
ಕ್ರಿಕೆಟ್
(ಸಾಂಕೇತಿಕ ಚಿತ್ರ)
ಮುಲಪಾಡು (ಆಂಧ್ರ ಪ್ರದೇಶ): ಆರ್ಯ ಜೆ.ಗೌಡ, ಧ್ರುವ್ ಕೃಷ್ಣನ್ ಮತ್ತು ಅನ್ವಯ್ ದ್ರಾವಿಡ್ ಅವರು ಜಾರ್ಖಂಡ್ ವಿರುದ್ಧ ಶುಕ್ರವಾರ ಇಲ್ಲಿ ‘ಡ್ರಾ’ ಆದ ವಿಜಯ್ ಮರ್ಚೆಂಟ್ ಟ್ರೋಫಿ (16 ವರ್ಷದೊಳಗಿನವರ) ಕ್ರಿಕೆಟ್ ಟೂರ್ನಿ ಪಂದ್ಯದಲ್ಲಿ ಕರ್ನಾಟಕದ ಪರ ಶತಕಗಳನ್ನು ಬಾರಿಸಿದರು. ಕರ್ನಾಟಕ ಮಹತ್ವದ ಮೊದಲ ಇನಿಂಗ್ಸ್ ಮುನ್ನಡೆ ಪಡೆಯಿತು.
ಡಿವಿಆರ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಕರ್ನಾಟಕದ ಬ್ಯಾಟರ್‌ಗಳು ಸಾಂಘಿಕ ಆಟವಾಡಿದರು. ಜಾರ್ಖಂಡ್ ತಂಡದ 387 ರನ್‌ಗಳಿಗೆ ಉತ್ತರವಾಗಿ ಗುರುವಾರ ವಿಕೆಟ್‌ನಷ್ಟವಿಲ್ಲದೇ 148 ರನ್ ಗಳಿಸಿದ್ದ ಕರ್ನಾಟಕ ಇಂದು ಮೂವರ ಶತಕದ ಬಲದಿಂದ 123.3 ಓವರುಗಳಲ್ಲಿ 4 ವಿಕೆಟ್‌ಗೆ 441 ರನ್ ಬಾರಿಸಿ ಪಂದ್ಯ ಪೂರೈಸಿತು.
ಆರಂಭ ಆಟಗಾರರಾದ ಆರ್ಯ ಗೌಡ 104 ರನ್ ಬಾರಿಸಿದರೆ, ಧ್ರುವ್ 122 ರನ್ ಗಳಿಸಿದರು. ನಾಲ್ಕನೇ ಕ್ರಮಾಂಕದಲ್ಲಿ ಆಡಿದ, ರಾಹುಲ್ ದ್ರಾವಿಡ್ ಅವರ ಪುತ್ರ ಅನ್ವಯ್ 153 ಎಸೆತಗಳಲ್ಲಿ 100 ರನ್ (4x10, 6x2) ಬಾರಿಸಿದರು. ಇವರ ಜೊತೆಗೆ ಮೂರನೇ ಕ್ರಮಾಂಕದಲ್ಲಿ ಆಡಿದ ಸ್ಯಮಂತಕ್ ಅನಿರುದ್ಧ್ 76 ರನ್ ಗಳಿಸಿದರು.
ಸ್ಕೋರುಗಳು: ಮೊದಲ ಇನಿಂಗ್ಸ್: ಜಾರ್ಖಂಡ್: 128.4 ಓವರುಗಳಲ್ಲಿ 387; ಕರ್ನಾಟಕ: 123.3 ಓವರುಗಳಲ್ಲಿ 4 ವಿಕೆಟ್‌ಗೆ 441 (ಆರ್ಯ ಜೆ.ಗೌಡ 104, ಧ್ರುವ್ ಕೃಷ್ಣನ್ 122, ಸ್ಯಮಂತಕ್ ಅನಿರುದ್ಧ್ 76, ಅನ್ವಯ್ ದ್ರಾವಿಡ್ ಔಟಾಗದೇ 100, ಸುಕೃತ್ ಜೆ. 33; ಆಯುಷ್ ಖಾರೆ 146ಕ್ಕೆ2). ಪಂದ್ಯ ಡ್ರಾ. ಕರ್ನಾಟಕ: 3 ಅಂಕ; ಜಾರ್ಖಂಡ್: 1 ಅಂಕ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.