ADVERTISEMENT

IPL 2026: ರಾಜಸ್ಥಾನ ರಾಯಲ್ಸ್‌ ನೂತನ ನಾಯಕನಾಗಿ ರಿಯಾನ್ ಪರಾಗ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಫೆಬ್ರುವರಿ 2026, 13:31 IST
Last Updated 13 ಫೆಬ್ರುವರಿ 2026, 13:31 IST
<div class="paragraphs"><p>ರಿಯಾನ್ ಪರಾಗ್</p></div>

ರಿಯಾನ್ ಪರಾಗ್

   

ನವದೆಹಲಿ: ಇಂಡಿಯನ್ ಪ್ರೀಮಿಯರ್‌ ಲೀಗ್(ಐಪಿಎಲ್) 19ನೇ ಆವೃತ್ತಿಗೆ ರಾಜಸ್ಥಾನ ರಾಯಲ್ಸ್‌ ತಂಡವು ನೂತನ ನಾಯಕನನ್ನು ಆಯ್ಕೆಮಾಡಿದೆ.

ರಾಜಸ್ಥಾನ ರಾಯಲ್ಸ್‌ ತಂಡದ ನಾಯಕನಾಗಿದ್ದ ಸಂಜು ಸ್ಯಾಮ್ಸನ್‌ ಅವರು ಚೆನ್ನೈ ಸೂಪರ್ ಕಿಂಗ್ಸ್(ಸಿಎಸ್‌ಕೆ) ತಂಡವನ್ನು ಸೇರಿಕೊಂಡಿದ್ದು, ಅವರ ಜಾಗಕ್ಕೆ ಭಾರತದ ಯುವ ಆಲ್‌ರೌಂಡರ್ ರಿಯಾನ್ ಪರಾಗ್ ಅವರನ್ನು ಐಪಿಎಲ್ ಮುಂದಿನ ಆವೃತ್ತಿಗೆ ನಾಯಕರನ್ನಾಗಿ ಆಯ್ಕೆಮಾಡಲಾಗಿದೆ.

ADVERTISEMENT

2019ರಲ್ಲಿ ಐಪಿಎಲ್‌ಗೆ ಪದಾರ್ಪಣೆ ಮಾಡಿದ್ದ ರಿಯಾನ್ ಪರಾಗ್ ಅವರು ಕಳೆದ 7 ಆವೃತ್ತಿಗಳಿಂದಲೂ ರಾಜಸ್ಥಾನ ರಾಯಲ್ಸ್‌ ಪರ ಆಡುತ್ತಿದ್ದಾರೆ. 84 ಪಂದ್ಯಗಳನ್ನು ಆಡಿರುವ ಪರಾಗ್, 141.84 ಸ್ಟ್ರೈಕ್‌ರೇಟ್‌ನಲ್ಲಿ 1566 ರನ್ ಗಳಿಸಿದ್ದಾರೆ. ಅದರಲ್ಲೂ 2024ನೇ ಆವೃತ್ತಿಯಲ್ಲಿ 573 ರನ್‌ ಗಳಿಸುವ ಮೂಲಕ ಮಿಂಚಿದ್ದರು.

ಕಳೆದ ಆವೃತ್ತಿಯಲ್ಲಿ ಸಂಜು ಸ್ಯಾಮ್ಸನ್‌ ಗಾಯಾಳಾಗಿದ್ದಾಗ 8 ಪಂದ್ಯಗಳಲ್ಲಿ ಪರಾಗ್, ತಂಡವನ್ನು ಮುನ್ನಡೆಸಿದ್ದರು. ಅದರಲ್ಲಿ 2 ಪಂದ್ಯಗಳಲ್ಲಷ್ಟೇ ತಂಡವನ್ನು ಗೆಲುವಿನ ಗಡಿ ದಾಟಿಸಿದ್ದರು. ತಂಡವು ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿ ತನ್ನ ಅಭಿಯಾನ ಕೊನೆಗೊಳಿಸಿತ್ತು.

19ನೇ ಆವೃತ್ತಿಗೆ ರವೀಂದ್ರ ಜಡೇಜಾ, ಯಶಸ್ವಿ ಜೈಸ್ವಾಲ್ ಅಥವಾ ಸ್ಯಾಮ್ ಕರನ್ ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡಬಹುದು ಎಂದು ಕ್ರಿಕೆಟ್ ಪ್ರೇಮಿಗಳು ಊಹಿಸಿದ್ದರು. ಆದರೆ, ಇದೀಗ ಪರಾಗ್ ಅವರನ್ನು ನಾಯಕರನ್ನಾಗಿ ಆಯ್ಕೆಮಾಡಲಾಗಿದೆ.

ರಾಜಸ್ಥಾನ ರಾಯಲ್ಸ್‌ ಕೋಚ್ ಆಗಿದ್ದ ರಾಹುಲ್ ದ್ರಾವಿಡ್ ಅವರು ಕೂಡ ತಂಡದಿಂದ ಹೊರನಡೆದಿದ್ದು, ಕುಮಾರ ಸಂಗಕ್ಕಾರ ಅವರನ್ನು ಮುಖ್ಯಕೋಚ್ ಆಗಿ ನೇಮಕ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.