
ನವದೆಹಲಿ: ಐಸಿಸಿ ಏಕದಿನ ಮಹಿಳಾ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ ಅವರನ್ನು ಸೀನಿಯರ್ ಅಂತರ ವಲಯ ಟಿ20 ಟ್ರೋಫಿಗೆ ಉತ್ತರ ವಲಯ ತಂಡದ ನಾಯಕಿಯಾಗಿ ಆಯ್ಕೆ ಮಾಡಲಾಗಿದೆ. ಈ ಟೂರ್ನಮೆಂಟ್ ನವೆಂಬರ್ 4ರಿಂದ ನಾಗಾಲ್ಯಾಂಡ್‌ನಲ್ಲಿ ಪ್ರಾರಂಭವಾಗಲಿದೆ.
ಭಾನುವಾರ ನಡೆದ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಭಾರತದ ಪರ ಆರಂಭಿಕರಾಗಿ ಬ್ಯಾಟಿಂಗ್ ಮಾಡಿದ ಶಫಾಲಿ ವರ್ಮಾ 87 ರನ್ ಬಾರಿಸಿದರು. ಜೊತೆಗೆ ಬೌಲಿಂಗ್‌ನಲ್ಲೂ ಮಿಂಚಿದ ಅವರು 2 ಪ್ರಮುಖ ವಿಕೆಟ್ ಪಡೆದುಕೊಂಡು ಭಾರತ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಹಾಗಾಗಿ ಅವರು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.
ನವೆಂಬರ್ 4 ರಿಂದ 14ರವರೆಗೆ ನಾಗಾಲ್ಯಾಂಡ್‌ನಲ್ಲಿ ನಡೆಯಲಿರುವ ಸೀನಿಯರ್ ಮಹಿಳಾ ಅಂತರ ವಲಯ ಟಿ20 ಟ್ರೋಫಿಯಲ್ಲಿ 6 ತಂಡಗಳು ಸ್ಪರ್ಧಿಸಲಿವೆ. ಬಿಸಿಸಿಐನ ವಲಯ ಆಯ್ಕೆ ಸಮಿತಿಗಳು ಆಯಾ ತಂಡಗಳನ್ನು ಆಯ್ಕೆ ಮಾಡಿವೆ. ಇದರಲ್ಲಿ ಉತ್ತರ ವಲಯ ತಂಡಕ್ಕೆ ಶಫಾಲಿ ನಾಯಕಿಯಾಗಿದ್ದಾರೆ.
ಉತ್ತರ ವಲಯ: ಶಫಾಲಿ ವರ್ಮಾ (ನಾಯಕಿ), ಶ್ವೇತಾ ಸೆಹ್ರಾವತ್ (ಉಪ ನಾಯಕಿ), ದೀಯಾ ಯಾದವ್, ಆಯುಷಿ ಸೋನಿ, ತನಿಯಾ ಭಾಟಿಯಾ (ವಿಕೆಟ್ ಕೀಪರ್), ಎಸ್.ಎಂ. ಸಿಂಗ್, ಭಾರತಿ ರಾವಲ್, ಬವನ್‌ದೀಪ್ ಕೌರ್, ಮನ್ನತ್ ಕಶ್ಯಪ್, ಅಮನದೀಪ್ ಕೌರ್, ಕೋಮಲ್‌ಪ್ರೀತ್ ಕೌರ್, ಅನನ್ಯಾ ಶರ್ಮಾ, ಸೋನಿ ಯಾದವ್, ನಜ್ಮಾ, ನಂದಿನಿ ತಂಡದಲ್ಲಿದ್ದಾರೆ.
ಕೇಂದ್ರ ವಲಯ: ನುಝತ್ ಪರ್ವೀನ್ (ನಾಯಕಿ ಮತ್ತು ವಿಕೆಟ್ ಕೀಪರ್) ನಿಕಿತಾ ಸಿಂಗ್ (ಉಪನಾಯಕಿ), ಸಿಮ್ರಾನ್ ದಿಲ್‌ಬಹದ್ದೂರ್, ನೇಹಾ ಬದ್ವೈಕ್, ಅನುಷ್ಕಾ ಶರ್ಮಾ, ವೈಷ್ಣವಿ ಶರ್ಮಾ, ಶುಚಿ ಉಪಾಧ್ಯಾಯ, ಅನನ್ಯಾ ದುಬೆ, ಮೋನಾ ಮೆಶ್ರಮ್, ಸುಮನ್ ಮೀನಾ, ದಿಶಾ ಕಸತ್, ಸಂಪದಾ ದೀಕ್ಷಿತ್, ಅಂಜಲಿ ಸಿಂಗ್, ಅಮಿಶಾ ಬಹುಖಂಡಿ, ನಂದನಿ ಕಶ್ಯಪ್ (ವಿಕೆಟ್ ಕೀಪರ್).
