ಪ್ರೀತಿ ಜಿಂಟಾ ಮತ್ತು ಸಲ್ಮಾನ್ ಖಾನ್
ಚಿತ್ರಕೃಪೆ: X/FCfrenchPZ
ಮುಂಬೈ: ಭಾನುವಾರ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಕ್ವಾಲಿಫೈಯರ್ – 2 ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು 5 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಪಂಜಾಬ್ ಕಿಂಗ್ಸ್(ಪಿಬಿಕೆಎಸ್) ತಂಡವು 11 ವರ್ಷಗಳ ಬಳಿಕ ಐಪಿಎಲ್ ಫೈನಲ್ ತಲುಪಿದೆ.
2014ರಲ್ಲಿ ಫೈನಲ್ ತಲುಪಿದ್ದ ಪಂಜಾಬ್ ತಂಡ, ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸೋತಿತ್ತು. ನಾಳೆ ನಡೆಯಲಿರುವ ಫೈನಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವನ್ನು ಎದುರಿಸಲಿದೆ.
2014ರಲ್ಲಿ ಪಂಜಾಬ್ ತಂಡ ಫೈನಲ್ ತಲುಪಿದ್ದ ಸಂದರ್ಭ ಟ್ವೀಟ್ ಮಾಡಿದ್ದ ಸಲ್ಮಾನ್, ಜಿಂಟಾ ತಂಡ ಗೆಲ್ಲುತ್ತಾ? ಎಂದು ಕೇಳಿದ್ದರು. 11 ವರ್ಷಗಳ ಬಳಿಕ ಸಲ್ಮಾನ್ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಪಿಬಿಕೆಎಸ್, ‘ಫೈನಲ್‌ನಲ್ಲಿ ಭೇಟಿಯಾಗೋಣ ಭಾಯ್’ ಎಂದಿದೆ.
ಏತನ್ಮಧ್ಯೆ, ಸಲ್ಮಾನ್ ಖಾನ್ ಹಳೆ ಟ್ವೀಟ್ ಅನ್ನು ಅದೃಷ್ಟದ ಸಂಕೇತ ಎಂದು ಕರೆದಿರುವ ನೆಟ್ಟಿಗರು, ಈ ಕುರಿತ ಮೀಮ್ಸ್‌ಗಳನ್ನು ಹಂಚಿಕೊಂಡಿದ್ದಾರೆ.
‘ಪಂಜಾಬ್ ಕಿಂಗ್ಸ್’ ಸಲ್ಮಾನ್ ಖಾನ್ ಆಪ್ತ ಗೆಳತಿ, ಬಾಲಿವುಡ್ ನಟಿ ಪ್ರೀತಿ ಜಿಂಟಾ ಅವರ ಒಡೆತನದ ಫ್ರಾಂಚೈಸಿಯಾಗಿದೆ.
ಹರ್ ದಿಲ್ ಜೋ ಪ್ಯಾರ್ ಕರೇಗಾ, ಚೋರಿ ಚೋರಿ ಚುಪ್ಕೆ, ಹೀರೋಸ್, ಇಶ್ಕ್ ಇನ್ ಪ್ಯಾರಿಸ್ ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ಒಟ್ಟಾಗಿ ನಟಿಸಿರುವ ಜಿಂಟಾ ಮತ್ತು ಸಲ್ಮಾನ್, ನಿಜ ಜೀವನದಲ್ಲಿ ಉತ್ತಮ ಸ್ನೇಹಿತರೂ ಹೌದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.