ADVERTISEMENT

ಎಸ್‌ಪಿ ಸಂಸದೆ ಜತೆ ರಿಂಕು ಸಿಂಗ್‌ ನಿಶ್ಚಿತಾರ್ಥ ನಿಗದಿ

ಪಿಟಿಐ
Published 1 ಜೂನ್ 2025, 10:13 IST
Last Updated 1 ಜೂನ್ 2025, 10:13 IST
<div class="paragraphs"><p>ರಿಂಕು ಸಿಂಗ್, ಪ್ರಿಯಾ ಸರೋಜ್</p></div>

ರಿಂಕು ಸಿಂಗ್, ಪ್ರಿಯಾ ಸರೋಜ್

   

ಜೌನ್‌ಪುರ (ಉತ್ತರ ಪ್ರದೇಶ): ಕ್ರಿಕೆಟಿಗ ರಿಂಕು ಸಿಂಗ್‌ ಅವರು ಸಮಾಜವಾದಿ ಪಕ್ಷದ (ಎಸ್‌ಪಿ) ಸಂಸದೆ ಪ್ರಿಯಾ ಸರೋಜ್‌ ಅವರೊಂದಿಗೆ ಜೂನ್‌ 8ರಂದು ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ.

ಈ ಬಗ್ಗೆ ಪ್ರಿಯಾ ಅವರ ತಂದೆ, ಎಸ್‌ಪಿಯ ಹಿರಿಯ ನಾಯಕ ತೂಫಾನಿ ಸರೋಜ್‌ ಭಾನುವಾರ ಮಾಹಿತಿ ಹಂಚಿಕೊಂಡಿದ್ದಾರೆ.

ADVERTISEMENT

27 ವರ್ಷದ ರಿಂಕು ಸಿಂಗ್‌ ಅವರು ಭಾರತ ತಂಡದಲ್ಲಿ 2 ಏಕದಿನ ಪಂದ್ಯ ಹಾಗೂ 33 ಟಿ20 ಪಂದ್ಯಗಳಲ್ಲಿ ಆಡಿದ್ದಾರೆ. ಕೋಲ್ಕತ್ತ ನೈಟ್‌ ರೈಡರ್ಸ್‌ ತಂಡದ ಪ್ರಮುಖ ಆಟಗಾರರಾಗಿಯೂ ಗುರುತಿಸಿಕೊಂಡಿದ್ದಾರೆ. ಪ್ರಿಯಾ (26) ಅವರು ಜೌನ್‌ಪುರದ ಮಚಲೀಶಹರ್‌ ಕ್ಷೇತ್ರದಿಂದ ಮೊದಲಬಾರಿಗೆ ಸಂಸದೆಯಾಗಿ ಆಯ್ಕೆಯಾಗಿದ್ದಾರೆ.

‘ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಎರಡೂ ಕುಟುಂಬಗಳ ಆಪ್ತರು, ಸ್ನೇಹಿತರು ಹಾಗೂ ಸಂಬಂಧಿಕರು ಮಾತ್ರ ಭಾಗಿಯಾಗಲಿದ್ದಾರೆ. ವಾರಾಣಸಿಯ ತಾಜ್‌ ಹೋಟೆಲ್‌ನಲ್ಲಿ ನವೆಂಬರ್‌ 18ರಂದು ಸಾಂಪ್ರದಾಯಕ ರೀತಿಯಲ್ಲಿ ವಿವಾಹ ನಡೆಯಲಿದೆ’ ಎಂದು ತೂಫಾನಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.