ಪೂರ್ವ ವಲಯ: ಮಿತಾ ಪೌಲ್ (ನಾಯಕಿ), ಅಶ್ವನಿ ಕುಮಾರಿ (ಉಪನಾಯಕಿ), ಪ್ರಿಯಾಂಕಾ ಲೂತ್ರಾ, ಧಾರಾ ಗುಜ್ಜರ್, ತನುಶ್ರೀ ಸರ್ಕಾರ್, ರಶ್ಮಿ ಗುಧಿಯಾ (ವಿಕೆಟ್ ಕೀಪರ್), ಜಿಂತಿಮಣಿ ಕಲಿತಾ, ರಶ್ಮಿ ದೇ, ತನ್ಮಯೀ ಬೆಹೆರಾ, ಸುಶ್ರೀ ದಿಬ್ಯದರ್ಶಿನಿ, ಟಿಟಾಸ್ ಸಾಹು, ಸೈಕಾ ಇಶಾಕ್, ಆರ್ತಿ ಕುಮಾರಿ, ಮಮತಾ ಪಾಸ್ವಾನ್, ಪ್ರಿಯಾಂಕ ಆಚರ್ಜಿ.
ಈಶಾನ್ಯ ವಲಯ: ದೇಬಸ್ಮಿತಾ ದತ್ತಾ (ನಾಯಕಿ), ನಬಮ್ ಯಾಪು (ಉಪನಾಯಕಿ), ಕಿರಣಬಾಲಾ ಹಾರುಂಗ್‌ಬಾಮ್, ಲಾಲ್ರಿನ್‌ಫೆಲಿ ಪೌಟು, ರಿಟಿಸಿಯಾ ನೊಂಗ್‌ಬೆಟ್, ನಜ್ಮೀನ್ ಖಾತುನ್ (ವಿಕೆಟ್ ಕೀಪರ್)), ಸಮಾಯಿತ ಪ್ರಧಾನ್, ಪ್ರಿಯಾಂಕಾ ಕುರ್ಮಿ, ವಿಪೇನಿ, ನಂದಿಕಾ ಕುಮಾರಿ, ನಬಮ್ ಅಭಿ, ಪ್ರಣಿತಾ ಚೆಟ್ರಿ, ಸೊಲಿನ ಜಬಮ ಪ್ರಿಮುಲ ಚೆಟ್ರಿ, ರಂಜಿತಾ ಕೋಯಿಜಾಮ್.
ಪಶ್ಚಿಮ ವಲಯ: ಅನುಜಾ ಪಾಟೀಲ್ (ನಾಯಕಿ), ಸಯಾಲಿ ಸತ್ಘರೆ (ವಿಕೆಟ್ ಕೀಪರ್), ಪೂನಮ್ ಖೇಮ್ನಾರ್, ಧರಣಿ ಥಪ್ಪೆಟ್ಲಾ, ತೇಜಲ್ ಹಸಬ್ನಿಸ್, ಸೈಮಾ ಠಾಕೋರ್, ಹುಮೈರಾ ಕಾಜಿ, ಇರಾ ಜಾಧವ್, ಕಿರಣ್ ನವಗಿರೆ, ಅಮೃತಾ ಜೋಸೆಫ್, ಕೇಶ ಪಟೇಲ್, ಅರ್ಷಿಯಾ ಧಾರಿವಾಲ್, ಉಮೇಶ್ವರಿ ಜೇಥ್ವಾ (ವಿಕೆಟ್ ಕೀಪರ್), ಸಿಮ್ರಾನ್ ಪಟೇಲ್, ಇಶಿತ ಖಾಳೆ.
ದಕ್ಷಿಣ ವಲಯ: ನಿಕಿ ಪ್ರಸಾದ್ (ನಾಯಕಿ), ಸಬ್ಬಿನೇನಿ ಮೇಘನಾ (ಉಪನಾಯಲಿ), ಜಿ. ಕಮಲಿನಿ (ವಿಕೆಟ್ ಕೀಪರ್), ವೃಂದಾ ದಿನೇಶ್, ಕೆ. ಯುವಶ್ರೀ, ಆಶಾ ಸೋಭಾನ, ಚಳ್ಳೂರು ಪ್ರತ್ಯೂಷಾ, ಪ್ರಣವಿ ಚಂದ್ರ, ಸಹನಾ ಪವಾರ್, ಸಯಾಲಿ ಅನಿಲ್ ಲೋಂಕರ್, ಮಡಿವಾಳ ಮಮತಾ (ವಿಕೆಟ್ ಕೀಪರ್), ಸಜನಾ ಸಜೀವನ್, ಮೊನಿಕಾ ಪಟೇಲ್, ಶಭ್‌ನಮ್ ಶಕಿಲ್, ಅನುಷಾ ಸುದರೆಸನ್ ಇದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.