5 ವಿಕೆಟ್ ಗಳಿಸಿದ ವಿ.ಕೌಶಿಕ್
ಹುಬ್ಬಳ್ಳಿ: ಇಲ್ಲಿನ ರಾಜನಗರದ ಕೆ.ಎಸ್.ಸಿ.ಎ ಕ್ರೀಡಾಂಗಣದಲ್ಲಿ ಶುಕ್ರವಾರ ಆರಂಭವಾದ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂಜಾಬ್ ಎದುರಿನ ಪಂದ್ಯದಲ್ಲಿ ಕರ್ನಾಟಕದ ವಿ.ಕೌಶಿಕ್ 5 ವಿಕೆಟ್ ಗೊಂಚಲು ಗಳಿಸಿದರು.
ಆರಂಭಿಕ ಆಘಾತ ಅನುಭವಿಸಿರುವ ಪಂಜಾಬ್ ತಂಡ ಊಟದ ವಿರಾಮದ ವೇಳೆಗೆ 32 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 99 ರನ್ ಗಳಿಸಿದೆ.
11 ಓವರ್ ಬೌಲಿಂಗ್ ಮಾಡಿದ ವಿ.ಕೌಶಿಕ್ 28 ರನ್ ನೀಡಿ 5 ವಿಕೆಟ್ ಕಬಳಿಸಿದರು. ಮೊದಲ ಸ್ಪೆಲ್‌ನಲ್ಲಿ 4 ವಿಕೆಟ್ ಉರುಳಿಸಿದ ಕೌಶಿಕ್, ಎರಡನೇ ಸ್ಪೆಲ್‌ನಲ್ಲಿ ಗೀತಾಂಶ್ ಖೇರಾ ವಿಕೆಟ್ ಪಡೆದರು.
ಪಂಜಾಬ್ ಪರ ಪ್ರಭಸಿಮ್ರಾನ್ ಸಿಂಗ್ 5, ಅಭಿಷೇಕ್ ಶರ್ಮಾ 26, ನಮನ್ ಧೀರ್ 4, ಮನದೀಪ್ ಸಿಂಗ್ 1, ಗೀತಾಂಶ್ ಖೇರಾ 27 ರನ್ ಗಳಿಸಿದರು.
ಪಂಜಾಬ್‌ನ ನೇಹಲ್ ವಧೇರಾ 28, ಪ್ರೇರಿತ್ ದತ್ತಾ 8 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.