ADVERTISEMENT

ಪುಟ್ಟ ಐಪಿಎಲ್‌ಗೂ ಸಿದ್ಧವೆಂದ 'ರಾಜಸ್ಥಾನ್ ರಾಯಲ್ಸ್'

ಪಿಟಿಐ
Published 1 ಏಪ್ರಿಲ್ 2020, 19:30 IST
Last Updated 1 ಏಪ್ರಿಲ್ 2020, 19:30 IST
ರಾಜಸ್ಥಾನ್ ರಾಯಲ್ಸ್
ರಾಜಸ್ಥಾನ್ ರಾಯಲ್ಸ್   

ನವದೆಹಲಿ: ಕೊರೊನಾ ವೈರಸ್ ಲಾಕ್‌ಡೌನ್‌ನಿಂದಾಗಿ ಈ ಬಾರಿ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ರದ್ದಾಗುವ ಅಥವಾ ಮುಂದೂಡಲಾಗುವ ಸಾಧ್ಯತೆಗಳಿವೆ.

ಆದರೆ, ಈ ಸಮಸ್ಯೆಗೆ ರಾಜಸ್ಥಾನ್ ರಾಯಲ್ದ್‌ ತಂಡವು ಒಂದು ಪರಿಹಾರ ಸೂತ್ರವನ್ನು ಸೂಚಿಸಿದೆ. ವಿದೇಶಿ ಆಟಗಾರರಿಲ್ಲದ, ಆಟದ ದಿನಗಳನ್ನು ಕಡಿತ ಮಾಡಿದ ಪುಟ್ಟ ಐಪಿಎಲ್‌ ನಡೆದರೂ ತಮ್ಮ ತಂಡ ಆಡಲು ಸಿದ್ಧ ಎಂದು ಫ್ರ್ಯಾಂಚೈಸ್ ಹೇಳಿದೆ.

ಪೂರ್ವನಿಯೋಜಿತ ವೇಳಾಪಟ್ಟಿಯ ಪ್ರಕಾರ ಮಾರ್ಚ್ 29ರಂದು ಟೂರ್ನಿ ಆರಂಭವಾಗಬೇಕಿತ್ತು. ಆದರೆ, ಲಾಕ್‌ಡೌನ್‌ ಕಾರಣಕ್ಕೆ ಏಪ್ರಿಲ್ 15ರವರೆಗೆ ಮುಂದೂಡಲಾಗಿತ್ತು. ಸದ್ದ ದಿನದಿನಕ್ಕೆ ಕೊರೊನಾ ವೈರಸ್‌ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಟೂರ್ನಿಯ ಕುರಿತು ನಿರ್ಧಾರ ಕೈಗೊಳ್ಳುವ ಒತ್ತಡದಲ್ಲಿ ಬಿಸಿಸಿಐ ಇದೆ

ADVERTISEMENT

‘ಟೂರ್ನಿಯಲ್ಲ ವಿದೇಶಿ ಆಟಗಾರರು ಬರದಿದ್ದರೆ ಪರವಾಗಿಲ್ಲ. ಪಂದ್ಯಗಳ ಮತ್ತು ದಿನಗಳ ಸಂಖ್ಯೆಯನ್ನೂ ಕಡಿತ ಮಾಡಬಹುದು. ಸಣ್ಣ ಪ್ರಮಾಣದ ಐಪಿಎಲ್ ಆಡಲು ನಾವು ಸಿದ್ಧ’ ಎಂದು ಫ್ರ್ಯಾಂಚೈಸ್‌ನ ಕಾರ್ಯನಿರ್ವಾಹಕ ಮುಖ್ಯಸ್ಥ ರಂಜಿತ್ ಬರ್ಠಾಕೂರ್ ಬುಧವಾರ ತಿಳಿಸಿದ್ದಾರೆ.

‘ಈ ಕಠಿಣ ಸಮಯದಲ್ಲಿಯೂ ಬಿಸಿಸಿಐ ಉತ್ತಮ ನಿರ್ಧಾರ ತೆಗೆದುಕೊಳ್ಳಲಿದೆ ಎಂಬ ವಿಶ್ವಾಸವಿದೆ. ಪರಿಸ್ಥಿತಿ ಸುಧಾರಣೆಯಾದ ನಂತರ ಎಲ್ಲವೂ ಸರಿಯಾಗುತ್ತದೆ. ಫ್ರ್ಯಾಂಚೈಸ್‌ಗಳ ಹಿತದೃಷ್ಟಿಯಿಂದ ಬಿಸಿಸಿಐ ಒಳ್ಳೆಯ ನಿರ್ಧಾರ ಕೈಗೊಳ್ಳಬೇಕು’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.