ADVERTISEMENT

ಕ್ರಿಕೆಟ್‌: ನವೆಂಬರ್‌ನಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿರುವ ಟೀಮ್ ಇಂಡಿಯಾ

ಪಿಟಿಐ
Published 19 ಮಾರ್ಚ್ 2024, 13:07 IST
Last Updated 19 ಮಾರ್ಚ್ 2024, 13:07 IST
<div class="paragraphs"><p>ಭಾರತ ಕ್ರಿಕೆಟ್‌ ತಂಡದ ಆಟಗಾರರು</p></div>

ಭಾರತ ಕ್ರಿಕೆಟ್‌ ತಂಡದ ಆಟಗಾರರು

   

ಮೆಲ್ಬರ್ನ್‌: ವರ್ಷದ ಕೊನೆಯಲ್ಲಿ ಭಾರತದ ಬಹುನಿರೀಕ್ಷಿತ ಆಸ್ಟ್ರೇಲಿಯಾ ಪ್ರವಾಸದ ಸಂದರ್ಭದಲ್ಲಿ ಐದು ಟೆಸ್ಟ್‌ಗಳು ಇರಲಿದ್ದು, ಸರಣಿಯ ಮೊದಲ ಟೆಸ್ಟ್‌ ಪಂದ್ಯ ಪರ್ತ್‌ನಲ್ಲಿ ನಡೆಯಲಿದೆ. ‌

‘ಸಿಡ್ನಿ ಮಾರ್ನಿಂಗ್ ಹೆರಾಲ್ಡ್’ ವರದಿ ಪ್ರಕಾರ, ಅಡಿಲೇಡ್‌ನಲ್ಲಿ ಎರಡನೇ ಟೆಸ್ಟ್‌, ಬ್ರಿಸ್ಬೇನ್‌ನಲ್ಲಿ ಮೂರನೇ ಟೆಸ್ಟ್‌ ನಡೆಯಲಿದೆ. ಬಾಕ್ಸಿಂಗ್‌ ಡೇ ಟೆಸ್ಟ್‌ (ಡಿಸೆಂಬರ್‌ 26ರಿಂದ) ಮೆಲ್ಬರ್ನ್‌ನಲ್ಲಿ ಸಂಪ್ರದಾಯದಂತೆ ಮೆಲ್ಬರ್ನ್‌ನಲ್ಲಿ ನಡೆಯಲಿದೆ. ಅಂತಿಮ ಟೆಸ್ಟ್ ಹೊಸ ವರ್ಷದ ಆರಂಭದಲ್ಲಿ ಸಿಡ್ನಿಯಲ್ಲಿ ನಡೆಯಲಿದೆ ಎಂದು ವರದಿ ತಿಳಿಸಿದೆ.

ADVERTISEMENT

ಅಡಿಲೇಡ್ ಟೆಸ್ಟ್ ಹಗಲು-ರಾತ್ರಿ ಪಂದ್ಯವಾಗಲಿದೆ. ಪ್ರವಾಸ ನವೆಂಬರ್‌ ಕೊನೆಯಲ್ಲಿ ಆರಂಭವಾಗಲಿದೆ. ಅಂತಿಮ ವೇಳಾಪಟ್ಟಿ ಈ ತಿಂಗಳ ಕೊನೆಯಲ್ಲಿ ಘೋಷಣೆಯಾಗುವ ನಿರೀಕ್ಷೆಯಿದೆ.

1991–92ರ ನಂತರ ಮೊದಲ ಬಾರಿ ಭಾರತ, ಆಸ್ಟ್ರೇಲಿಯಾ ಪ್ರವಾಸದಲ್ಲಿ ಐದು ಟೆಸ್ಟ್‌ ಪಂದ್ಯಗಳನ್ನು ಆಡಲಿದೆ. ಆ ವರ್ಷ ಆತಿಥೇಯ  ಆಸ್ಟ್ರೇಲಿಯಾ ಸರಣಿಯನ್ನು 4–0ಯಿಂದ ಗೆದ್ದುಕೊಂಡಿತ್ತು.

ಉಭಯ ತಂಡಗಳ ನಡುವಿನ ಕಳೆದ ನಾಲ್ಕು ಸರಣಿಗಳಲ್ಲಿ, ಭಾರತವು 2018-19 ಮತ್ತು 2020-21ರಲ್ಲಿ ಬೆನ್ನುಬೆನ್ನಿಗೆ ಟೆಸ್ಟ್ ಸರಣಿ  ಸೇರಿದಂತೆ ಎಲ್ಲಾ ನಾಲ್ಕು ಸಂದರ್ಭಗಳಲ್ಲಿ ಗೆದ್ದಿದೆ.

2018-19ರ ಸರಣಿಯಲ್ಲಿ ಪರ್ತ್ ಎರಡನೇ ಟೆಸ್ಟ್‌ಗೆ ಆತಿಥ್ಯ ವಹಿಸಿತ್ತು, ಇದರಲ್ಲಿ ಆತಿಥೇಯರು 146 ರನ್‌ಗಳಿಂದ ಜಯಿಸಿದ್ದರು. ಉಭಯ ದೇಶಗಳ ನಡುವಿನ 2020-21ರ ಸರಣಿಗೆ ಮುಂಚಿತವಾಗಿ, ಪರ್ತ್‌ಗೆ ಟೆಸ್ಟ್ ಆತಿಥ್ಯ ನೀಡದ ಕ್ರಿಕೆಟ್ ಆಸ್ಟ್ರೇಲಿಯಾದ ನಿರ್ಧಾರದಿಂದ ವೆಸ್ಟರ್ನ್ ಆಸ್ಟ್ರೇಲಿಯಾ ಕ್ರಿಕೆಟ್ ಅಸೋಸಿಯೇಷನ್ (ವಾಕಾ) ಅಸಮಾಧಾನಗೊಂಡಿತ್ತು ಎಂದು ವರದಿಗಳು ಪ್ರಕಟ್ವಾಗಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.