ADVERTISEMENT

Ranji Trophy Final: ನಾಲ್ಕನೇ ದಿನವೇ ಪ್ರಶಸ್ತಿ ಸನಿಹಕ್ಕೆ ಬಂದ ಜಮ್ಮು–ಕಾಶ್ಮೀರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಫೆಬ್ರುವರಿ 2026, 13:08 IST
Last Updated 27 ಫೆಬ್ರುವರಿ 2026, 13:08 IST
   

ಹುಬ್ಬಳ್ಳಿ: ರಣಜಿ ಟ್ರೋಫಿ ಫೈನಲ್ ಪಂದ್ಯದ ನಾಲ್ಕನೇ ದಿನವೂ ಜಮ್ಮು–ಕಾಶ್ಮೀರ ತಂಡವು ಉತ್ತಮ ಬ್ಯಾಟಿಂಗ್ ಮೂಲಕ ಮೇಲುಗೈ ಸಾಧಿಸಿದೆ.

ಮೊದಲ ಇನಿಂಗ್ಸ್‌ನಲ್ಲಿ ಜಮ್ಮು–ಕಾಶ್ಮೀರ ನೀಡಿದ್ದ 584 ರನ್‌ಗಳ ಬೃಹತ್‌ ಗುರಿ ಬೆನ್ನತ್ತಿದ ಕರ್ನಾಟಕ ತಂಡವು ಮೂರನೇ ದಿನದಾಟದ ಮುಕ್ತಾಯಕ್ಕೆ 69 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 220 ರನ್‌ ಗಳಿಸಿತ್ತು.

ನಾಲ್ಕನೇ ದಿನದಾಟದಲ್ಲಿ ಕರ್ನಾಟಕ ತಂಡವು ಇನ್ನೂ 73 ರನ್‌ ಗಳಿಸುವಷ್ಟರಲ್ಲಿ ತನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತು. 93.3 ಓವರ್‌ಗಳಲ್ಲಿ 293 ರನ್‌ ಗಳಿಗೆ ಆಲೌಟ್ ಆಯಿತು.

ADVERTISEMENT

ಎರಡನೇ ಇನಿಂಗ್ಸ್ ಆರಂಭಿಸಿದ ಜಮ್ಮು–ಕಾಶ್ಮೀರ ತಂಡವು ಆರಂಭಿಕ ಆಘಾತದ ನಡುವೆಯೂ 57 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 186 ರನ್‌ ಗಳಿಸಿದ್ದು, 477 ರನ್‌ಗಳ ಬೃಹತ್‌ ಮುನ್ನಡೆಯನ್ನು ಕಾಯ್ದುಕೊಂಡಿದೆ.

ಆರಂಭಿಕ ಆಟಗಾರ ಖಮ್ರಾನ್ ಇಕ್ಬಾಲ್ ಅವರು ಅಜೇಯ 94 ರನ್‌ ಗಳಿಸಿದ್ದು, ಐದನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಜಮ್ಮು–ಕಾಶ್ಮೀರ ತಂಡವು ಪ್ರಶಸ್ತಿಯ ಸನಿಹಕ್ಕೆ ಬಂದಿದ್ದು, ಕರ್ನಾಟಕ ತಂಡದ ರಣಜಿ ಪ್ರಶಸ್ತಿಯ ಕನಸು ನನಸಾಗಲು ಪವಾಡ ಜರುಗಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.