ADVERTISEMENT

ಶುಭಾಂಗ್‌ ಆಲ್‌ರೌಂಡ್‌ ಆಟ: ನಾಕೌಟ್‌ ಹಂತಕ್ಕೆ ಕರ್ನಾಟಕ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2021, 19:44 IST
Last Updated 28 ನವೆಂಬರ್ 2021, 19:44 IST
ಶುಭಾಂಗ್ ಹೆಗಡೆ– ಪ್ರಜಾವಾಣಿ ಚಿತ್ರ
ಶುಭಾಂಗ್ ಹೆಗಡೆ– ಪ್ರಜಾವಾಣಿ ಚಿತ್ರ   

ಬೆಂಗಳೂರು: ಶುಭಾಂಗ್‌ ಹೆಗ್ಡೆ (37ಕ್ಕೆ 3 ವಿಕೆಟ್‌, ಔಟಾಗದೆ 44 ರನ್‌) ಅವರ ಆಲ್‌ರೌಂಡ್‌ ಆಟದ ನೆರವಿನಿಂದ ಕರ್ನಾಟಕ ತಂಡವು 25 ವರ್ಷದೊಳಗಿನವರ ಬಿಸಿಸಿಐ ಏಕದಿನ ಟ್ರೋಫಿ ಕ್ರಿಕೆಟ್‌ ಟೂರ್ನಿಯಲ್ಲಿ ಜಯ ಗಳಿಸಿತು. ಒಡಿಶಾ ತಂಡವನ್ನು ನಾಲ್ಕು ವಿಕೆಟ್‌ಗಳಿಂದ ಮಣಿಸಿ ನಾಕೌಟ್‌ ಹಂತಕ್ಕೆ ಪ್ರವೇಶಿಸಿತು.

ರಾಜ್‌ಕೋಟ್‌ನ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಒಡಿಶಾ 8 ವಿಕೆಟ್‌ ಕಳೆದುಕೊಂಡು 244 ರನ್‌ ಗಳಿಸಿತು. ಶುಭಂಕರ್ ಬಿಸ್ವಾಸ್‌ ಗಳಿಸಿದ ಶತಕದ (ಔಟಾಗದೆ 102, 122ಎ, 4X13) ನೆರವಿನಿಂದ ತಂಡವು ಸವಾಲಿನ ಮೊತ್ತ ಕಲೆಹಾಕಲು ಸಾಧ್ಯವಾಯಿತು.

ಗುರಿ ಬೆನ್ನತ್ತಿದ ಕರ್ನಾಟಕ ತಂಡವು ಒಂದು ಓವರ್ ಬಾಕಿ ಇರುವಂತೆಯೇ ಆರು ವಿಕೆಟ್‌ ಕಳೆದುಕೊಂಡು ಜಯ ಸಾಧಿಸಿತು. ಕಿಶನ್ ಎಸ್‌. ಬೆದಾರೆ ಅರ್ಧಶತಕ (54) ಶಿವಕುಮಾರ್ ಬಿ.ಯು. (49) ಮತ್ತು ಶುಭಾಂಗ್‌ ಅವರ ಭರ್ಜರಿ ಬ್ಯಾಟಿಂಗ್‌ ತಂಡದ ಗೆಲುವಿಗೆ ಕಾರಣವಾದವು.

ADVERTISEMENT

ಕರ್ನಾಟಕ ತಂಡವು ಡಿಸೆಂಬರ್ 3ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯದಲ್ಲಿ ಅಸ್ಸಾಂ ತಂಡವನ್ನು ಎದುರಿಸಲಿದೆ.

ಸಂಕ್ಷಿಪ್ತ ಸ್ಕೋರು: ಒಡಿಶಾ:50 ಓವರ್‌ಗಳಲ್ಲಿ 8 ವಿಕೆಟ್‌ಗೆ 244 (ಸಂದೀಪ್ ಪಟ್ನಾಯಿಕ್‌ 28, ಶುಭಂ ಕರ್ ಬಿಸ್ವಾಸ್ ಔಟಾಗದೆ 102, ರಂಜಿತ್ ಪೈಕರಾಯ್‌ 28; ಅಭಿಲಾಷ್ ಶೆಟ್ಟಿ 48ಕ್ಕೆ 2, ಆದಿತ್ಯ ಗೋಯಲ್‌ 50ಕ್ಕೆ 2, ಶುಭಾಂಗ್ ಹೆಗ್ಡೆ 37ಕ್ಕೆ 3). ಕರ್ನಾಟಕ: 49 ಓವರ್‌ಗಳಲ್ಲಿ 6 ವಿಕೆಟ್‌ಗೆ 247 (ಶಿವಕುಮಾರ್ ಬಿ.ಯು. 49, ಲೋಚನ್ ಅಪ್ಪಣ್ಣ 35, ಕಿಶನ್ ಎಸ್‌. ಬೆದಾರೆ 54, ಶುಭಾಂಗ್ ಹೆಗ್ಡೆ ಔಟಾಗದೆ 44; ತರಣಿ ಎಸ್‌.ಎ. 51ಕ್ಕೆ 3, ಹರ್ಷಿತ್ ರಾಥೋಡ್‌ 42ಕ್ಕೆ 2).

ಫಲಿತಾಂಶ: ಕರ್ನಾಟಕ ತಂಡಕ್ಕೆ 4 ವಿಕೆಟ್‌ಗಳ ಜಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.