
ಹುಬ್ಬಳ್ಳಿ: ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಜಮ್ಮು–ಕಾಶ್ಮೀರ ತಂಡವು ಶುಭಂ ಪುಂಡಿರ್ ಅವರ ಅಜೇಯ ಶತಕದ ನೆರವಿನಿಂದ ಮೊದಲ ದಿನ ಮೇಲುಗೈ ಸಾಧಿಸಿದೆ.
ಹುಬ್ಬಳ್ಳಿಯ ಕೆಎಸ್‌ಸಿಎ ಮೈದಾನವು ಫೈನಲ್ ಪಂದ್ಯದ ಮೊದಲ ದಿನ ಬ್ಯಾಟರ್‌ಗಳಿಗೆ ಸಂಪೂರ್ಣ ನೆರವು ನೀಡಿತು. ಇದರ ನೆರವು ಪಡೆದ ಜಮ್ಮು–ಕಾಶ್ಮೀರ ತಂಡವು 87 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 284 ರನ್ ಗಳಿಸಿದೆ.
ಇನಿಂಗ್ಸ್‌ನ ಆರಂಭದಲ್ಲಿ ಕರ್ನಾಟಕದ ವೇಗದ ಬೌಲರ್ ಪ್ರಸಿದ್ಧ ಕೃಷ್ಣ ಅವರು ಆರಂಭಿಕ ಬ್ಯಾಟರ್ ಖಮ್ರಾನ್ ಇಕ್ಬಾಲ್ (6 ರನ್) ಅವರ ವಿಕೆಟ್ ಪಡೆದರು. ಒಂದನೇ ವಿಕೆಟ್‌ಗೆ ಜತೆಯಾದ ಯಾವರ್ ಹಸನ್ (88 ರನ್: 150 ಎಸೆತ) ಹಾಗೂ ಶುಭಂ ಪುಂಡಿರ್ (ಅಜೇಯ 117 ರನ್: 221 ಎಸೆತ) 139 ರನ್‌ಗಳ ಜತೆಯಾಟವಾಡುವ ಮೂಲಕ ತವರಿನ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದರು.
ಅನುಭವಿ ಆಟಗಾರ ಅಬ್ದುಲ್ ಸಮದ್ (ಅಜೇಯ 52 ರನ್) ಹಾಗೂ ಶತಕ ಗಳಿಸಿರುವ ಶುಭಂ ಪುಂಡಿರ್ ಅವರು ಕ್ರೀಸ್‌ನಲ್ಲಿದ್ದು, ಎರಡನೇ ದಿನವೂ ರನ್ ಹೊಳೆ ಹರಿಸುವ ನಿರೀಕ್ಷೆಯಲ್ಲಿದ್ದಾರೆ.
ಕರ್ನಾಟಕ ತಂಡದ ಪರ ಪ್ರಸಿದ್ಧ ಕೃಷ್ಣ ಅವರು 2 ವಿಕೆಟ್ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.