ADVERTISEMENT

U19 Women's T20 WC| ತಂಡ ಪ್ರಕಟಿಸಿದ ಅಮೆರಿಕ: ಭಾರತದ ‘ಬಿ’ ಟೀಂ ಎಂದ ನೆಟ್ಟಿಗರು

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2022, 15:57 IST
Last Updated 15 ಡಿಸೆಂಬರ್ 2022, 15:57 IST
   

ನ್ಯೂಯಾರ್ಕ್‌: 19 ವರ್ಷ ಒಳಗಿನ‌ ಮಹಿಳೆಯರ ಟಿ20 ವಿಶ್ವಕಪ್‌ಗೆ ಅಮೆರಿಕ ತನ್ನ ತಂಡವನ್ನು ಪ್ರಕಟಿಸಿದೆ. ತಂಡದ ಎಲ್ಲರೂ ಭಾರತ ಮೂಲದವರಾಗಿರುವುದು ವಿಶೇಷ.

ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಚರ್ಚೆಯಾಗುತ್ತಿದೆ.

‘ಇದು ಅಮೆರಿಕ ಕ್ರಿಕೆಟ್ ತಂಡವೋ ಅಥವಾ ಭಾರತದ ‘ಬಿ’ ತಂಡವೋ’ ಎಂದು ಟ್ವಿಟರ್ ಬಳಕೆದಾರರು ಪ್ರಶ್ನೆ ಮಾಡಿದ್ದಾರೆ‌‌.

ADVERTISEMENT

ಮತ್ತೊಬ್ಬರು ‘ಅಖಂಡ ಅಮೆರಿಕದ ರಾಜ್ಯಗಳು’ ಎಂದು ಟ್ವೀಟ್ ಮಾಡಿ ಅಮೆರಿಕವನ್ನು ಗೇಲಿ ಮಾಡಿದ್ದಾರೆ.

‘ಒಂದು ದಿನ ನಾವು ನಮ್ಮ ವಿರುದ್ಧವೇ ಆಡಬೇಕಾಗಬಹುದು’ ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.

ತಂಡ: ಗೀತಿಕಾ ಕೊಡಾಲಿ (ಕ್ಯಾಪ್ಟನ್‌), ಅನಿಕಾ ಕೋಲನ್‌ (ಉಪ ನಾಯಕಿ), ಅದಿತಿ ಚುಡಾಸಮ, ಭೂಮಿಕಾ ಭದ್ರಿರಾಜು, ದಿಶಾ ದಿಂಗ್ರಾ, ಇಶಾನಿ ವಘೇಲಾ, ಜೀವನಾ ಅರಸ್, ಲಾಸ್ಯಾ ಮುಲ್ಲಪುಡಿ, ಪೂಜಾ ಗಣೇಶ್‌, ಪೂಜಾ ಶಾ, ರಿತು ಸಿಂಗ್‌, ಸಾಯಿ ತನ್ಮಯ್‌ ಎಯ್ಯುನ್ನಿ, ಸ್ನಿಗ್ದಾ ಪೌಲ್‌, ಸುಹಾನಿ ಥದನಿ, ತರುನಮ್‌ ಚೋಪ್ರಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.