ADVERTISEMENT

ಪೊಲಾರ್ಡ್‌ಗೆ ದಂಡ, ಡಿಮೆರಿಟ್‌ ಪಾಯಿಂಟ್‌

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2019, 19:45 IST
Last Updated 6 ಆಗಸ್ಟ್ 2019, 19:45 IST
   

ದುಬೈ (ಪಿಟಿಐ): ಭಾರತ ವಿರುದ್ಧ ಫ್ಲಾರಿಡಾದಲ್ಲಿ ಭಾನುವಾರ ನಡೆದ ಎರಡನೇ ಟಿ–20 ಪಂದ್ಯದಲ್ಲಿ ಅಂಪೈರ್‌ ಸೂಚನೆಗೆ ನಿರ್ಲಕ್ಷ್ಯ ಪ್ರದರ್ಶಿಸಿದ್ದಕ್ಕೆ ಐಸಿಸಿಯು ವೆಸ್ಟ್‌ ಇಂಡೀಸ್‌ನ ಆಲ್‌ರೌಂಡರ್‌ ಕೀರನ್‌ ಪೊಲಾರ್ಡ್‌ ಅವರಿಗೆ ಪಂದ್ಯ ಸಂಭಾವನೆಯ ಶೇ 20ರಷ್ಟು ದಂಡ ವಿಧಿಸಲಾಗಿದ್ದು, ಒಂದು ಡಿಮೆರಿಟ್‌ ಅಂಕ ವಿಧಿಸಲಾಗಿದೆ.

ಪೊಲಾರ್ಡ್‌ ವರ್ತನೆಯು ಐಸಿಸಿ ನೀತಿಸಂಹಿತೆಯ ಒಂದನೇ ಹಂತದ ಉಲ್ಲಂಘನೆಯಾಗಿದೆ. ಅವರು ಸಂಹಿತೆಯ 2.4ನೇ ವಿಧಿ ಉಲ್ಲಂಘಿಸಿದ್ದಾರೆ ಎಂದು ಐಸಿಸಿಯ ಪ್ರಕಟಣೆ ತಿಳಿಸಿದೆ.

ಬದಲಿ ಆಟಗಾರರನ್ನು ಕರೆಸಬೇಕಾದರೆ ಮೊದಲೇ ಕೋರಿಕೆ ಸಲ್ಲಿಸಬೇಕೆಂದು ಅಂಪೈರ್‌ಗಳು ಪದೇ ಪದೇ ಅವರಿಗೆ ಹೇಳಿದರೂ, ಕಿವಿಗೊಡದೇ ಕ್ರೀಡಾಂಗಣಕ್ಕೆ ಸಬ್‌ಸ್ಟಿಟ್ಯೂಟ್‌ ಆಟಗಾರರನ್ನು ಕರೆದಿದ್ದರು. ಓವರ್‌ ಮುಗಿಯುವವರೆಗೆ ಕಾಯಬೇಕೆಂದು ಅಂಪೈರ್‌ಗಳು ಹೇಳಿದ್ದರು ಎಂದು ಐಸಿಸಿ ತಿಳಿಸಿದೆ.

ADVERTISEMENT

ಮಳೆಯ ಆಟ ಕಂಡ ಎರಡನೇ ಟಿ–20 ಪಂದ್ಯದಲ್ಲಿ ಭಾರತ ಡಕ್‌ವರ್ತ್‌ –ಲೂಯಿಸ್‌ ನಿಯಮದಡಿ 22 ರನ್‌ಗಳಿಂದ ಗೆದ್ದುಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.