ADVERTISEMENT

ತಮಿಳುನಾಡಿಗೆ ಸುಲಭ ಜಯ, ಮುಂಬೈ ಪರದಾಟ

​ಪ್ರಜಾವಾಣಿ ವಾರ್ತೆ
Published 20 ಜನವರಿ 2020, 20:19 IST
Last Updated 20 ಜನವರಿ 2020, 20:19 IST

ಚೆನ್ನೈ: ತಮಿಳುನಾಡು ತಂಡ ರಣಜಿ ಟ್ರೊಫಿ ‘ಬಿ’ ಗುಂಪಿನ ಪಂದ್ಯದ ಎರಡನೇ ದಿನವೇ ರೈಲ್ವೇಸ್‌ ತಂಡವನ್ನು ಇನಿಂಗ್ಸ್‌ ಮತ್ತು 164 ರನ್‌ಗಳಿಂದ ಸುಲಭವಾಗಿ ಸೋಲಿಸಿತು.

ಮೊದಲ ಇನಿಂಗ್ಸ್‌ನಲ್ಲಿ ರೈಲ್ವೇಸ್‌ ತಂಡದ 76 ರನ್‌ಗಳಿಗೆ ಉತ್ತರವಾಗಿ ತಮಿಳುನಾಡು ತಂಡ (ಭಾನುವಾರ: 4 ವಿಕೆಟ್‌ಗೆ 236) ಎರಡನೇ ದಿನವಾದ ಸೋಮವಾರ 330 ರನ್‌ಗಳಿಗೆ ಮೊದಲ ಇನಿಂಗ್ಸ್‌ ಮುಗಿಸಿತು. ಎರಡನೇ ಇನಿಂಗ್ಸ್‌ನಲ್ಲಿ ಉತ್ತರ ಪ್ರದೇಶ ಮತ್ತೊಮ್ಮೆ ಕುಸಿದು 90 ರನ್‌ಗಳಿಗೆ ಪತನಗೊಂಡಿತು.

ಮುಂಬೈನಲ್ಲಿ ನಡೆಯುತ್ತಿರುವ ಇದೇ ಗುಂಪಿನ ಇನ್ನೊಂದು ಪಂದ್ಯದಲ್ಲಿ ಉಪೇಂದ್ರ ಯಾದವ್ ಚೊಚ್ಚಲ ದ್ವಿಶತಕದ ನೆರವಿನಿಂದ ಉತ್ತರ ಪ್ರದೇಶ ಮೊದಲ ಇನಿಂಗ್ಸ್‌ನಲ್ಲಿ 8 ವಿಕೆಟ್‌ಗೆ 625 ರನ್ ಗಳಿಸಿ ಇನಿಂಗ್ಸ್‌ ಡಿಕ್ಲೇರ್ಡ್‌ ಮಾಡಿಕೊಂಡಿತು. ಉಪೇಂದ್ರ ಯಾದವ್ ಅಜೇಯ 203 ರನ್‌ (239 ಎಸೆತ, 27 ಬೌಂಡರಿ, 3 ಸಿಕ್ಸರ್‌) ಬಾರಿಸಿದರು.

ADVERTISEMENT

ಉತ್ತರವಾಗಿ ಮುಂಬೈ 20 ರನ್‌ಗಳಾಗುವಷ್ಟರಲ್ಲಿ 2 ವಿಕೆಟ್‌ ಕಳೆದುಕೊಂಡು ತೊಂದರೆಯಲ್ಲಿದೆ.

ಸ್ಕೋರುಗಳು: ರೈಲ್ವೇಸ್‌: 76 ಮತ್ತು 36.4 ಓವರುಗಳಲ್ಲಿ 90 (ಆರ್‌.ಸಾಯಿಕಿಶೋರ್‌ 16ಕ್ಕೆ5, ಆರ್‌.ಅಶ್ವಿನ್‌ 36ಕ್ಕೆ3, ಟಿ.ನಟರಾಜನ್ 15ಕ್ಕೆ2); ತಮಿಳುನಾಡು: 91 ಓವರುಗಳಲ್ಲಿ 330 (ಹರ್ಷ್‌ ತ್ಯಾಗಿ 98ಕ್ಕೆ5, ಅವಿನಾಶ್‌ ಯಾದವ್ 107ಕ್ಕೆ3).

ಮುಂಬೈಯಲ್ಲಿ: ಉತ್ತರ‍ಪ್ರದೇಶ: 159.3 ಓವರುಗಳಲ್ಲಿ 8 ವಿಕೆಟ್‌ಗೆ 625 ಡಿಕ್ಲೇರ್ಡ್‌ (ಅಕ್ಷದೀಪ ನಾಥ್‌ 115, ಆರ್‌.ಕೆ.ಸಿಂಗ್‌ 84, ಉಪೇಂದ್ರ ಯಾದವ್‌ ಔಟಾಗದೇ 203, ಸೌರಭ್‌ ಕುಮಾರ್ 44, ಯಶ್‌ ದಯಾಳ್‌ ಔಟಾಗದೇ 41); ಮುಂಬೈ: 7 ಓವರುಗಳಲ್ಲಿ 2 ವಿಕೆಟ್‌ಗೆ 20 (ಎ.ಎಸ್‌.ರಜಪೂತ್‌ 15ಕ್ಕೆ2).

‌ಧರ್ಮಶಾಲಾದಲ್ಲಿ: ಹಿಮಾಚಲ ಪ್ರದೇಶ: 130.5 ಓವರುಗಳಲ್ಲಿ 496 (ಎನ್‌.ಗಂಗ್ಟಾ 66, ಅಮಿತ್‌ ಕುಮಾರ್ 80, ಅಂಕುಶ್‌ ಬೈನ್ಸ್‌ ಔಟಾಗದೇ 75, ವಿ.ಜಿ.ಅರೋರಾ 40; ಮೆರಿವಾಲಾ 94ಕ್ಕೆ3, ಸ್ವಪ್ನಿಲ್‌ ಸಿಂಗ್‌ 80ಕ್ಕೆ3, ಎ.ಎ.ಶೇಠ್‌ 109ಕ್ಕೆ3); ಬರೋಡಾ 40 ಓವರುಗಳಲ್ಲಿ 2 ವಿಕೆಟ್‌ಗೆ 150 (ಆದಿತ್ಯ ವಾಘ್ಮೋರೆ 40, ವಿ.ಪಿ.ಸೋಳಂಕಿ ಬ್ಯಾಟಿಂಗ್‌ 85, ಯೂಸುಫ್‌ ಪಠಾಣ್‌ ಬ್ಯಾಟಿಂಗ್‌ 21)

ಇಂದೋರ್‌ನಲ್ಲಿ: ಸೌರಾಷ್ಟ್ರ: 97.4 ಓವರುಗಳಲ್ಲಿ 344 (ಶೆಲ್ಡನ್‌ ಜಾಕ್ಸನ್‌ 186; ಗೌರವ್ ಯಾದವ್‌ 109ಕ್ಕೆ5); ಮಧ್ಯಪ್ರದೇಶ: 69 ಓವರುಗಳಲ್ಲಿ 5 ವಿಕೆಟ್‌ಗೆ 183 (ಯಶ್‌ ದುಬೆ ಬ್ಯಾಟಿಂಗ್‌ 50, ವೆಂಕಟೇಶ ಅಯ್ಯರ್‌ ಔಟಾಗದೇ 50; ಜಯದೇವ ಉನದ್ಕತ್‌ 27ಕ್ಕೆ2).

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.