ರೋಹಿತ್ ಶರ್ಮಾ
(ಚಿತ್ರ ಕೃಪೆ: X@StarSportsIndia)
ಮೆಲ್ಬರ್ನ್: ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಅವರಿಗೆ ಅಭ್ಯಾಸದ ಅವಧಿಯಲ್ಲಿ ಮೊಣಕಾಲಿಗೆ ಪೆಟ್ಟಾಗಿದೆ.
ಟೀಮ್ ಇಂಡಿಯಾ ಬಲಗೈ ವೇಗದ ಬೌಲರ್ ಆಕಾಶ್ ದೀಪ್ ಅವರ ಕೈಗೆ ಗಾಯವಾಗಿದೆ ಎಂದು ವರದಿಯಾಗಿದೆ.
ಆದರೆ ರೋಹಿತ್ ಹಾಗೂ ಆಕಾಶ್ ದೀಪ್ ಗಾಯದ ಬಗ್ಗೆ ಆತಂಕಪಡುವ ಅಗತ್ಯವಿಲ್ಲ. ಇಬ್ಬರು ಡಿಸೆಂಬರ್ 26ರಂದು ಮೆಲ್ಬರ್ನ್‌ನಲ್ಲಿ ಆರಂಭವಾಗಲಿರುವ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಕ್ಕೆ ಲಭ್ಯವಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ಥ್ರೋಟೌನ್ ಅಭ್ಯಾಸದ ವೇಳೆ ಇಬ್ಬರಿಗೂ ಗಾಯವಾಗಿದೆ. ನೋವಿನ ಹೊರತಾಗಿಯೂ ನೆಟ್ಸ್‌ನಲ್ಲಿ ರೋಹಿತ್ ಅಭ್ಯಾಸವನ್ನು ಮುಂದುವರಿಸಿದರು.
ಬಳಿಕ ಫಿಸಿಯೋ ತಜ್ಞರಿಂದ ನೆರವು ಪಡೆದರು. ಸ್ವಲ್ಪ ಹೊತ್ತು ಕುರ್ಚಿಯಲ್ಲಿ ಕುಳಿತು, ಮೊಣಕಾಲಿಗೆ ಐಸ್ ಇಟ್ಟು ವಿಶ್ರಾಂತಿಯನ್ನು ಪಡೆದರು.
'ಅಭ್ಯಾಸದ ವೇಳೆ ಇಂತಹ ಘಟನೆಗಳು ಸಾಮಾನ್ಯವಾಗಿದೆ. ಆತಂಕಪಡಬೇಕಾಗಿಲ್ಲ' ಎಂದು ಸುದ್ದಿಗೋಷ್ಠಿಯಲ್ಲಿ ಆಕಾಶ್ ವಿವರಣೆ ನೀಡಿದ್ದು, ಗಾಯದ ಆತಂಕ ದೂರವಾಗಿದೆ.
37 ವರ್ಷದ ರೋಹಿತ್, ಪಿತೃತ್ವದ ರಜೆಯ ಹಿನ್ನೆಲೆಯಲ್ಲಿ ಮೊದಲ ಪಂದ್ಯದಲ್ಲಿ ಆಡಿರಲಿಲ್ಲ. ಬಳಿಕದ ಎರಡೂ ಪಂದ್ಯಗಳಲ್ಲಿ ಬ್ಯಾಟಿಂಗ್ ವೈಫಲ್ಯ (3,6,10) ಅನುಭವಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.