
ಗೋವಾ ವಿರುದ್ಧ ಶಿವಮೊಗ್ಗದ ನವುಲೆಯ ಕೆಎಸ್‌ಸಿಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯದಲ್ಲಿ ಕರ್ನಾಟಕದ ಕರುಣ್ ನಾಯರ್ ಶತಕ ಸಿಡಿಸಿದ್ದ ಸಂದರ್ಭ
ಪ್ರಜಾವಾಣಿ ಚಿತ್ರ: ಕೃಷ್ಣ ಕುಮಾರ್ ಪಿ.ಎಸ್.
ಶಿವಮೊಗ್ಗ: ಇಲ್ಲಿನ ನವುಲೆಯ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ಮತ್ತು ಗೋವಾ ನಡುವಣ ಪಂದ್ಯವು ಡ್ರಾದಲ್ಲಿ ಅಂತ್ಯ ಕಂಡಿತು. ಮೊದಲ ಇನಿಂಗ್ಸ್ ಮುನ್ನಡೆ ಗಳಿಸಿದ ಮಯಂಕ್ ಅಗರವಾಲ್ ಬಳಗಕ್ಕೆ ಮೂರು ಅಂಕಗಳು ಲಭಿಸಿದವು.
ಆತಿಥೇಯ ವೇಗಿಗಳು ಅಂತಿಮ ದಿನದಾಟದ ಮೊದಲ ಒಂದು ಗಂಟೆಯಲ್ಲೇ ನಾಲ್ಕು ವಿಕೆಟ್ ಉರುಳಿಸಿದ್ದರಿಂದ ಗೋವಾ ಫಾಲೋ ಆನ್‌ಗೆ ಸಿಲುಕಿತು.
ಎರಡನೇ ಇನಿಂಗ್ಸ್‌ನ 6ನೇ ಓವರ್‌ನ ಎರಡನೇ ಎಸೆತದಲ್ಲಿ ವೇಗಿ ವೈಶಾಖ್ ವಿಜಯಕುಮಾರ್, ಸುಯಶ್ ಪ್ರಭುದೇಸಾಯಿ (13; 15ಎ, 2ಬೌಂ) ವಿಕೆಟ್ ಉರುಳಿಸಿ ಕರ್ನಾಟಕದ ಪಾಳಯದಲ್ಲಿ ಗೆಲುವಿನ ಆಸೆ ಚಿಗುರಿಸಿದ್ದರು.
ಆರಂಭಿಕ ಆಟಗಾರ ಮಂಥನ್ ಖುತ್ಕರ್ (ಔಟಾಗದೆ 55; 135ಎ, 5ಬೌಂ) ಹಾಗೂ ಅಭಿನವ್ ತೇಜ್‌ರಾಣಾ (ಔಟಾಗದೆ 73; 126ಎ, 9ಬೌಂ) ಕರ್ನಾಟಕದ ಬೌಲರ್‌ಗಳನ್ನು ಕಾಡಿದರು.
ಇವರು ಮುರಿಯದ ಎರಡನೇ ವಿಕೆಟ್ ಪಾಲುದಾರಿಕೆಯಲ್ಲಿ 244 ಎಸೆತಗಳಲ್ಲಿ 123ರನ್ ಗಳಿಸಿದರು.
ಚಹಾ ವಿರಾಮದ ನಂತರವೂ ವಿಕೆಟ್ ಬೀಳುವ ಲಕ್ಷಣಗಳು ಗೋಚರಿಸಲಿಲ್ಲ. ಹೀಗಾಗಿ ಉಭಯ ತಂಡಗಳ ನಾಯಕರು ಡ್ರಾ ಮಾಡಿಕೊಳ್ಳಲು ಸಮ್ಮತಿಸಿದರು.
ಸಂಕ್ಷಿಪ್ತ ಸ್ಕೋರ್: ಕರ್ನಾಟಕ: ಮೊದಲ ಇನಿಂಗ್ಸ್; 110.1 ಓವರ್‌ಗಳಲ್ಲಿ 371.
ಗೋವಾ: ಮೊದಲ ಇನಿಂಗ್ಸ್; 87.2 ಓವರ್‌ಗಳಲ್ಲಿ 217 (ಅರ್ಜುನ್ ತೆಂಡೂಲ್ಕರ್ 47, ಮೋಹಿತ್ ರೆಡ್ಕರ್ 53; ವಿದ್ವತ್ ಕಾವೇರಪ್ಪ 51ಕ್ಕೆ5, ಅಭಿಲಾಷ್ ಶೆಟ್ಟಿ 74ಕ್ಕೆ3, ಯಶೋವರ್ಧನ್ ಪರಂತಾಪ್ 18ಕ್ಕೆ1, ವೈಶಾಖ್ ವಿಜಯಕುಮಾರ್ 53ಕ್ಕೆ1).
ಗೋವಾ: ಎರಡನೇ ಇನಿಂಗ್ಸ್; 46 ಓವರ್‌ಗಳಲ್ಲಿ 1 ವಿಕೆಟ್‌ಗೆ 143 (ಮಂಥನ್ ಖುತ್ಕರ್ ಔಟಾಗದೆ 55, ಸುಯಶ್ ಪ್ರಭುದೇಸಾಯಿ 13, ಅಭಿನವ್ ತೇಜ್‌ರಾಣಾ ಔಟಾಗದೆ 73; ವೈಶಾಖ್ ವಿಜಯಕುಮಾರ್ 33ಕ್ಕೆ1).
ಫಲಿತಾಂಶ: ಪಂದ್ಯ ಡ್ರಾ. ಕರ್ನಾಟಕಕ್ಕೆ ಇನಿಂಗ್ಸ್ ಮುನ್ನಡೆ.
ಪಂದ್ಯಶ್ರೇಷ್ಠ: ಕರುಣ್ ನಾಯರ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.