ADVERTISEMENT

ರಣಜಿ ಚೊಚ್ಚಲ ಪ್ರಶಸ್ತಿಗೆ ಮುತ್ತಿಟ್ಟ ಜಮ್ಮು–ಕಾಶ್ಮೀರ: ಕಮರಿದ ಕರ್ನಾಟಕದ ಕನಸು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಫೆಬ್ರುವರಿ 2026, 9:38 IST
Last Updated 28 ಫೆಬ್ರುವರಿ 2026, 9:38 IST
   

ಹುಬ್ಬಳ್ಳಿ: ರಣಜಿ ಟ್ರೋಫಿ ಫೈನಲ್ ಪಂದ್ಯದ ಐದನೇ ದಿನವೂ ಜಮ್ಮು–ಕಾಶ್ಮೀರ ತಂಡವು ಉತ್ತಮ ಬ್ಯಾಟಿಂಗ್ ಮೂಲಕ ಪಂದ್ಯವನ್ನು ಡ್ರಾ ಮಾಡಿಕೊಂಡಿದೆ. ಫೈನಲ್ ಪಂದ್ಯದ ಮೊದಲ ಇನಿಂಗ್ಸ್‌ ಲೀಡ್ ಆಧಾರದಲ್ಲಿ ಚೊಚ್ಚಲ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.

ನಾಲ್ಕನೇ ದಿನದಾಟದ ಅಂತ್ಯಕ್ಕೆ 57 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 186 ರನ್‌ ಗಳಿಸಿ, 477 ರನ್‌ಗಳ ಬೃಹತ್‌ ಮುನ್ನಡೆ ಕಾಯ್ದುಕೊಂಡಿದ್ದ ಜಮ್ಮು–ಕಾಶ್ಮೀರ ತಂಡವು, ಪಂದ್ಯದ ಕೊನೆಯ ದಿನವೂ ಕರ್ನಾಟಕದ ಬೌಲರ್‌ಗಳ ಮೇಲೆ ಸವಾರಿ ಮಾಡಿದರು.

94 ರನ್‌ ಗಳಿಸಿ ಐದನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದ ಆರಂಭಿಕ ಆಟಗಾರ ಖಮ್ರಾನ್ ಇಕ್ಬಾಲ್, ಕೊನೆಯ ದಿನ ಶತಕವನ್ನು ಪೂರೈಸಿದರು.

ADVERTISEMENT

311 ಎಸೆತಗಳನ್ನು ಎದುರಿಸಿದ ಖಮ್ರಾನ್, ಅಜೇಯ 160 ರನ್‌ ಗಳಿಸಿದರು. 16 ರನ್‌ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದ ಸಾಹಿಲ್ ಲೋತ್ರಾ, ಅಜೇಯ 101 ರನ್‌ ಗಳಿಸಿದರು.

ಇವರಿಬ್ಬರ ಬ್ಯಾಟಿಂಗ್ ನೆರವಿನಿಂದ ಜಮ್ಮು–ಕಾಶ್ಮೀರ ತಂಡವು 113 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 342 ರನ್‌ ಗಳಿಸಿತು. ಈ ವೇಳೆ ಪ್ರವಾಸಿ ತಂಡದ ನಾಯಕ ಪಾರಸ್ ಡೋಗ್ರಾ ಅವರು ‘ಡ್ರಾ’ಗೆ ಕರೆನೀಡಿದರು.

ಈ ಮೂಲಕ 67 ವರ್ಷಗಳ ರಣಜಿ ಟ್ರೋಫಿ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಜಮ್ಮು–ಕಾಶ್ಮೀರ ತಂಡವು ಪ್ರಶಸ್ತಿಗೆ ಮುತ್ತಿಟ್ಟಿತು. 9ನೇ ಪ್ರಶಸ್ತಿಯ ಕನಸಿನಲ್ಲಿದ್ದ ಕರ್ನಾಟಕದ ಕನಸು, ತವರಿನಂಗಳದಲ್ಲಿ ಕಮರಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.