಹೊಸ ನಿರ್ದೇಶಕರಾಗಲು ಕೇಳಿಕೊಂಡಿತ್ತು.
ಶಾನ್ ಮಸೂದ್ ಆಯ್ಕೆಯ ಕುರಿತು ಚರ್ಚೆ ಪಿಸಿಬಿ ನಡೆಸಿದ್ದು, ಅಂತರರಾಷ್ಟ್ರೀಯ ಕ್ರಿಕೆಟ್ ವ್ಯವಹಾರಗಳ ವಿಭಾಗವನ್ನು ಮುನ್ನಡೆಸಲು ಶಾನ್ ಸೂಕ್ತ ವ್ಯಕ್ತಿ ಎಂಬ ಒಮ್ಮತದ ನಿರ್ಧಾರ ತೆಗೆದುಕೊಂಡಿದೆ ಎಂದು ಮೂಲವೊಂದು ತಿಳಿಸಿದೆ.
36 ವರ್ಷದ ಶಾನ್ ಪಾಕಿಸ್ತಾನದ ಪರ 44 ಟೆಸ್ಟ್, 9 ಏಕದಿನ ಮತ್ತು 19 ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಆಡಿದ್ದು, ಇದರಲ್ಲಿ 3108 ರನ್ ಕಲೆ ಹಾಕಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.