ADVERTISEMENT

ಟೆಸ್ಟ್, ಸೀಮಿತ ಓವರ್‌ಗಳ ತಂಡಗಳಿಗೆ ಪ್ರತ್ಯೇಕ ನಾಯಕರ ನೇಮಕ: ರವಿಶಾಸ್ತ್ರಿ ಸ್ವಾಗತ

ಪಿಟಿಐ
Published 27 ಡಿಸೆಂಬರ್ 2021, 15:46 IST
Last Updated 27 ಡಿಸೆಂಬರ್ 2021, 15:46 IST
ರವಿ ಶಾಸ್ತ್ರಿ
ರವಿ ಶಾಸ್ತ್ರಿ   

ಮುಂಬೈ: ಭಾರತ ಟೆಸ್ಟ್ ಮತ್ತು ಸೀಮಿತ ಓವರ್‌ಗಳ ತಂಡಗಳಿಗೆ ಪ್ರತ್ಯೇಕ ನಾಯಕರನ್ನು ನೇಮಕ ಮಾಡಿರುವುದನ್ನು ಮಾಜಿ ಕ್ರಿಕೆಟಿಗ ರವಿಶಾಸ್ತ್ರಿ ಸ್ವಾಗತಿಸಿದ್ದಾರೆ.

ಟೆಸ್ಟ್ ತಂಡಕ್ಕೆ ವಿರಾಟ್ ಕೊಹ್ಲಿ ಮತ್ತು ಸೀಮಿತ ಓವರ್‌ಗಳ ತಂಡಕ್ಕೆರೋಹಿತ್ ಶರ್ಮಾ ಅವರನ್ನು ಈಚೆಗೆ ನೇಮಕ ಮಾಡಲಾಗಿದೆ. ಈ ಮೊದಲು ವಿರಾಟ್ ಮೂರು ಮಾದರಿಗಳ ತಂಡದ ನಾಯಕತ್ವ ವಹಿಸಿದ್ದರು.

‘ಕೋವಿಡ್ ಕಾಲಘಟ್ಟದಲ್ಲಿ ಕೆಲಸದ ಹೊರೆಯನ್ನು ಕಡಿಮೆ ಮಾಡಲು ಇಂತಹ ಕ್ರಮ ಅಗತ್ಯವಾಗಿದೆ. ಒಬ್ಬ ವ್ಯಕ್ತಿಯೇ ಎಲ್ಲವನ್ನೂ ನಿಭಾಯಿಸುವುದು ಕಷ್ಟ. ಬಯೋಬಬಲ್‌ ವ್ಯವಸ್ಥೆಯು ಮುಂದುವರಿಯುತ್ತ ಹೋದಂತೆ ಒತ್ತಡವೂ ಹೆಚ್ಚುತ್ತದೆ‘ ಎಂದು ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ‘ಬೋಲ್ಡ್ ಅ್ಯಂಡ್ ಬ್ರೇವ್: ದ ಶಾಸ್ತ್ರಿ ವೇ’ ಕಾರ್ಯಕ್ರಮದಲ್ಲಿ ಅವರು ಹೇಳಿದರು.

ADVERTISEMENT

‘ವಿರಾಟ್ ಮತ್ತು ನಾನು ಇಬ್ಬರೂ ಆಕ್ರಮಣಶೀಲ ಸ್ವಭಾವದವರು. ಪ್ರತಿಯೊಂದು ಪಂದ್ಯವನ್ನು ಜಯಿಸುವುದೇ ನಮ್ಮ ಗುರಿಯಾಗಿರುತ್ತಿತ್ತು. ಟೆಸ್ಟ್‌ ಪಂದ್ಯದಲ್ಲಿ ಜಯಿಸಬೇಕಾದರೆ 20 ವಿಕೆಟ್‌ಗಳನ್ನು ಗಳಿಸುವುದು ಮುಖ್ಯ ಎಂದು ನಿರ್ಧರಿಸಿದ್ದೆವು. ಅದಕ್ಕೆ ತಕ್ಕಂತೆ ಯೋಜನೆ ಹೆಣೆಯುತ್ತಿದ್ದೆವು’ ಎಂದು ಶಾಸ್ತ್ರಿ ಹೇಳಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.